Tuesday, April 9, 2024

ಸ್ವಾಮಿ ವಿವೇಕಾನಂದ ಫ್ರೆಂಡ್ಸ್ ಸರ್ಕಲ್ ರಾಯಿ ಇದರ ನೇತೃತ್ವದಲ್ಲಿ ಸಮಾಲೋಚನ ಸಭೆ

ಸ್ವಾಮಿ ವಿವೇಕಾನಂದ ಫ್ರೆಂಡ್ಸ್ ಸರ್ಕಲ್ ರಾಯಿ ಇದರ ನೇತೃತ್ವದಲ್ಲಿ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ರಾಯಿಯನ್ನು ಸರಕಾರಿ ಶಾಲೆ ಉಳಿಸಿ ಬೆಳೆಸುವ ಸಮಾಲೋಚನ ಸಭೆಯ ಮೂರನೇ ಸಭೆಯು ಇಂದು ರಾಯಿ ಶಾಲೆಯಲ್ಲಿ ನಡೆಯಿತು .

ಈ ಸಭೆಯಲ್ಲಿ ಬೇಸಿಗೆ ಶಿಬಿರವನ್ನು ಕೈಗೊಳ್ಳುವುದು, ಈ ಗ್ರಾಮದಿಂದ ಹೊರಗಡೆ ಶಾಲೆಗಳಿಗೆ ಹೋಗುತ್ತಿರುವ ಮಕ್ಕಳನ್ನು ಗಣತಿ ಮಾಡುವುದು, ಸಂಸ್ಕಾರದ ಭಾಗವನ್ನು ಮಕ್ಕಳಿಗೆ ಕಲಿಸುವುದು, ಶಾಲಾ ಅಭಿವೃದ್ಧಿಗೆ ಸಹಕರಿಸುವ ದಾನಿಗಳ ಗಳನ್ನು ನೆನಪಿನಲ್ಲಿಡುವಂತೆ ಶಾಲೆಯ ಪ್ರಗತಿಯ ಕುರಿತಾಗಿ ಅವರಿಗೆ ಸೂಚನೆಗಳನ್ನು ಅಥವ ನೋಟಿಸ್ ಗಳನ್ನು ಅಂಚೆ ಮೂಲಕ ಕಳುಹಿಸಿ ನಿರಂತರ ಸಹಕಾರ ಸಿಗುವಂತೆ ನೋಡಿಕೊಳ್ಳುವುದು, ಹೆಚ್ಚಿನ ಜವಾಬ್ದಾರಿಯನ್ನು ಊರಿನವರು ತೆಗೆದುಕೊಳ್ಳುವುದು, ಟ್ರಸ್ಟಿಗಳು ಮತ್ತು ಟ್ರಸ್ಟ್ ನ ಸದಸ್ಯರು ಗಳನ್ನು ಮಾಡುವಾಗ ಉತ್ತಮ ಜ್ಞಾನವುಳ್ಳ ವ್ಯಕ್ತಿಗಳನ್ನು ಪರಿಗಣಿಸುವುದು, ಹಳೆ ವಿದ್ಯಾರ್ಥಿಗಳ ಪಟ್ಟಿಯನ್ನು ಕಲೆ ಹಾಕುವುದು, ಆಂಗ್ಲ ಭಾಷೆಯ ಜೊತೆಗೆ ಜ್ಞಾನಾಧಾರಿತ ಶಿಕ್ಷಣ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುವುದು, ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ(CSR) ಆಧಾರದಲ್ಲಿ ಕಂಪೆನಿಗಳ ಸಹಕಾರವನ್ನು ತೆಗೆದುಕೊಳ್ಳುವುದು, ಶಾಲೆಯಲ್ಲಿ ಹಲವು ರೀತಿಯ ಸ್ಪರ್ಧೆಗಳನ್ನು ಆಯೋಜಿಸಿ ಕಾರ್ಯಕ್ರಮಗಳಿಗೆ ಊರಿನವರನ್ನು ವಿದ್ಯಾಭಿಮಾನಿಗಳು ಹಳೆ ವಿದ್ಯಾರ್ಥಿಗಳನ್ನು ದಾನಿಗಳನ್ನು ಆಹ್ವಾನಿಸುವುದು, ತಿಂಗಳಿಗೊಮ್ಮೆ ಸಂಪನ್ಮೂಲ ವ್ಯಕ್ತಿಗಳನ್ನು ಶಾಲೆಗೆ ಕರೆದು ವಿದ್ಯಾರ್ಥಿಗಳಿಗೆ ಮೌಲ್ಯಯುತ ಮಾಹಿತಿಯನ್ನು ನೀಡುವುದು, ಶಾಲೆಗೆ ವಿದ್ಯಾರ್ಥಿಗಳನ್ನು ಕರೆತರಲು ಶಾಲಾ ಬಸ್ ಅಥವ ಬೇರೆ ವಾಹನವನ್ನು ಒದಗಿಸುವುದು, ಟ್ರಸ್ಟ್ ನ ಹಣಕಾಸಿನ ವಿಷಯದ ಕುರಿತಾಗಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು .

ಸಭೆಯ ಅಧ್ಯಕ್ಷತೆಯನ್ನು ಶ್ರೀನಿವಾಸ ಸಪಲ್ಯ ಉಪಾಧ್ಯಕ್ಷರು ಅಡೋರ್ ಫೈನಾನ್ಸ್ ಮುಂಬೈ ವಹಿಸಿದ್ದರು .

ವೇದಿಕೆಯಲ್ಲಿ ಉದ್ಯಮಿಗಳಾದ ರಾಜೇಶ್ ಶೆಟ್ಟಿ ಮತ್ತು ರೂಪಾ ರಾಜೇಶ್ ಶೆಟ್ಟಿ ಸೀತಾಳ ಶ್ರೀ ಸಾಯಿ ಎಸ್ಟೇಟ್ ರಾಯಿ ಸೀತಾಳ, ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನ ಆನಂದ ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಪದ್ಮನಾಭ , ಸ್ವಾಮಿ ವಿವೇಕಾನಂದ ಫ್ರೆಂಡ್ಸ್ ಸರ್ಕಲ್ ಅದ್ಯಕ್ಷ ಚಂದ್ರಶೇಖರಗೌಡ , ರಾಯಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಸಂತೋಷ್ ಕುಮಾರ್ ರಾಯಿಬೆಟ್ಟು, ಸಂತೋಷ್ ಗೌಡ ಗೋಳಿತ್ತೊಟ್ಟು, ಎಸ್.ಡಿ.ಎಂ.ಸಿ.ಅಧ್ಯಕ್ಷ ರಮೇಶ್ ಗೌಡ , ನಿವೃತ್ತ ಶಿಕ್ಷಕರಾದ ವಸಂತಗೌಡ ಮುದ್ದಾ ಜೆ , ಸೋಮಪ್ಪ ಮಡಿವಾಳ, ಮುಖ್ಯ ಶಿಕ್ಷಕ ಜಯರಾಮ ಪಡ್ರೆ, ಸ್ವಾಮಿ ವಿವೇಕಾನಂದ ಫ್ರೆಂಡ್ಸ್ ಸರ್ಕಲ್ ಸ್ಥಾಪಕ ಹರೀಶ ಆಚಾರ್ಯ ರಾಯಿ, ರಾಯಿ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಪ್ರದೀಪ್ ಗೌಡ, ಪ್ರಮುಖರಾದ ಪರಮೇಶ್ವರ ಪೂಜಾರಿ , ಮಧುಕರ ಬಂಗೇರ ಶಿವನಗರ ಪುಷ್ಪಲತಾ ಎಸ್.ಆರ್ ರೂಪ ಹರೀಶ , ಎಸ್ ಕಾಲೇಜ್ ಬಂಟ್ವಾಳ, ರಾಘವ ಅಮೀನ್. ರಾಯಿಮೋಹನ್ ಕೆ ಶ್ರೀಯಾನ್ ಜಾನೆಟ್ ಕೊನ್ಸೆಸೊ ಉಪಸ್ಥಿತರಿದ್ದರು .

More from the blog

ವೀರಕಂಬ ಗ್ರಾಮದ ಗ್ರಾಮದೈವ ಶ್ರೀ ಗಿಳಿಕಿಂಜತಾಯಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಗ್ರಾಮದೈವ ಶ್ರೀ ಗಿಳಿಕಿಂಜತಾಯಿ ದೇವಸ್ಥಾನದ ವರ್ಷವದಿ ಜಾತ್ರೆಯು ಊರ ಪರವೂರ ಭಕ್ತದಿಗಳ ಸೇರಿಗೆಯಲ್ಲಿ ವಿಜೃಂಭಣೆಯಿಂದ ಜರಗಿತು. ದಿನಾಂಕ 7-4-2024 ರ ರಾತ್ರಿ ಗಿಳಿಕಿಂಜ ಬಂಡಾರ ಮನೆಯಿಂದ ದೈವದ ಬಂಡಾರ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...

ದಕ್ಷಿಣ ಕನ್ನಡ: ಪಕ್ಷೇತರ ಅಭ್ಯರ್ಥಿ ನಾಮಪತ್ರ ವಾಪಸ್‌ : 9 ಅಭ್ಯರ್ಥಿಗಳು ಕಣದಲ್ಲಿ

ಮಂಗಳೂರು: ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದು, ಒಟ್ಟು ಒಂಬತ್ತು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ 11 ಮಂದಿಯ ಪೈಕಿ 10 ಅಭ್ಯರ್ಥಿಗಳ...

ಪ್ರಕೃತಿಯಲ್ಲಿ ಒಂದಿಲ್ಲೊಂದು ವಿಸ್ಮಯ : ಈ ರೀತಿಯ ಕಿತ್ತಾಳೆ ಹಣ್ಣು ನೋಡಿದ್ದೀರಾ…

ಬಂಟ್ವಾಳ: ಪಕೃತಿಯಲ್ಲಿ ಆಗೊಮ್ಮೆ ಈಗೊಮ್ಮೆ ವಿಚಿತ್ರ ಸಂಗತಿಗಳು ಕಾಣಸಿಗುತ್ತವೆ. ಹಾಗೇಯೆ ಇಲ್ಲೊಂದು ಕಿತ್ತಾಳೆ ಹಣ್ಣು ತನ್ನ ರೂಪದಲ್ಲಿ ಸ್ವಲ್ಪ ಮಟ್ಟಿಗೆ ವಿಚಿತ್ರ ಕಂಡಿದೆ. ಮಾಮೂಲಿಯಾಗಿ ಕಿತ್ತಾಳೆ ಬಣ್ಣ ಮತ್ತು ಆಕಾರದಲ್ಲಿ ಒಂದೇ ಆಗಿರುತ್ತದೆ. ಆದರೆ...