Friday, April 26, 2024

ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ : ಅಧಿಕಾರಿಗಳ ನಿರ್ಲಕ್ಷ್ಯ ಮೇಲಾಧಿಕಾರಿಗಳಿಗೆ ಒತ್ತಾಯ

ನೈರುತ್ಯ ರೈಲ್ವೆ ಮೈಸೂರು ವಿಭಾಗದ ಸುಬ್ರಹ್ಮಣ್ಯ ನಿಲ್ದಾಣದಲ್ಲಿ ರೈಲು ಪ್ರಯಾಣಿಕರ ಮೂಲಭೂತ ಕೊರತೆಗಳಿಂದಾಗಿ ಆಗಾಗ ಅಹಿತಕರ ಘಟನೆಗಳು ಸಂಭವಿಸುತ್ತಿದ್ದು ದೂರುಗಳು ಮತ್ತು ಪತ್ರಿಕಾ ಸುದ್ದಿ ಪ್ರಕಟನೆಗಳಿಂದ ಜನಸಾಮಾನ್ಯರಿಗೆ ಆತಂಕ ಮೂಡಿಸಿದೆ. ಜನಪ್ರತಿನಿಧಿಗಳು ಜನಸಾಮಾನ್ಯರ, ಮತದಾರರ ಅಹವಾಲು ಬೇಡಿಕೆಗಳನ್ನು ರೈಲ್ವೆ ಅಧಿಕಾರಿಗಳಿಗೆ ಶಿಫಾರಸು ಒತ್ತಾಯ ಕೊರತೆಯಿಂದಾಗಿ ರೈಲ್ವೆ ಅಧಿಕಾರಿಗಳು ಪ್ರಯಾಣಿಕರ ಸುರಕ್ಷತೆ ಮತ್ತು ಸೌಲಭ್ಯಗಳ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದು ಹಾಸನ-ಮಂಗಳೂರು ಸರಕು ಸಾಗಣೆ ಕಾರ್ಪೊರೇಶನ್ ಗೆ ತಕ್ಕಷ್ಟೇ ಕರ್ತವ್ಯ ಮತ್ತು ಸೌಲಭ್ಯ ನಿರ್ವಹಿಸುತ್ತಿದ್ದಾರೆ ಎಂದು ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣ ಬಳಕೆದಾರರ ವೇದಿಕೆ ಆರೋಪಿಸಿದೆ . ಸುಬ್ರಹ್ಮಣ್ಯ ರೈಲು ನಿಲ್ದಾಣದ ಒಳಗಡೆ ಪಾದಚಾರಿಗಳಿಗೆ ಹಳಿ ದಾಟಲು ಮೇಲ್ಸೇತುವೆ ಇಲ್ಲದೆ ಪ್ರತಿನಿತ್ಯ ಯಾತ್ರಿಕರು ಹಳಿ ದಾಟಲು ಹರಸಾಹಸ ಪಡುತ್ತಿದ್ದು ಸಣ್ಣಪುಟ್ಟ ಅವಘಡಗಳು ಸಂಭವಿಸುತ್ತಲೇ ಇದ್ದು 2ದಿನಗಳ ಹಿಂದೆ ನೆಟ್ಟಣ ಪೇಟೆಯ ಸ್ಥಳೀಯ ನಾಗರಿಕರಾದ ನಾಗಣ್ಣಗೌಡರು ಅಧಿಕೃತ ಪ್ರಯಾಣದ ಟಿಕೆಟ್ ಪಡೆದು ಮಂಗಳೂರು -ಸುಬ್ರಹ್ಮಣ್ಯ ರೈಲಿನಿಂದ ಇಳಿದ ಬಳಿಕ ಜನ ದಟ್ಟಣೆಯ ನಡುವೆ ಹಳಿ ದಾಟಲು ಯತ್ನಿಸಿದಾಗ ರೈಲಿನ ಇಂಜಿನ್ ಚಾಲನೆಗಾಗಿ ಹಳಿ ಜೋಡಿಸುತ್ತಿದ್ದ ಹಳಿಗಳ ಮಧ್ಯೆ ಕಾಲು ಸಿಲುಕಿದಾಗ ಧಾವಿಸಿ ಬಂದ ಎಂಜಿನ್ನಿನ ಅಡಿಗೆ ಸಿಲುಕಿ ಕೈ ಹಾಗೂ ಕಾಲು ತುಂಡಾಗಿ ಪ್ರತ್ಯೇಕ ಗೊಂಡು ಆಸ್ಪತ್ರೆಗೆ ದಾಖಲಾಗಿರುತ್ತಾರೆ .ತುಂಡಾದ ಕೈ ಮತ್ತು ಕಾಲಿನ ಮರುಜೋಡಣೆ ಅಸಾಧ್ಯವೆಂದು ಕಂಡುಬಂದ ಹಿನ್ನೆಲೆಯಲ್ಲಿ ಅಪಾಯಕ್ಕೆ ಸಿಲುಕಿದ ನಾಗಣ್ಣಗೌಡರ ಸ್ಥಿತಿ ಚಿಂತಾಜನಕವಾಗಿದೆ ಮತ್ತು 4ಹೆಣ್ಣು ಮಕ್ಕಳ ನ್ನು ಹೊಂದಿರುವ ಕುಟುಂಬ ಬದುಕಿಗಾಗಿ ದಾರಿ ಕಾಣದಾಗಿದೆ ಎಂದವರು ತಿಳಿಸಿದರು . ಸುಬ್ರಹ್ಮಣ್ಯ ನಿಲ್ದಾಣದಲ್ಲಿ ಸಂಭವಿಸಿದ ಅಹಿತಕರ ಘಟನೆಗೆ ಪ್ರಯಾಣಿಕರಿಗೆ ಮೇಲ್ ದಾಟು ಸೇತುವೆ ಇಲ್ಲದೇ ಇರುವುದೇ ಏಕೈಕ ಕಾರಣವಾಗಿದ್ದು ಪ್ರವೇಶದ್ವಾರದಲ್ಲಿ ಸರಕಾರಿ ಬಸ್ಸುಗಳ ಭರಾಟೆಯೂ ಆತಂಕಕಾರಿಯಾಗಿದೆ. ಕರ್ತವ್ಯನಿರತ ರೈಲ್ವೆ ಪೊಲೀಸ್ ಸದಾ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಆ ನಿಟ್ಟಿನಲ್ಲಿ ನೊಂದ ನಾಗಣ್ಣಗೌಡರ ಕುಟುಂಬಕ್ಕೆ ಪರಿಹಾರ ಮತ್ತು ಸುಬ್ರಹ್ಮಣ್ಯ ನಿಲ್ದಾಣದಲ್ಲಿ 2019ರಲ್ಲಿ ಆರಂಭಗೊಂಡ ಮೇಲ್ ದಾಟಲು ಸೇತುವೆ ಕಾಮಗಾರಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕುಂಟು ನೆಪಗಳ ಕಾರಣಕ್ಕಾಗಿ ಸ್ಥಗಿತಗೊಂಡ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವಂತೆ ನೆಟ್ಟಣ ರೈಲು ನಿಲ್ದಾಣ ಆಸುಪಾಸಿನ ನಾಗರಿಕರು ಹಾಗೂ ಹಿತೈಷಿಗಳು ರೈಲ್ವೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ . ಮನವಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರತರವಾದ ಹೋರಾಟ ಹಾಗೂ ರೈಲು ರೋಕೋ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ಕೂಡ ನೀಡಿರುತ್ತಾರೆ . ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಹಾಸನ ಮಂಗಳೂರು ರೈಲು ಬಳಕೆದಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸುರೇಶ್ ಗೌಡ ಪುತ್ತೂರು ಸುಬ್ರಹ್ಮಣ್ಯ ರೋಡ್ ರೈಲ್ವೆ ತಂಡದ ಅಧ್ಯಕ್ಷ ಪ್ರಸಾದ್ ನೆಟ್ಟಣ ಸಾಮಾಜಿಕ ಕಾರ್ಯಕರ್ತರುಗಳಾದ ರಾಜೇಶ್, ಶರತ್, ಜಾಫರ್, ಕಿಶೋರ್, ರಮೇಶ್, ಹಾಗೂ ನಿವೃತ್ತ ರೈಲ್ವೆ ಅಧಿಕಾರಿ ಪೂವಪ್ಪ ಗೌಡ ಐತ್ತೂರು, ಗಾಯಗೊಂಡ ನಾಗಣ್ಣಗೌಡರ ಪತ್ನಿ ಮೋಹಿನಿ ಸಹೋದರರಾದ ಆನಂದ, ಸತೀಶ್, ಕುಟುಂಬಸ್ಥರು ಊರ ನಾಗರಿಕರು ಉಪಸ್ಥಿತರಿದ್ದರು .

More from the blog

ಹಕ್ಕಿಜ್ವರ ಭೀತಿ : ದ.ಕ ಗಡಿ ಭಾಗಗಳಲ್ಲಿ ತಪಾಸಣೆ

ಮಂಗಳೂರು: ಕೇರಳದ ಆಲಪ್ಪುಳ ಜಿಲ್ಲೆಯ ಎರಡು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಲ್ಲಿ ವಾಹನಗಳ ತಪಾಸಣೆ ಆರಂಭಗೊಂಡಿದೆ. ಗಡಿ ಭಾಗವಾದ...

ಲೋಕಸಭಾ ಚುನಾವಣೆ : ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮಸ್ಟರಿಂಗ್ ಕಾರ್ಯ

ಲೋಕಸಭಾ ಚುನಾವಣೆ 2024 ರ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕಾರ್ಯವು ಈ ದಿನ ಇನ್ಫೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಐವರು ಮಾಸ್ಟರ್ ಟ್ರೈನರ್ ಗಳ ನೇತೃತ್ವದಲ್ಲಿ...

ಮತದಾನದಂದು ಫೋಟೋ ಕ್ಲಿಕ್ಕಿಸಿ.. 25 ಸಾವಿರ ರೂ. ಬಹುಮಾನ ಗೆಲ್ಲಿ

ನಾಳೆ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಇನ್ನು ಮತದಾನದ ಸಂದರ್ಭದಲ್ಲಿ ರಾಜ್ಯ ಚುನಾವಣಾ ಅಯೋಗವು ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ನಾಳೆ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಲಿದ್ದು, ಸುಮಾರು 2,88,19,342 ಮತದಾರರು...

ಚುನಾವಣಾ ಕಾರ್ಯಕ್ಕೆ ಸರ್ಕಾರಿ ಬಸ್​ಗಳ​ ಬಳಕೆ : ಇಂದು, ನಾಳೆ ಸಂಚಾರ ವ್ಯತ್ಯಯ ಸಾಧ್ಯತೆ

ಬೆಂಗಳೂರು:​ ನಾಳೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನಕ್ಕೆ ಚುನಾವಣಾ ಆಯೋಗದಿಂದ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಚುನಾವಣಾ ಕಾರ್ಯಕ್ಕೆ ಬಸ್ ಬಳಕೆಯಾಗುವುದರಿಂದ ಇಂದು, ನಾಳೆ ಸರ್ಕಾರಿ ಸಾರಿಗೆ,...