ಚಂದಳಿಕೆ ವಿದ್ಯಾವರ್ಧಕ ಸಂಘದ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೇಜಪ್ಪ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚಂದಳಿಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಭವಾನಿ ರೈಯವರು ಮಾತನಾಡಿ ದೇಜಪ್ಪ ಪೂಜಾರಿ ಅವರ ಸೇವೆಗೆ ಉತ್ತಮ ಪ್ರಶಸ್ತಿ ಬಂದಿರುವುದು ನಮ್ಮ ಊರಿಗೆ ಹೆಮ್ಮೆಯ ವಿಚಾರ ಅವರಿಗೆ ಇನ್ನು ಮುಂದೆ ರಾಜ್ಯ ಪ್ರಶಸ್ತಿ ಬರಲಿ ಎಂದು ಶುಭ ಹಾರೈಸಿದರು.