Friday, October 27, 2023

ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾ ಪೋಷಿತ ಯಕ್ಷಗಾನ ಮಂಡಳಿಯ ತಿರುಗಾಟ ಆರಂಭ

Must read

ಬೆಳ್ತಂಗಡಿ: ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾ ಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ವರ್ಷದ ತಿರುಗಾಟ ಆರಂಭವಾಗಿದೆ.

ಈಗಾಗಲೇ ಧರ್ಮಸ್ಥಳದಲ್ಲಿ ಸೇವಾಕರ್ತರ ವತಿಯಿಂದ ಕೆಲವು ಹರಕೆ ಬಯಲಾಟಗಳು ಪ್ರದರ್ಶನಗೊಂಡಿದ್ದು, ಮುಂದೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತೀ ದಿನ ಸಂಜೆ 7ರಿಂದ ರಾತ್ರಿ 12 ಗಂಟೆಯ ವರೆಗೆ ಪ್ರದರ್ಶನ ನಡೆಯಲಿದೆ. 2023ರ ಮೇ 23ರ ಪ್ರದರ್ಶನದ ಬಳಿಕ 3 ದಿನ ಧರ್ಮಸ್ಥಳದಲ್ಲಿ ಸೇವಾ ಬಯಲಾಟದೊಂದಿಗೆ ತಿರುಗಾಟ ಕೊನೆಗೊಳ್ಳುತ್ತದೆ.

ಈ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್‌ ಹಾಗೂ ಸುಪ್ರಿಯಾ ಎಚ್‌. ಕುಮಾರ್‌ ಉಪಸ್ಥಿತರಿದ್ದರು.

More articles

Latest article