ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸೋಮವಾರ ನೂತನ ಸಭಾಂಗಣ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.

ರಾಧಾಕೃಷ್ಣ ಭಟ್ ರವರ ಪೌರೋಹಿತ್ಯದಲ್ಲಿ ಶ್ರೀ ದೇವರ ಆರಾಧನೆಯೊಂದಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಲ್ಎನ್ ಕೂಡೂರು ರವರು ಮಾತನಾಡಿ ಒಂದು ವಿದ್ಯಾ ಸಂಸ್ಥೆಗೆ ಸುಸಜ್ಜಿತ ಸಭಾಂಗಣ ತುಂಬಾ ಅಗತ್ಯ, ಇದು ಶಾಲಾ ಆಡಳಿತ ಮಂಡಳಿಯ ಬಹುದಿನಗಳ ಕನಸಾಗಿದೆ, ಆದುದರಿಂದ ಸುವ್ಯವಸ್ಥಿತ ಒಳಾಂಗಣ ಕ್ರೀಡಾಂಗಣಕ್ಕೂ ಅನುಕೂಲವಾಗುವಂತೆ ಯೋಜನೆಯನ್ನು ರೂಪಿಸಿ ಸುಮಾರು 11 ಸಾವಿರ ಸ್ಕ್ವೇರ್ ಫೀಟ್ ನಷ್ಟು ದೊಡ್ಡದಾದ ಸುಂದರ ಸಭಾಂಗಣ ನಿರ್ಮಾಣವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಶ್ರೀಧರ್ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಮೋನಪ್ಪ ಶೆಟ್ಟಿ ಹಾಗೂ ಹಸನ್ ವಿಟ್ಲ ರವರು, ಇಂಜಿನಿಯರ್ ಸಂತೋಷ್ ಕುಮಾರ್, ಪ್ರಾಂಶುಪಾಲರಾದ ಜಯರಾಮ್ ರೈ, ಉಪ ಪ್ರಾಂಶುಪಾಲೆಯಾದ ಜ್ಯೋತಿ ಶೆಣೈ, ಶಿಕ್ಷಕ ವೃಂದ, ಶಿಕ್ಷಕರೇತರ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.