ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ನಡೆಯುತ್ತಿರುವ ಜನಸ್ಪಂದನಾ ಕಾರ್ಯಕ್ರಮಗಳ ಸಮಾರೋಪದ ಬಳಿಕ ಜಿಲ್ಲಾ ಹಂತದ ಸಮಸ್ಯೆ ಗಳ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಸಹಿತ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಸತ್ಯಶ್ರೀ ಕಲ್ಯಾಣ ಮಂಟಪ ದಲ್ಲಿ ನಡೆದ ಗೋಳ್ತಮಜಲು ಜಿಲ್ಲಾ ಪಂಚಾಯತ್ ವ್ಯಾಪ್ತಿಯ 3 ನೇ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ಗ್ರಾಮ ಮಟ್ಟದಲ್ಲಿ ಆಯೋಜಿಸಲಾಗಿದ್ದು, ಬಹುತೇಕ ಎಲ್ಲಾ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಪ್ರಯತ್ನಿಸಲಾಗುವುದು, ಇನ್ನು ಜಿಲ್ಲಾ ಹಂತದ ಅಧಿಕಾರಿಗಳ ಮೂಲಕ ಪರಿಹಾರ ಮಾಡಬೇಕಾದ ಸಮಸ್ಯೆ ಗಳಿಗೆ ಪ್ರತ್ಯೇಕ ಸಭೆ ನಡೆಸಿ ಪರಿಹಾರಕ್ಕಾಗಿ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದರು .
ತಾಲೂಕು ತಹಶಿಲ್ದಾರ್ ಸ್ಮಿತಾರಾಮು ಮಾತನಾಡಿ, ಜನಗಳಿಗೆ ಸ್ಪಂದನೆ ಕೊಡುವ ಕರ್ನಾಟಕದ ವಿನೂತನ ಹಾಗೂ ಮೊದಲ ಯೋಚನೆಯ ಕಾರ್ಯಕ್ರಮವಾಗಿದೆ. ಅಹವಾಲು ಗಳನ್ನು ಆಲಿಸಿ ಸ್ಥಳದಲ್ಲೇ ವಿಲೇವಾರಿ ಮಾಡಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 408 ಮಂದಿಗೆ ತಾಲೂಕಿನ ವಿವಿಧ ಇಲಾಖೆಯಿಂದ ಸಿಗುವ ಯೋಜನೆಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು. ನರಿಕೊಂಬು ಗ್ರಾಮಪಂಚಾಯತ್ ಅಧ್ಯಕ್ಷೆ ವಿನುತಾಪುರುಷೋತ್ತಮ ಕಾರ್ಯಕ್ರಮದ ಅಧ್ಯಕ್ಷೆ ತೆ ವಹಿಸಿದ್ದರು.
ವೇದಿಕೆಯಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ , ಬಾಳ್ತಿಲ ಗ್ರಾಮಪಂಚಾಯತ್ ಅಧ್ಯಕ್ಷೆ ಹಿರಣ್ಮಯಿ, ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷ ಅಭಿಷೇಕ್ ಶೆಟ್ಟಿ, ಕಡೇಶಿವಾಲಯ ಗ್ರಾ.ಪಂ.ಅಧ್ಯಕ್ಷ ಸುರೇಶ್ ಬನಾರಿ, ಬರಿಮಾರು ಗ್ರಾ.ಪಂ.ಅಧ್ಯಕ್ಷೆ ಶಶಿಕಲಾ, ಅಧಿಕಾರಿಗಳಾದ ಪ್ರದೀಪ್ ಡಿ.ಸೋಜ,ರಾಜೇಶ್ ಬಳಿಗಾರ್, ಜಿ.ಕೆ.ನಾಯಕ್, ಜ್ಞಾನೇಶ್, ಬಿಂದಿಯಾ ನಾಯಕ್, ತಾರಾನಾಥ್, ಡಾ! ಅಶೋಕ್ ಕುಮಾರ್ ರೈ, ಜೈ ಪ್ರಕಾಶ್, ಶೀಲಾವತಿ, ಮರ್ಲಿನ್ ಡಿ.ಸೋಜ, ವಿವೇಕಾನಂದ, ಉಷಾ, ಮತ್ತಿತರರು ಉಪಸ್ಥಿತರಿದ್ದರು.
ತಾ.ಪಂ.ಇ.ಒ.ರಾಜಣ್ದ ಸ್ವಾಗತಿಸಿ, ಶಿವು ಬಿರಾದರ್ ವಂದಿಸಿದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.