ಮಂಗಳೂರು; ದ.ಕ, ಉಡುಪಿ ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಮಂಗಳೂರು ಇದರ ವತಿಯಿಂದ ನಡೆದ ಸಂಘದ ಮಹಾಸಭೆಯಲ್ಲಿ ಗ್ಯಾರೇಜು ಮಾಲಕರ ಸಂಘ ಬಂಟ್ವಾಳ ವಯಕ್ಕೆ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಳೆದ ಎರಡು ವರ್ಷಗಳಲ್ಲಿ ಬಂಟ್ವಾಳ ವಲಯವು ಹಲವಾರು ಜನಪರ ಸೇವೆ, ವೃತ್ತಿಭಾಂದವರಿಗೆ ಸಹಾಯ ಹಸ್ತ, ಸಾಧಕರಿಗೆ ಗೌರವ, ಆರ್ಥಿಕವಾಗಿ ಸಂಘದ ಸಾಧನೆಯನ್ನು ಗಮನಿಸಿ ಬಂಟ್ವಾಳ ವಲಯಕ್ಕೆ ಚಟುವಟಿಕೆಗಳಲ್ಲಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಳೆದ ಆರು ವರ್ಷಗಳಲ್ಲಿ ಮೂರು ಬಾರಿ ನೀಡಿದ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನ ಬಂಟ್ವಾಳಕ್ಕೆ ಬಂದಿರುವುದು ವಿಶೇಷವಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಚೇರ್ಮೆನ್ ಪುಂಡಲೀಕ ಸುವರ್ಣ, ಅಧ್ಯಕ್ಷರಾದ ದಿನೇಶ್ ಕುಮಾರ್, ಗ್ಯಾರೇಜು ಮಾಲಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಜನಾರ್ದನ್ ಅತ್ತಾವರ ಹಾಗು ಜಿಲ್ಲಾ ಸಂಘದ ಪ್ರಮುಖರು ಉಪಸ್ಥಿತರಿದ್ದರು.