Friday, April 5, 2024

ಅಧಿಕಾರಿಗಳು ಸರಿ ಇದ್ದರೆ ಪಟ್ಟಣ ಪಂಚಾಯತ್ ದಾರಿ ತಪ್ಪಲು ಸಾಧ್ಯವಿಲ್ಲ-ಶಕುಂತಳಾ ಟಿ. ಶೆಟ್ಟಿ

ವಿಟ್ಲ: ಅಧಿಕಾರಿಗಳು ಸರಿ ಇದ್ದರೆ ಪಟ್ಟಣ ಪಂಚಾಯತ್ ದಾರಿ ತಪ್ಪಲು ಸಾಧ್ಯವಿಲ್ಲ. ಬಡವರಿಗೆ, ಅನ್ಯಾಯಕ್ಕೆ ಒಳಗಾದವರಿಗೆ ಸಹಕಾರ ನೀಡಿ ಕೆಲಸ ನಿರ್ವಹಿಸಿ. ವರ್ಕ್ ಆರ್ಡರ್ ಕೊಡದೆ ಯಾರೇ ಕೆಲಸ ಮಾಡಿಸಿದ್ದರು ಅದು ತಪ್ಪು. ರಾಜಕೀಯದವರ ಮಾತು ಕೇಳಿ ಅಧಿಕಾರಿಗಳು ಕೆಡಬೇಡಿ. ನೀವು ಬಡವರಿಗೆ ಮಾಡಿದ ಸಹಾಯಗಳು ನಿಮ್ಮನ್ನು ರಕ್ಷಿಸುತ್ತದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿರವರು ಹೇಳಿದರು.

ಅವರು ವಿಟ್ಲ ಪಟ್ಟಣ ಪಂಚಾಯತ್ ನ ದುರವಸ್ಥೆಯ ವಿರುದ್ಧ ವಿಟ್ಲ – ಉಪ್ಪಿನಗಂಡಿ ಬ್ಲಾಕ್ ಕಾಂಗ್ರೆಸ್ ಹಾಗೂ ವಿಟ್ಲ ನಗರ ಪಂಚಾಯತ್ ವತಿಯಿಂದ ವಿಟ್ಲ ಪಟ್ಟಣ ಪಂಚಾಯತ್ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಮಸ್ಯೆಗಳ ಕೂಪವಾಗಿ ವಿಟ್ಲ ಪಟ್ಟಣ ಮಾರ್ಪಾಡಾಗಿದೆ. ಸಮಸ್ಯೆ ಯಿಂದ ಕಂಗಾಲಾದ ಜನ ಅವರ ಕಷ್ಟಗಳನ್ನು ನಮ್ಮಲ್ಲಿ ಹೇಳುವ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ಅದ್ದರಿಂದ ಬಿಜೆಪಿಯ ಕಾರ್ಯವೈಖರಿ ಏನೆಂಬುದು ಜನರಿಗೆ ಮನದಟ್ಟಾಗಿದೆ. ಜನ ಏಳದಿದ್ದರೆ ಸರಕಾರ ಎಚ್ಚೆತ್ತುಕೊಳ್ಳುವುದಿಲ್ಲ. ವಿಟ್ಲ ದಲ್ಲಿ ಡಿಗ್ರಿ ಕಾಲೇಜು ಇದೆ,  ಐಟಿಐ‌ ಇದೆ, ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣವಿದೆ, ಪಟ್ಟಣ ಪಂಚಾಯತ್ ಇದೆ ಎಲ್ಲವನ್ನು ತಂದದ್ದು ಕಾಂಗ್ರೆಸ್. ಇವರು ಮಾಡಿದ್ದು ಯಾವುದೂ ಇಲ್ಲ. ಎಲ್ಲವೂ ಕಾಂಗ್ರೆಸ್ ಆಳ್ವಿಕೆಯಲ್ಲಿ ಬಂದಾಗಿದೆ. ಸಿಂಗಲ್ ಸೈಟ್ ಗೆ ಬೇರೆ ಪಟ್ಟಣ ಪಂಚಾಯತ್ ನಲ್ಲಿ ಪರವಾನಿಗೆ ನೀಡಲಾಗುತ್ತಿದೆಯಾದರೂ ಇಲ್ಲಿನ ಅಧಿಕಾರಿಗಳು ನೀಡುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬರೆಯುವವರು ಸೊಲ್ಪ ಯೋಚನೆ ಮಾಡಿ. ಮೊನ್ನೆ ಒಬ್ಬರು ನಮ್ಮ ಮಹಿಳಾ ಕಾರ್ಯಕರ್ತೆಯ ಬಗ್ಗೆ ಬರೆದ್ರು ಅದರಲ್ಲಿ ಶೆಟ್ರು ಒಳಗೆ ಹೊದ್ರು ಬಟ್ರು ನಿರೀಕ್ಷಣ ಜಾಮೀನಿನಲ್ಲಿ ಹೊರಬಂದ್ರು. ಯಾರೇ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ರೂ ಠಾಣೆಗೆ ದೂರು ನೀಡಿ. ಮುಂದಿನ ಆರು ತಿಂಗಳಲ್ಲಿ ನಾವು ಅಧಿಕಾರಕ್ಕೆ ಬರಲಿದ್ದೇವೆ ಎಂದರು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ.ರವರು ಮಾತನಾಡಿ ಪಟ್ಟಣ ಪಂಚಾಯತ್ ಗೆ ಚುನಾವಣೆ ನಡೆದು ಒಂದು ವರ್ಷವಾಗಿದೆ ಆದರೆ ಈವರೆಗೆ ಅದಕ್ಕೆ ಅಧ್ಯಕ್ಷರ ಆಯ್ಕೆಯಾಗಿಲ್ಲ. ವರುಷವಾಗುತ್ತಾ ಬಂದರೂ ಪಟ್ಟಣ ಪಂಚಾಯತ್ ಗೆ ಒಂದು ಅಧ್ಯಕ್ಷ ಉಪಾಧ್ಯಕ್ಷನ ಆಯ್ಕೆಯಾಗಿಲ್ಲ ಎಂದಾದರೆ ಅದು ಬಿಜೆಪಿ ಆಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪಟ್ಟಣ ಪಂಚಾಯತ್ ನಲ್ಲಿ ಬಹುಮತ ಹೇಗೆ ಬಂದಿದೆ ಎಂದು ಬಿ.ಜೆ.ಪಿ.ಗರಿಗೆ ಗೊತ್ತಿದೆ. ನಮ್ಮಲ್ಲಿರುವ ಸದಸ್ಯರು ಪ್ರಾಮಾಣಿಕವಾಗಿ ಅವರವರ ವಾರ್ಡ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಉಪಟಳ ನೀಡಲು ಯಾರೂ ಹೋಗಬೇಡಿ. ಬಹುಮತವಿರುವ ಪಕ್ಷದವರಾದ ತಾವುಗಳು ರಾಜಧರ್ಮವನ್ನು ಪಾಲಿಸುವ ಮೂಲಕ ಸಮಾಜದ ಸೇವೆ ಮಾಡಿ. ಯಾರೇ ಕೆಲಸ ಮಾಡಿದರು ಅದು ಸರಕಾರದ ಹಣವಾಗಿದೆ. ಮನೆಯಿಂದ ಅಡಿಕೆ ಮಾರಿದ ಹಣವಲ್ಲ. ಜನ ಸೇವೆ ಗೆ ಸಿಗುವ ಅವಕಾಶವನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಿ. ಕಾಂಗ್ರೆಸ್ ಪಕ್ಷದಲ್ಲಿ ಈ ಹಿಂದೆ ಇದ್ದ ಅಶೋಕ್ ಕುಮಾರ್ ಶೆಟ್ಟಿರವರು ಇದೀಗ ಬಿಜೆಪಿ ಪಕ್ಷಕ್ಕೆ ಸೇರಿ ಅಲ್ಲಿ ಚುನಾವಣೆಯಲ್ಲಿ ಗೆದ್ದಮೇಲೆ ನಮ್ಮ ಪಕ್ಷದ ಸದಸ್ಯೆಗೆ ಕಿರುಕುಳ ನೀಡುತ್ತಿದ್ದಾರೆ. ಇದು ನಿಮ್ಮ ಧರ್ಮವಾ ಸ್ವಾಮೀ. ಯಾರದೇ ಸೌಜನ್ಯವನ್ನು ದೌರ್ಬಲ್ಯ ಎಂದು ತಿಳಿಯಬೇಡಿ ಎಂದವರು ಎಚ್ಚರಿಕೆ ನೀಡಿದರು. ನಮ್ಮ ಪಕ್ಷದ ಪಂಚಾಯತ್ ಸದಸ್ಯರುಗಳ ಕಾರ್ಯ ವೈಖರಿಯನ್ನು ಕಂಡು ಅವರಿಗೆ  ಇದೀಗಾಗಲೇ ಬಿಜೆಪಿ ಪಕ್ಷದವರಿಂದ ಪತ್ರಗಳು ಬರಲಾರಂಭಿಸಿದೆ. ನಮ್ಮ ಪಕ್ಷದ ಸದಸ್ಯರು ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡವರು  ಅವರು ಎಲ್ಲಿಗೂ ಬರಲಾರರು. ನಿಮ್ಮ ಹುಚ್ಚುಕನಸನ್ನು ಬಿಟ್ಟುಬಿಡಿ ಎಂದರು ಅವರು ಹೇಳಿದರು.

ಕೆಪಿಸಿಸಿ ಕಾರ್ಯದರ್ಶಿ ಸದಸ್ಯ ಎಂ.ಎಸ್. ಮಹಮ್ಮದ್ ರವರು ಮಾತನಾಡಿ ನಮ್ಮ ಪ್ರತಿಭಟನೆಯ ಕೂಗು ಸರಕಾರಕ್ಕೆ ಕೇಳಲಿಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಇವರಿಗೆ ಕಣ್ಣು, ಕಿವಿ, ಹೃದಯ ಶ್ರೀಮಂತಿಕೆಯೇ ಇಲ್ಲದ ಬಿಜೆಪಿ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ.  ಪಟ್ಟಣ ಪಂಚಾಯತ್ ಚುನಾವಣೆ ಆಗಿ‌ ಹನ್ನೊಂದು ತಿಂಗಳಾಯಿತು. ಆದರೆ ಈವರೆಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಯಾವುದೇ ಸಮಸ್ಯೆಗಳಿದ್ದರೂ ಕೂಡಾ ಅದನ್ನು ನಿವಾರಿಸಿ ವಿಟ್ಲ ಪಟ್ಟಣ ಪಂಚಯತ್ ಗೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ತರುವಂತಹ ಇಚ್ಛಾಶಕ್ತಿ ರಾಜ್ಯ ಸರಕಾರಕ್ಕೆ ಇಲ್ಲಾದಾಯಿತೆ ಎಂದವರು ಪ್ರಶ್ನಿಸಿದರು. ಕಬಕ- ವಿಟ್ಲ ರಸ್ತೆ ಕಾಮಗಾರಿಯನ್ನು ಅದಷ್ಟು ಬೇಗ ಕೈಗೆತ್ತಿಕೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು. ವಿಟ್ಲ ಪಟ್ಟಣ ಪಂಚಾಯತ್ ಇಂದು ಅಸ್ಥಿತ್ವವನ್ನು ಕಳೆದುಕೊಳ್ಳಿತ್ತಿದೆ. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾಗಿ ತನ್ನ ಜವಾಬ್ದಾರಿಯನ್ನು ಮಾಡಲಿದೆ. ಪಟ್ಟಣ ಪಂಚಾಯತ್ ನ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರರೀತಿಯಲ್ಲಿ ಪ್ರತಿಭಟನೆ ನಡೆಸಾಲಾಗುವುದು. ಬಿಜೆಪಿಯ ಎಲ್ಲಾ ಜನಪ್ರತಿನಿಧಿಗಳು ಸ್ವಾರ್ಥಿಗಳು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಲಿದೆ. ಜನರ ನೋವಿಗೆ ಸ್ಪಂಧಿಸುವ ಕೆಲಸ ನಮ್ಮಿಂದ ಆಗಲಿದೆ. ಹಣವಿಲ್ಲದೆ ಯಾವುದೇ ಸರಕಾರಿ ಕಚೇರಿಯಲ್ಲಿ ಕೆಲಸವಾಗುವುದಿಲ್ಲ. ಇದಕ್ಕೆ ರಾಜ್ಯಾಸರಕಾರವೇ ನೇರ ಕಾರಣ ಎಂದು ಅವರು ಆರೋಪಿಸಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ಬಿ. ವಿಶ್ವನಾಥ ರೈರವರು ಮಾತನಾಡಿ ವಿಟ್ಲ ಪಟ್ಟಣ ಪಂಚಾಯತ್ ಗೆ ಚುನಾವಣೆ ನಡೆದು ಹನ್ನೊಂದು ತಿಂಗಳಾಯಿತು. ಈವರೆಗೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರೀಯೆ ನಡೆದಿಲ್ಲ. ಆದ್ರಿಂದ ಇಲ್ಲಿ ನಡೆಯುತ್ತಿರುವ ಕೆಲಸಗಳೆಲ್ಲವೂ ಅಧಿಕಾರಿಗಳ ಕಾರುಬಾರಿನಿಂದ ಆಗುತ್ತಿರುವುದು. ತಾರತಮ್ಯ ಮಾಡುವ ಅಧಿಕಾರ ಅದು ಅಧಿಕಾರಿಗಳಿಗಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವಂತಹ ವ್ಯವಸ್ಥೆಯಲ್ಲಿ ಅಧಿಕಾರಿಗಳಿರಬೇಕು. ವಿಟ್ಲ ಪಟ್ಟಣ ಪಂಚಾಯತ್ ಅವ್ಯವಸ್ಥೆಯ ಕೂಪವಾಗಿದೆ. ಈ ಸರಕಾರದ‌ ೪೦ಶೇಕಡಾ ಕಮೀಶನ್ ನಲ್ಲಿ ಶಾಸಕರೂ ಕೂಡಾ ಶಾಮೀಲಾಗಿದ್ದಾರೆ. ವಿಟ್ಲ ಪಟ್ಟಣ ಪಂಚಯತ್ ನಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯದಿರುವುದು ಸರಕಾರದ ನಿಷ್ಕ್ರೀಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಬ್ರಷ್ಟಾಚಾರ ಎಲ್ಲೆಲ್ಲೂ ತಾಂಡವವಾಡುತ್ತಿದೆ ಎಂದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲುರವರು ಮಾತನಾಡಿ ಗ್ರಾಮ ಪಂಚಾಯತ್ ವ್ಯವಸ್ಥೆ ನಾವು ಪಟ್ಟಣ ಪಂಚಾಯತ್ ವ್ಯವಸ್ಥೆಯಲ್ಲಿ ನಾವು ವ್ಯತ್ಯಾಸ ಕಂಡಿಲ್ಲ.  ಪ್ರತಿಯೊಂದೂ ಸರಕಾರಿ ಕಚೇರಿಯ ಸಿಬ್ಬಂದಿಗಳಿಗೆ ಅವರದೇ ಆದ ಕರ್ತವ್ಯಗಳಿದೆ. ಆದರೆ ಶಾಸಕರು ಯಾರೂ ಅವರನ್ನು ಕೆಲಸ ಮಾಡಲು ಬಿಡುತ್ತಿಲ್ಲ. ಯಾಕೆಂದರೆ ಅವರಿಗೆ ಎಲ್ಲಾ ಸ್ಥಳೀಯ ಸಂಸ್ಥೆಗಳನ್ನು ನಿರ್ಜೀವ ಮಾಡಿ ಅಭ್ಯಾಸ. ವಿಕೇಂದ್ರೀ ಕರಣ ವ್ಯವಸ್ಥೆಯಲ್ಲಿ ಬಿಜೆಪಿಯವರಿಗೆ ನಂಬಿಕೆ ಇಲ್ಲ. ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಇವರಿದ್ದಾರೆ. ಎಲ್ಲರನ್ನು ನಿರ್ಜೀವಗೊಳಿಸಿ ಎಲ್ಲಾ ಅಧಿಕಾರವನ್ನು ಶಾಸಕರಿಗೆ ಕೇಂದ್ರೀಕರಿಸುವ ವ್ಯವಸ್ಥೆಯತ್ತ ಅವರು ಹೋಗುತ್ತಿದ್ದಾರೆ. ಬಿಜೆಪಿಯ ನಾಯಕಾರ ಬೇಜವಬ್ದಾರಿ ನಿಲ್ಲಬೇಕು.ರಾಜ್ಯ ದಿಂದ ಪಟ್ಟಣದ ವರೆಗೆ ಮೋಸದಾಟ ನಡೆಯುತ್ತಿದೆ. ೪೦% ಸರಕಾರ ಬದಲಾಗಬೇಕಾಗಿದೆ.

ಜನರನ್ನು ಮೋಸದಿಂದ ಬಿಜೆಪಿಗೆ ಸೆಳೆಯುವ ಕೆಲಸವಾಗುತ್ತಿದೆ. ನಮ್ಮ ಕಾರ್ಯಕರ್ತರು ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡವರಾಗಿದ್ದಾರೆ ಎಂದರು.

ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲರವರು ಮಾತನಾಡಿ

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಶಾಸಕರ ಮುಖಾಂತರ ಉತ್ತಮ ಅಧಿಕಾರಿಗಳನ್ನು ಪಟ್ಟಣ ಪಂಚಾಯತ್ ಗೆ ನಿಯೋಜನೆ ಮಾಡಿ ಕೆಲಸ ಕಾರ್ಯಗಳನ್ನು ಮಾಡಲಾಗಿತ್ತು.

ಬ್ರಷ್ಠಾಚಾರ ವನ್ನು ಬೆಳೆಸಿಕೊಂಡು ಹೋಗುವ ಸರಕಾರ ನಮಗೆ ಬೇಕ. ಮುಖ್ಯಾಧಿಕಾರಿಗಳ ಎಡವಟ್ಟಿಗೆ ಬಡ ಜನರು ಬೆಲೆತೆರಬೇಕಾಗಿ ಬಂದಿದೆ. ಆಡಳಿತ ವ್ಯವಸ್ಥೆಯನ್ನು‌ಸರಿಪಡಿಸುವ ಕೆಲಸವಾಗಬೇಕು.

ಕಚೇರಿ ರಿನಿವೇಶನ್ ಗೆ ಇಟ್ಟ ಹಣವನ್ನು ರಸ್ತೆಗೆ ವಿನಿಯೋಗ ಮಾಡಿದ್ದಾರೆ. ಇವರಿಗೆ ಕಚೇರಿಯ ಕೆಲಸ ಬೇಡ. ಕಚೇರಿಯನ್ನು ವ್ಯವಸ್ಥಿತಗೊಳಿಸಿದರೆ ಅವರ ಕಳ್ಳಟಕ್ಕೆ ತೆರೆಬೀಳುತ್ತದೆ ಎಂದರು.

ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ್ ಶೆಟ್ಟಿ ಕೊಲ್ಯ, ಡಿಸಿಸಿ ಕಾರ್ಯದರ್ಶಿಗಳಾದ ಪ್ರವೀಣ್ ಚಂದ್ರ ಆಳ್ವ, ಮುರಳಿಧರ್ ರೈ ಮಠಂತಬೆಟ್ಟು, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ಬ್ಲಾಕ್ ವಕ್ತಾರರಾದ ರಮಾನಾಥ್ ವಿಟ್ಲ, ಪಟ್ಟಣ ಪಂಚಾಯತ್ ಸದಸ್ಯರಾದ ವಿ ಕೆ ಎಂ ಅಶ್ರಫ್, ಪಟ್ಟಣ ಪಂಚಾಯತ್ ಸದಸ್ಯರಾದ ಲತಾ ವೇಣಿ, ಪದ್ಮಿನಿ, ಡಿಕಯ್ಯ ಸುರುಳಿಮುಲೆ, ಪಕ್ಷದ ಪ್ರಮುಖರಾದ ಸುಬ್ರಹ್ಮಣ್ಯ ಗೌಡ ಹಣಿಯೂರು, ಅಬ್ದುಲ್ ಖಾದ್ರಿ, ಎಂ.ಕೆ. ಮುಸಾ, ಪದ್ಮನಾಭ ಪೂಜಾರಿ ಸಣ್ಣಗುತ್ತು, ಪ್ರಭಾಕರ್ ಭಟ್, ಜಗನ್ನಾಥ ಶೆಟ್ಟಿ ನಡುಮನೆ, ಕರೀಂ ಕುದ್ದುಪದವು, ಅಶ್ರಫ್ ಬಸ್ತಿಕಾರ್, ಅಬ್ದುಲ್ ರಹಿಮಾನ್ ಯುನಿಕ್, ನಝೀರ್ ಮಠ, ಮೋಹನ್ ಗುರ್ಜಿನಡ್ಕ, ಎಲ್ಯಣ್ಣ ಪೂಜಾರಿ ಮೈರುಂಡ, ರಾಮಣ್ಣ ಪಿಲಿಂಜ, ಅಬ್ದುಲ್ ರಹಿಮಾನ್ ಕುರಂಬಳ, ಶೈಕ್ ಅಲಿ, ರಾಜೀವ್ ಬಂಗೇರ, ಜಯಪ್ರಕಾಶ್ ಬದಿನಾರು, ಕೇಶವ ರೈ, ಅಭಿಷೇಕ್ ಬೆಳ್ಳಿಪ್ಪಾಡಿ, ಹಂಝ ವಿ ಕೆ ಎಂ, ಅಬ್ಬು ನವಗ್ರಾಮ, ಸುನಿತಾ ಕೋಟ್ಯಾನ್, ಸರೋಜ ಅಲಂಗಾರ್, ಸಂತೋಷ್ ಬಂಢಾರಿ, ಅಶೋಕ್ ಪೂಜಾರಿ NSD, ಅಶೋಕ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು

More from the blog

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...

ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ ತಾಲೂಕಿನ ಶಕ್ತಿಕೇಂದ್ರವಾದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಬಿಜೆಪಿ...

ಬೆಳ್ತಂಗಡಿ: ಆನ್ ಲೈನ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ವಂಚನೆ : ದೂರು ದಾಖಲು

ಬೆಳ್ತಂಗಡಿ: ಮಹಿಳೆಯೊಬ್ಬರಿಗೆ ಫೇಸ್‌ಬುಕ್‌ ಆಪ್‌ ಮೂಲಕ ಸಾಲ ನೀಡುವುದಾಗಿ ಅಪರಿಚಿತರರು ನಂಬಿಸಿ ವಂಚನೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದಲ್ಲಿ ನಡೆದಿದೆ. ವಂಚನೆಗೊಳಗಾದ ಮಹಿಳೆ ನೆಬಿಸಾ ಅವರು ಈ ಬಗ್ಗೆ ವೇಣೂರು ಪೋಲಿಸ್‌...