Sunday, April 14, 2024

ಬಿಜೆಪಿ ಸದಸ್ಯರಿಗೆ ಅಧಿಕಾರಿಯಿಂದ ಅಗೌರವ: ಸಾಮಾನ್ಯ ಸಭೆ ಹಾಜರಾಗದೆ, ಕಚೇರಿಯ ಹೊರಗಡೆ ನಿಂತುಕೊಂಡು ಆಕ್ರೋಶ ವ್ಯಕ್ತಪಡಿಸಿದ ಎ.ಗೋವಿಂದ ಪ್ರಭು

ಪುರಸಭೆಯ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಅವರು ಕಚೇರಿಗೆ ಬಂದರೆ ಕುಳಿತುಕೊಳ್ಳಲು ಖುರ್ಚಿ ಕೊಡಬಾರದು ಎಂದು ಪುರಸಭಾ ಮುಖ್ಯಾಧಿಕಾರಿ ಸ್ವಾಮಿ ಅವರು ಹೇಳಿದ ಪ್ರಕರಣಕ್ಕೆ ಆಡಳಿತ ಪಕ್ಷ ಮತ್ತು ಅಧ್ಯಕ್ಷ ರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಬಿಜೆಪಿ ಸದಸ್ಯರು ಪುರಸಭೆಯ ಸಾಮಾನ್ಯ ಸಭೆಗೆ ಹಾಜರಾಗದೆ ಹೊರಗಡೆ ನಿಂತುಕೊಂಡ ಘಟನೆ ನಡೆಯಿತು.

ವಿರೋಧ ಪಕ್ಷದ ಸದಸ್ಯರು ಇಲ್ಲದಯೇ ಸಭೆ ಆರಂಭವಾಗಿತ್ತು. ಆದರೆ ಸಭೆಯ ಮಧ್ಯೆ
ಮೈಕ್ ಸರಿ ಮಾಡಿ ಅಂತ ಹಲವು ಸಲ ಸಭೆಯಲ್ಲಿ ಹೇಳಿದರು ಪ್ರಯೋಜನವಾಗಿಲ್ಲ, ನೀವು ಮೈಕ್ ನಲ್ಲಿ ಓದಿಕೊಂಡು ಹೋಗುತ್ತಿರಾ? ಎಂದು ಆಕ್ರೋಶ ವ್ಯಕ್ತಪಡಿಸಿದ ಸದಸ್ಯ ಗಂಗಾಧರ ಪೂಜಾರಿ ಅವರು
ಬಳಿಕ ವಿರೋಧ ಪಕ್ಷದ ಸದಸ್ಯರು ಯಾಕೆ ಇಲ್ಲ ? ಎಂದು ಪ್ರಶ್ನಿಸಿದರು. ವಿರೋಧ ಪಕ್ಷದ ಸದಸ್ಯರು ಯಾಕೆ ಬಂದಿಲ್ಲ ಅವರ ಸಮಸ್ಯೆ ಏನು? ಏನು ನಡೆದಿದೆ ? ಯಾಕೆ ? ಕಾರಣ ಸ್ಪಷ್ಟವಾಗಿ ಸಭೆಗೆ ನೀಡಬೇಕು ಎಂದು ಜನಾರ್ದನ ಚೆಂಡ್ತಿಮಾರ್ ಪ್ರಶ್ನಿಸಿದರು.
ಸಭೆಯ ನೋಟೀಸ್ ನೀಡಿದ್ದೇವೆ ಸಭೆಗೆ ಹಾಜರಾಗದ ವಿಚಾರ ನಮಗೆ ಗೊತ್ತಿಲ್ಲ ಎಂದು ಪುರಸಭಾ ಅಧ್ಯಕ್ಷ ಸಭೆಗೆ ಸ್ಪಷ್ಟ ನೆ ನೀಡಿದರು. ಆ ರೀತಿಯಲ್ಲಿ ವಿರೋಧ ಪಕ್ಷದ ಸದಸ್ಯರು ಹೊರಗಡೆ ನಿಲ್ಲಿಸಿ ನಾವು ಸಭೆ ನಡೆಸುವುದು ಸರಿ ಅಲ್ಲ.. ಅವರ ಕ್ಷೇತ್ರದ ಸಮಸ್ಯೆ ಯ ಬಗ್ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಮಾನ್ಯ ಸಭೆ ನಡೆಸುವುದಾದರೆ ಎಲ್ಲಾ ಸದಸ್ಯರು ಸಭೆಯಲ್ಲಿ ಹಾಜರಾಗಿದರೆ ಮಾತ್ರ ಸಭೆ ಅರ್ಥಪೂರ್ಣ ವಾಗುತ್ತದೆ ಎಂದು ಹಿರಿಯ ಸದಸ್ಯ ರು ಸಭೆಯಲ್ಲಿ ವಿಚಾರ ತಿಳಿಸಿದರು.

ಬಳಿಕ ಸದಸ್ಯರ ಒತ್ತಾಯ ದ ಮೇರೆ ಗೆ ಅಧ್ಯಕ್ಷರು ಸದಸ್ಯರು ಹಾಗೂ ಮುಖ್ಯಾಧಿಕಾರಿ ಅವರು ಹೊರಗೆ ನಿಂತುಕೊಂಡಿದ್ದ ಬಿಜೆಪಿ ಸದಸ್ಯರ ಮನವೊಲಿಸಿ ಸಭೆಗೆ ಕರೆತತಲು ಶತಪ್ರಯತ್ನ ಮಾಡಿದರು.
ಸುಮಾರು ಅರ್ಧ ತಾಸಿಗಿಂತಲೂ ಹೆಚ್ಚು ಹೊತ್ತು ಮನವೊಲಿಸಲು ಪ್ರಯತ್ನಿಸಿದ ಹಿರಿಯ ಕಾಂಗ್ರೇಸ್ ಸದಸ್ಯ ಜನಾರ್ದನ ಚೆಂಡ್ತಿಮಾರ್ ಸಭೆಗೆ ಕರೆತರಲು ಯಶಸ್ವಿಯಾದರು.
ಅ ಬಳಿಕ ಸಭೆ ನಡೆಯಿತು.

More from the blog

ಪ್ರಧಾನಿ ಮೋದಿ ರೋಡ್ ಶೋಗೆ ಸಿದ್ಧತೆ : ರಸ್ತೆಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌

ಮಂಗಳೂರು: ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ ಶೋ ಇರುವ ಹಿನ್ನೆಲೆಯಲ್ಲಿ ಭಾರೀ ಪೊಲೀಸ್‌ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಶನಿವಾರ ಸಂಜೆಯಿಂದಲೇ ಪೊಲೀಸರು ಕಾರ್ಯ ನಿರತರಾಗಿದ್ದು, ಹೊಸದಿಲ್ಲಿಯಿಂದ ಆಗಮಿಸಿರುವ ಎಸ್‌ಪಿಜಿ ಅಧಿಕಾರಿಗಳು ರೋಡ್‌ ಶೋ...

ಮೊಸಳೆಯ ಹೊಟ್ಟೆಯಲ್ಲಿ 1 ಕೆ.ಜಿ ಪ್ಲಾಸ್ಟಿಕ್ ಪತ್ತೆ….! ತ್ಯಾಜ್ಯ ಜೀರ್ಣವಾಗದೆ ಮೊಸಳೆ ಸಾವು

ಸುಬ್ರಹ್ಮಣ್ಯ: ಕಡಬ ಸಮೀಪದ ಪುಳಿಕುಕ್ಕು ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ಮೊಸಳೆ ಸಾವಿಗೆ ತ್ಯಾಜ್ಯ ಸೇವನೆ ಹಾಗೂ ಪ್ಲಾಸ್ಟಿಕ್‌ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಕಡಬ-ಪಂಜ ಸಂಪರ್ಕ ರಸ್ತೆಯ ಪಂಜ ವಲಯ ಅರಣ್ಯ ವ್ಯಾಪ್ತಿಯ ಪುಳಿಕುಕ್ಕು...

ಬೋಳಾರ ಚೂರಿ ಇರಿತ ಪ್ರಕರಣ : ಆರೋಪಿ ಅರೆಸ್ಟ್

ಮಂಗಳೂರು: ಬೋಳಾರ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಆನಂದ್‌ ಸಪಲ್ಯ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಬೋಳಾರ್ ನಲ್ಲಿ ಕಟಿಂಗ್ ಶಾಪ್ ನಡೆಸುತ್ತಿರುವ ಎಡ್ವಿನ್ ವಿನಯ್ ಕುಮಾರ್ ಅವರಿಗೆ...

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ : ವಾರಸುದಾರರ ಪತ್ತೆಗೆ ಮನವಿ

ಬಂಟ್ವಾಳ: ಅಪರಿಚಿತ ವ್ಯಕ್ತಿಯೋರ್ವನ‌ ಮೃತದೇಹವೊಂದು ಸಜೀಪ ನಡು ಎಂಬಲ್ಲಿ ರಿಕ್ಷಾ ನಿಲ್ದಾಣದಲ್ಲಿ ಪತ್ತೆಯಾಗಿದೆ. ಸಜೀಪ ನಡು ಗ್ರಾಮದಲ್ಲಿ ನ ರಿಕ್ಷಾ ನಿಲ್ದಾಣದಲ್ಲಿ ಸುಮಾರು 45 ವರ್ಷದ ಗಂಡಸಿನ ಮೃತದೇಹ ಪತ್ತೆಯಾಗಿದ್ದು ಯಾವ ಕಾರಣದಿಂದ ಈತ...