Wednesday, April 10, 2024

ನ.06ರಂದು ಕಟೀಲಮ್ಮನೆಡೆ ಭಕ್ತರ ನಡೆ ಪಾದಯಾತ್ರೆ- ಶ್ರೀ ಕಟೀಲು ಯಕ್ಷ ಸೇವಾ ಸಮನ್ವಯ ಸಮಿತಿ

ಯಕ್ಷಗಾನ ಪರಂಪರೆಯಂತೆ ಬೆಳಗ್ಗಿನವರೆಗೆ ಯಕ್ಷಗಾನ ಸೇವೆಯಾಟ ನಡೆಯಲೇಬೇಕು ಎಂದು ಆಗ್ರಹಿಸಿ ದಿನಾಂಕ ನ.06ರಂದು ಬೆಳಿಗ್ಗೆ 8.30 ರಿಂದ ಬಜಪೆ ಶ್ರೀ ಶಾರದಾ ಶಕ್ತಿ ಮಂಟಪದಿಂದ ಕಟೀಲಮ್ಮನೆಡೆ ಭಕ್ತರ ನಡೆ ಪಾದಯಾತ್ರೆಯನ್ನು ನಡೆಸಲಿದ್ದೇವೆ ಎಂದು ಶ್ರೀ ಕಟೀಲು ಯಕ್ಷ ಸೇವಾ ಸಮನ್ವಯ ಸಮಿತಿ ಹೇಳಿಕೆ ನೀಡಿದೆ.

ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಶ್ರೀ ಕಟೀಲು ಕ್ಷೇತ್ರದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯವರು (ಕಟೀಲು ಮೇಳ) ಆಡಿ ತೋರಿಸಲಿರುವ ಯಕ್ಷಗಾನವು ಶ್ರೀ ಕಟೀಲು ಅಮ್ಮನವರಿಗೆ ಅತ್ಯಂತ ಪ್ರಿಯವಾದ ಯಕ್ಷಗಾನ ಸೇವೆಯಾಗಿದೆ. ದೇವಸ್ಥಾನದ ಮೇಳದವರು ಕಳೆದೆರಡು ಶತಮಾನಗಳಿಂದ ನಡೆಸಿಕೊಂಡು ಬಂದಿರುವ ರಾತ್ರಿ ಯಕ್ಷಗಾನ ಸೇವೆಯಾಟಗಳನ್ನು ಏಕಪಕ್ಷೀಯವಾಗಿ ದಿಢೀರಾಗಿ ಸಂಜೆ 4.30ರಿಂದ ರಾತ್ರಿ 10 ರವರೆಗೆ ಕಾಲಮಿತಿಗೆ ಸೀಮಿತಗೊಳಿಸಿ ಮುಂದೆ ನಡೆಸುವುದಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ ದೇವಳದ ಆತುರದ ನಿರ್ಧಾರ ಭಕ್ತಾಧಿಗಳ ಮನಸ್ಸಿಗೆ ಆಘಾತ ಮಾಡಿದೆ ಎಂದು ಶ್ರೀ ಕಟೀಲು ಯಕ್ಷ ಸೇವಾ ಸಮನ್ವಯ ಸಮಿತಿ ಹೇಳಿಕೆ ನೀಡಿದೆ.

ಸಮಿತಿಯ ಪದಾಧಿಕಾರಿಗಳು ಭಕ್ತಾಧಿಗಳು ಕಷ್ಟ ಕಾರ್ಪಣ್ಯಗಳಿಗೆ ಒಳಗಾಗಿ ತ್ವರಿತ ಪರಿಹಾರವಾದಲ್ಲಿ ತಮ್ಮ ಕ್ಷೇತ್ರದಲ್ಲಿ ಬಯಲಾಟ ಆಡಿಸುವುದಾಗಿ ಹರಕೆ ಹೊತ್ತು ಊರಿನ ಹತ್ತು ಸಮಸ್ಥರು ಗ್ರಾಮದಲ್ಲಿ ದುಷ್ಟಾರಿಷ್ಟಗಳು ಕಳೆದು ಗ್ರಾಮ ರಾಷ್ಟ್ರಕ್ಕೆ ಸುಭಿಕ್ಷೆಯಾಗಲಿ ಎಂದು ಪ್ರಾರ್ಥಿಸಿ ಭಕ್ತಿ ಪುರಸ್ಸರವಾಗಿ ಶ್ರದ್ಧಾ ಭಕ್ತಿ ನಂಬಿಕೆ ಭಾವಪರವಶತೆಯಿಂದ ಪರಂಪರಾಗತವಾಗಿ ತುಳುನಾಡಿನ ಮಣ್ಣಿನ ಪ್ರತೀತಿಯಂತೆ ಸಮರ್ಪಿಸುವ ಸೇವೆ ಯಕ್ಷಗಾನ, ಕಟೀಲು ತಾಯಿ ರಾತ್ರಿಯ ಪೂಜೆಯ ನಂತರ ಕಟೀಲು ಮೇಳದ ಯಕ್ಷಗಾನ ವೀಕ್ಷಿಸಲು ತೆರಳುತ್ತಾಳೆ ಎಂಬುದು ಸಾರ್ವತ್ರಿಕ ನಂಬಿಕೆ. ಅಷ್ಟಮಂಗಲ ಪ್ರಶ್ನೆಯಲ್ಲೂ ಇದು ಶ್ರುತಗೊಂಡು ಕಟೀಲಿನ ಅಸ್ರಣ್ಣರು ಈ ಸತ್ಯವನ್ನು ತಾವು ಮಾಡುವ ಪ್ರಾರ್ಥನೆಯಲ್ಲೂ ಉಲ್ಲೇಖಿಸುವುದು ದಿಟ. ಕಟೀಲು ಮೇಳಕ್ಕೆ ಹರಕೆಯ ಯಕ್ಷಗಾನ ಬಯಲಾಟಗಳು ಹರಿದುಬರುವಷ್ಟು ಇತರ ಯಾವುದೇ ಮೇಳಗಳಿಗೂ ಬರುವುದಿಲ್ಲ. ಆದುದರಿಂದಲೇ 80ರ ದಶಕದಲ್ಲಿ ಒಂದೇ ಮೇಳವಾಗಿದ್ದ ಕಟೀಲು ಮೇಳ ಭಕ್ತಾಧಿಗಳ ಅವಶ್ಯಕತೆ ಪೂರೈಸಲು ಇಂದು 6 ಮೇಳಗಳಿಗೆ ಹೆಚ್ಚಿಸಿಕೊಂಡಿದೆ. ಕಾಲಮಿತಿ ಯಕ್ಷಗಾನ ನಿರ್ಧಾರದಿಂದ ಮೂಲ ಆಶಯ ಸೊರಗಿ ಜನರ ಧಾರ್ಮಿಕ ನಂಬಿಕೆಗೆ ಘಾಸಿಯಾಗಿದೆ. ಮಾತ್ರವಲ್ಲ ಪರಂಪರೆಗೆ ಧಕ್ಕೆ ತಂದಿದೆ. ಕಾಲಮಿತಿ ಆಟವಾದರೆ ಈ ಬಾರಿಯಿಂದಲೇ ಸೇವಾ ಬಯಲಾಟವನ್ನು ನಿಲ್ಲಿಸೋಣ ಎಂಬ ಪತ್ರಗಳನ್ನು ಈಗಾಗಲೇ ಸಂಬಂಧಿತರಿಗೆ ತಲುಪಿಸಿರುವ ಬಗ್ಗೆ ಮಾಹಿತಿ ಇದೆ. ಮತ್ತಷ್ಟು ಹತ್ತು ಸಮಸ್ತರು ವರ್ಷಂಪ್ರತಿ ನಡೆಸಲಿರುವ ಸೇವೆಯನ್ನು ಬೇರೆ ಮೇಳಗಳಿಂದ ಮಾಡಿಸುವ ಯಾ ಶ್ರೀದೇವಿಗೆ ಕಾಣಿಕೆ ಹಾಕಿ ಪ್ರಾರ್ಥಿಸುವ ಯಾ ಇನ್ನಿತರ ವಿಧಗಳಲ್ಲಿ ಹರಕೆ ತೀರಿಸಲು ನಿರ್ಧರಿಸಿರುವುದು ಗಮನಕ್ಕೆ ಬಂದಿದೆ. ಅರ್ಧಂಬರ್ಧ ಸೇವೆ ಮಾಡುವುದಕ್ಕಿಂತ ಸೇವೆಯನ್ನು ನಿಲ್ಲಿಸೋಣ ಎಂದು ಹೇಳುತ್ತಿರುವುದು ನೊಂದ ಭಕ್ತರ ಮನದಾಳದ ನೋವನ್ನು ವ್ಯಕ್ತಪಡಿಸುತ್ತದೆ. ಯಾವುದೇ ಕಾರಣಕ್ಕೂ ಯಕ್ಷಗಾನ ಸೇವೆಯನ್ನು ಮೊಟಕುಗೊಳಿಸಿ ಶ್ರೀದೇವಿಗೆ ಅರ್ಪಿಸುವ ಸೇವೆಯಲ್ಲಿ ನ್ಯೂನತೆ ಅಪಚಾರ ಸಲ್ಲದು ಎಂದು ಸೇವಾದಾರರು ವಾದಿಸುತ್ತಿದ್ದಾರೆ. ಕೆಲವೊಂದು ಕಡೆಗಳಲ್ಲಿ ಅರ್ಧ ಆಟಕ್ಕೆ ಅರ್ಧ ವೀಳ್ಯ ನಿಗದಿಪಡಿಸಲಿ, ಮಾಡದ ಕೆಲಸಕ್ಕೆ ಪಾವತಿ ಏಕೆ’ ಎಂಬ ಮಾತುಗಳು ಕೇಳಿ ಬರುತ್ತಿದೆ. ಜಿಲ್ಲೆ, ರಾಜ್ಯ, ಹೊರರಾಜ್ಯಗಳಲ್ಲೂ ಭಕ್ತಾಧಿಗಳು ತಮ್ಮ ಭಾವನೆಗಳನ್ನು ತುಂಬಾ ನೋವಿನಿಂದ ಪ್ರಕಟಪಡಿಸುತ್ತಿದ್ದಾರೆ ಎಂದರೆ ಈ ನಿರ್ಧಾರ ಅದೆಷ್ಟು ಜನರ ಶ್ರದ್ಧಾಭಕ್ತಿಯನ್ನು ಘಾಸಿಗೊಳಿಸಿದೆ ಎಂಬುವುದನ್ನು ಪರಾಂಬರಿಸಬಹುದು.

ಕಟೀಲು ಮೇಳದವರ ಈ ಆಘಾತಕಾರಿ ನಿರ್ಧಾರದಿಂದ ನೊಂದ ಸಹಸ್ರಾರು ಭಕ್ತಾಧಿಗಳು ನಮ್ಮ ಸಮಿತಿಯ ನೇತೃತ್ವದಲ್ಲಿ, ಯಕ್ಷಗಾನ ಪರಂಪರೆಯಂತೆ ಬೆಳಗ್ಗಿನವರೆಗೆ ನಡೆಯಲೇಬೇಕು ಎಂದು ಆಗ್ರಹಿಸಿ ದಿನಾಂಕ 06.11.2022ರಂದು ಬೆಳಿಗ್ಗೆ 8.30 ರಿಂದ ಬಜಪೆ ಶ್ರೀ ಶಾರದಾ ಶಕ್ತಿ ಮಂಟಪದಿಂದ ಕಟೀಲಮ್ಮನೆಡೆ ಭಕ್ತರ ನಡೆ’, ಪಾದಯಾತ್ರೆಯನ್ನು ನಡೆಸಲಿದ್ದೇವೆ. ಹಾಗೂ ಶ್ರೀದೇವಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸುವವರಿದ್ದೇವೆ. ಕಾರ್ಯಕ್ರಮದಲ್ಲಿ 8000 ಕ್ಕೂ ಅಧಿಕ ಮಂದಿ ಭಕ್ತಾದಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಅಶೋಕ ಕೃಷ್ಣಾಪುರ, ಲೋಕನಾಥ ಶೆಟ್ಟಿ, ಕೃಷ್ಣಪ್ಪ ಪೂಜಾರಿ, ಪಿ. ಸುಧಾಕರ ಕಾಮತ್, ಮೋಹನ್ ಶೆಟ್ಟಿ ಬಜಪೆ, ದುರ್ಗಾಪ್ರಸಾದ್ ಹೊಳ್ಳ ಹರೀಶ್ ಶೆಟ್ಟಿ, ಮರಕಡ ಗುರುಪ್ರಸಾದ್ ಹೊಳ್ಳ, ಪಾಂಡುರಂಗ ಕುಕ್ಯಾನ್ ಅಣ್ಣಪ್ಪ ದೇವಾಡಿಗ ಉಪಸ್ಥಿತರಿದ್ದರು.

More from the blog

ಎ.14ರ ಪ್ರಧಾನಿ ಮೋದಿ ಸಮಾವೇಶ ರದ್ದು : ರೋಡ್ ಶೋದಲ್ಲಿ ಮಾತ್ರ ಭಾಗಿ

ಮಂಗಳೂರು: ಏಪ್ರಿಲ್ 14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶಕ್ಕೆ ಆಯೋಜನೆ ಮಾಡಲಾಗಿತ್ತು. ಆದರೆ ಇದೀಗ ಕೊನೆ ಕ್ಷಣದಲ್ಲಿ ಈ ಸಮಾವೇಶ ರದ್ದುಪಡಿಸಲಾಗಿದೆ. ಏಪ್ರಿಲ್ 14ರಂದು ಮಂಗಳೂರಿನಲ್ಲಿ...

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...