ಸುರತ್ಕಲ್: ಇಲ್ಲಿನ ಜನ ವಿರೋಧಿ ಟೋಲ್ ಗೇಟ್ ತೆರವಿಗೆ ಒತ್ತಾಯಗಳು ತೀವ್ರಗೊಳ್ಳುತ್ತಿದ್ದಂತೆ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಟೋಲ್ ತೆರವಿನ ಟ್ವೀಟ್ ಮಾಡಿದ್ದು, ಅಧಿಕೃತ ಆದೇಶ ಬರುವ ತನಕ ಪ್ರತಿಭಟನೆ ಕೈಬಿಲ್ಲ ಎಂದು ಹೋರಾಟಗಾರ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಟೋಲ್‌ಗೇಟ್ ತೆರವಿನ ಕುರಿತು ನಳಿನ್ ಟ್ವೀಟ್ ಮಾಡಿದ್ದಾರೆ. ಮತ್ತೊಂದೆಡೆ ಸುರತ್ಕಲ್ ಟೋಲ್ ಮುಂಭಾಗ ಹೋರಾಟ ಸಮಿತಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಧಿಕೃತವಾಗಿ ಟೋಲ್ ಸಂಗ್ರಹ ನಿಲ್ಲಿಸುವ ತನಕ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದೆ.
ಸುರತ್ಕಲ್ ಟೋಲ್ ಕೇಂದ್ರದಲ್ಲಿ ಸುಂಕ ವಸೂಲಾತಿ ನಿಲ್ಲಿಸಬೇಕು. ಆ ಬಳಿಕ ಹೋರಾಟ ನಿಲ್ಲಿಸುತ್ತೇವೆ. ಹೆಜಮಾಡಿ ಟೋಲ್‌ನಲ್ಲಿ ಹೆಚ್ಚುವರಿ ಸುಂಕ ವಸೂಲಾತಿ ನಡೆಸಬಾರದು. ಟೋಲ್ ವಿಲೀನ ನೆಪದಲ್ಲಿ ಸುರತ್ಕಲ್ ನಲ್ಲಿ ಪಡೆಯುತ್ತಿದ್ದ ಸುಂಕವನ್ನೂ ಸೇರಿಸಿ ವಸೂಲಿ ಮಾಡಬಾರದೆಂದು ಹೋರಾಟಗಾರರು ಆಗ್ರಹಿಸಿದ್ದಾರೆ.