ಪದವಿ ಪೂರ್ವ ಶಿಕ್ಷಣ ಇಲಾಖೆ ದ.ಕ ಜಿಲ್ಲೆ, ತುಂಬೆ ಪದವಿ ಪೂರ್ವ ಕಾಲೇಜು, ತುಂಬೆ ಬಂಟ್ವಾಳ ತಾಲೂಕು ಮತ್ತು ಮದನಿ ಪದವಿ ಪೂರ್ವ ಕಾಲೇಜು ಅಳೇಕಲ ಉಳ್ಳಾಲ ತಾಲೂಕು ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟವು ಇತ್ತೀಚೆಗೆ ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ನಡೆಯಿತು.
ತುಂಬೆಯ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಸಲಾಂ ಅಧ್ಯಕ್ಷತೆ ವಹಿಸಿದ್ದರು. ತುಂಬೆ ಪದವಿ ಪೂರ್ವ
ಕಾಲೇಜಿನ ಪ್ರಾಂಶುಪಾಲರಾದ ಕೆ.ಎನ್.ಗಂಗಾಧರ ಆಳ್ವ ಸ್ವಾಗತಿಸಿ, ಪ್ರಸ್ತಾವನೆ ನೀಡಿದರು. ತುಂಬೆ ಪದವಿ ಪೂರ್ವ ಕಾಲೇಜಿನ
ವಿದ್ಯಾರ್ಥಿ ಆಸೀಫ್ ಕ್ರೀಡಾ ಪ್ರತಿಜ್ಞೆಯನ್ನು ನೆರವೇರಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು, ದ. ಕ. ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಶಾಖಾಧಿಕಾರಿ ನಿತಿನ್ ಬಿ. ಟಿ. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಾಂಶುಪಾಲರ ಸಂಘದ ಪದಾಧಿಕಾರಿಗಳಾದ ವಿಠಲ್, ಯೂಸುಫ್ ವಿಟ್ಲ, ಕವಿತಾ, ಸಯ್ಯದ್ ಮದನಿ ಪ. ಪೂ.ಕಾಲೇಜಿನ ಪ್ರಾಂಶುಪಾಲ ಇಸ್ಮಾಯಿಲ್, ದೈಹಿಕ ಶಿಕ್ಷಣ ಉಪನ್ಯಾಸಕ ಸಂಘದ ಪ್ರೇಮನಾಥ್ ಶೆಟ್ಟಿ, ಕ್ರೀಡಾಕೂಟದ ಸಂಯೋಜಕ
ಅರುಣ್ ಡಿ’ಸೋಜ, ತುಂಬೆ ಪದವಿ ಪೂರ್ವ ಕಾಲೇಜಿನ ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್ ಹಾಗೂ ಉಪನ್ಯಾಸಕ ದಿನೇಶ ಶೆಟ್ಟಿ ಅಳಿಕೆ,
ಜಗದೀಶ ರೈ ಬಿ., ನೀತಾಶ್ರೀ, ಅಖಿಲಾ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ನಿರೂಪಿಸಿ, ತುಂಬೆ ಪದವಿ ಪೂರ್ವ ಕಾಲೇಜಿನ ದೈಹಿಕ
ಶಿಕ್ಷಣ ನಿರ್ಧೇಶಕ ಸಾಯಿರಾಂ ನಾಯಕ್ ವಂದಿಸಿದರು.