Monday, April 15, 2024

ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ

ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟ ಲೋಹಿತಾಶ್ವ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಹಿರಿಯ ನಟನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು

1942, ಆಗಸ್ಟ್ 5 ರಂದು ತುಮಕೂರು ಬಳಿಯಿರುವ ತೋಂಡಗೇರೆ ಗ್ರಾಮದಲ್ಲಿ ಜನಸಿದ್ದರು. ಲೋಹಿತಾಶ್ವ ಮೂವರು ಮಕ್ಕಳನ್ನ ಅಗಲಿದ್ದಾರೆ.

ಬರಗೂರು ರಾಮಚಂದ್ರಪ್ಪ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಲೋಹಿತಾಶ್ವ ಬಂದಿದ್ದರು. ಲೋಹಿತಾಶ್ವ ಮೊದಲ ಕಮರ್ಷಿಯಲ್‌ ಸಿನಿಮಾ ‘ಗೀತಾ’. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ನಾಲ್ಕು ದಿಗ್ಗಜ ನಟರ ಜೊತೆ ಲೋಹಿತಾಶ್ವ ನಟಿಸಿದ್ದರು. ಹಿರಿಯ ನಿರ್ದೇಶ ಬಿ.ಸೋಮಶೇಖರ್ ಅವರ ಬಹುತೇಕ ಸಿನಿಮಾಗಳಲ್ಲಿ ಲೋಹಿತಾಶ್ವ ನಟಿಸಿದ್ದಾರೆ. ಪರಶುರಾಮ, ಸಮಯದ ಗೊಂಬೆ ಸಿನಿಮಾಗಳಲ್ಲಿ ಅಣ್ಣಾವ್ರ ಜೊತೆ ನಟಿಸಿದ್ದರು. ಅಂಬರೀಶ್, ವಿಷ್ಣುವರ್ಧನ್, ಶಂಕರ್ ನಾಗ್ ಜೊತೆ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ನಾಳೆ ಹಿರಿಯ ನಟನ ಅಂತ್ಯಸಂಸ್ಕಾರ ನೆರವೇರಲಿದೆ.

More from the blog

ಪ್ರಧಾನಿ ಮೋದಿಯವರೇ.. ದಕ್ಷಿಣ ಕನ್ನಡಕ್ಕೆ ನೀವು ಕೊಟ್ಟದ್ದೆಷ್ಟು- ಸಿಎಂ ಪ್ರಶ್ನೆ

ಬೆಂಗಳೂರು: “ನನ್ನ ತೆರಿಗೆ ನನ್ನ ಹಕ್ಕು" ಅಭಿಯಾನದ ಮುಂದುವರಿದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಚುನಾವಣ ರ್‍ಯಾಲಿ ನಡೆಸಿದ ದಕ್ಷಿಣ ಕನ್ನಡಕ್ಕೆ ತಮ್ಮ ಕೊಡುಗೆಯ ಲೆಕ್ಕ ಕೊಡುವಂತೆ ಕಾಂಗ್ರೆಸ್‌ ಕೇಳಿದೆ. ಪ್ರಧಾನಿ ನರೇಂದ್ರ ಮೋದಿ...

ಶರಾಬು ಕುಡಿಯಲು ಆಕ್ಷೇಪ… ಯುವಕನಿಗೆ ಹಲ್ಲೆ : ದೂರು, ಪ್ರತಿದೂರು ದಾಖಲು

ಮಚ್ಚಿನ: ಹೊಟೇಲ್‌ ಕಾರ್ಮಿಕನನ್ನು ಶರಾಬು ಕುಡಿಯಲು ಕರೆಯಬಾರದು ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆಗೈದ ಘಟನೆ ಬೆಳ್ತಂಗಡಿ ತಾಲೂಕಿನ ಮಚ್ಚಿನದಲ್ಲಿ ಸಂಭವಿಸಿದೆ. ಮಚ್ಚಿನದ ಪ್ರತಿಭಾ ರೈ ಅವರ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರ ಅವರನ್ನು ಆರೋಪಿ...

ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಹಿಂದೂ ಯುವಸೇನೆಯ ಪುಷ್ಪರಾಜ್ ಜಕ್ರಿಬೆಟ್ಟು ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಶಾಸಕ ರಾಜೇಶ್ ನಾಯ್ಕ್

ಚೂರಿ ಇರಿತಕ್ಕೊಳಗಾಗಿ ಮಂಗಳೂರು ಏ.ಜೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಹಿಂದೂ ಯುವಸೇನೆಯ ಪುಷ್ಪರಾಜ್ ಜಕ್ರಿಬೆಟ್ಟು ಇವರನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿಯಾಗಿ ಆರೋಗ್ಯ ವಿಚಾರಿಸಿ,ಮುಂದಿನ ಚಿಕಿತ್ಸೆಯ ಬಗ್ಗೆ ವೈದ್ಯರುಗಳೊಂದಿಗೆ ಮಾಹಿತಿ ಪಡೆದರು.

ಹಿಂದೂ‌ ಸಂಘಟನೆಯ ಕಾರ್ಯಕರ್ತನಿಗೆ ಚೂರಿ ಇರಿತ

ಬಂಟ್ವಾಳ : ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಸ್ನೇಹಿತ ಚೂರಿಯಿಂದ ಇರಿದ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಈತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಿಂದೂಯುವಸೇನೆಯ ಮುಖಂಡನಾಗಿದ್ದು, ಉದ್ಯಮಿಯಾಗಿರುವ...