Tuesday, April 9, 2024

ಎರಡು ವರ್ಷಗಳ ಹಿಂದೆ ಗಾಂಜಾ ಮಾರಾಟ; ಆರೋಪಿ ಅಂದರ್

ಎರಡು ವರ್ಷಗಳ ಹಿಂದೆ ಗಾಂಜ ಮಾರಾಟ ಪ್ರಕರಣದಲ್ಲಿ ಆರೋಪಿಯಾಗಿದ್ದು , ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ವಿಟ್ಲ ಇನ್ಸ್ ಪೆಕ್ಟರ್ ನಾಗರಾಜ್ ಎಚ್ ಅವರ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಬಂಧಿಸಿದೆ.
ಕನ್ಯಾನ ಗ್ರಾಮದ ಪೋಯ್ಯಗದ್ದೆ ನಿವಾಸಿ ಮಹಮ್ಮದ್ ಆಸಿಫ್ ಬಂಧಿತ ಆರೋಪಿ.

2020 ರ ಇಸವಿಯಲ್ಲಿ ವಿಟ್ಲ ಎಸ್.ಐ.ವಿನೋದ್ ರೆಡ್ಡಿ ನೇತೃತ್ವದ ತಂಡ ಖಚಿತ ಮಾಹಿತಿ ಮೇಲೆ ಗಾಂಜಾ ಮಾರಾಟ ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಸಂದರ್ಭದಲ್ಲಿ ಅಮ್ರಾಜ್ ಎಂಬಾತನನ್ನು ಬಂಧಿಸಲಾಗಿದ್ದು, ಇನ್ನೋರ್ವ ಆರೋಪಿ ಆಸಿಫ್ ಪೋಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ.
ವಿಟ್ಲ ಪೋಲೀಸರು ದಾಳಿ ನಡೆಸಿ ದಾಗ ಆರೋಪಿ ಗಾಂಜ ಬಿಟ್ಟು ಪರಾರಿಯಾಗಿದ್ದ.
ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಆಸಿಫ್ ಕೊನೆಗೂ ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಇದೀಗ ವಿಟ್ಲ ಪೋಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್ ಅವರ ನೇತೃತ್ವದ ಎಸ್ ‌.ಐ.ಸಂದೀಪ್ ಅವರ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ದ್ದು, ನ್ಯಾಯಾಲಯ ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

More from the blog

ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ನಾರಿಶಕ್ತಿ ಮಹಿಳಾ ಸಮಾವೇಶ

ಬಂಟ್ವಾಳ: ನಾರಿ ಶಕ್ತಿ ಸಶಕ್ತರಾಗಬೇಕು ಎಂಬುದು ಮಹತ್ವದ ಕನಸು ಮತ್ತು ಪರಿಕಲ್ಪನೆಯಾಗಿದ್ದು, ರಾಜಕೀಯವಾಗಿ ಮಹಿಳೆಯರನ್ನು ಸಬಲೀಕರಣ ಮಾಡಿದ ಪಕ್ಷ ಬಿಜೆಪಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದ...

ವಿಕಸಿತ ಭಾರತ ಸಂಕಲ್ಪದೊಂದಿಗೆ ಗ್ರಾಮ, ಮನೆ, ಮನ ಅಭಿಯಾನ ಸಂಪರ್ಕಕ್ಕೆ ಶಾಸಕ ರಾಜೇಶ್ ನಾಯ್ಕ್ ಚಾಲನೆ

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸಬೇಕು ಎಂಬ ಯೋಚನೆಯಿಂದ ಶಾಸಕ ರಾಜೇಶ್ ನಾಯ್ಕ್ ಅವರು ವಿಕಸಿತ ಭಾರತ ಸಂಕಲ್ಪದೊಂದಿಗೆ ಗ್ರಾಮ ,ಮನೆ,...

ವೀರಕಂಬ ಗ್ರಾಮದ ಗ್ರಾಮದೈವ ಶ್ರೀ ಗಿಳಿಕಿಂಜತಾಯಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಗ್ರಾಮದೈವ ಶ್ರೀ ಗಿಳಿಕಿಂಜತಾಯಿ ದೇವಸ್ಥಾನದ ವರ್ಷವದಿ ಜಾತ್ರೆಯು ಊರ ಪರವೂರ ಭಕ್ತದಿಗಳ ಸೇರಿಗೆಯಲ್ಲಿ ವಿಜೃಂಭಣೆಯಿಂದ ಜರಗಿತು. ದಿನಾಂಕ 7-4-2024 ರ ರಾತ್ರಿ ಗಿಳಿಕಿಂಜ ಬಂಡಾರ ಮನೆಯಿಂದ ದೈವದ ಬಂಡಾರ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...