ಬಂಟ್ವಾಳ: ಕೋಳಿ ಟಿಕ್ಕ ಪಾರ್ಸೆಲ್ ಪಡೆಯಲು ಟಿಕ್ಕ ಶಾಪ್ ಗೆ ಬಂದಿದ್ದ ಅಪ್ರಾಪ್ತ ಶಾಲಾ ಬಾಲಕನ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ , ಈ ಬಗ್ಗೆ ಮನೆಯವರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ ಘಟನೆ ಸೂಕ್ಷ್ಮ ಪ್ರದೇಶವಾದ ಕಲ್ಲಡ್ಕದಲ್ಲಿ ನಡೆದಿದೆ.
ಕಲ್ಲಡ್ಕ ವಿಟ್ಲ ರಸ್ತೆಯಲ್ಲಿರುವ ಟಿಕ್ ಪಾಯಿಂಟ್ ಮಾಲಕ ಮಹಮ್ಮದ್ ಆಶ್ರಫ್ ಎಂಬಾತನೇ ಅತ್ಯಾಚಾರ ಎಸಗಿದ ಆರೋಪಿ.
ಕಲ್ಲಡ್ಕದಲ್ಲಿರುವ ಟಿಕ್ಕಪಾಯಿಂಟ್ ಗೆ ಪಾರ್ಸೆಲ್ ತರಲು ರಾತ್ರಿ ಸುಮಾರು 8 ಗಂಟೆಗೆ ಬಂದ ವೇಳೆ ಅತ್ಯಾಚಾರ ನಡೆಸಲಾಗಿದೆ.
ಬಾಲಕ ಟಿಕ್ಕ ಪಾರ್ಸೆಲ್ ಕೇಳಿದಾಗ , ಟಿಕ್ಕ ಪಾರ್ಸೆಲ್ ಕೊಂಡುಹೋಗಲು ಪ್ಲಾಸ್ಟಿಕ್ ಚೀಲವನ್ನು ತರುವಂತೆ ಅಂಗಡಿ ಯ ಒಳಗೆ ಬರುವಂತೆ ಹೇಳಿ, ಆತ ಪ್ಲಾಸ್ಟಿಕ್ ಚೀಲ ತರಲು ಒಳಗೆ ಹೋದ ವೇಳೆ ಆರೋಪಿ ಬಾಲಕನ ಹಿಂಬದಿಯಿಂದ ಹೋಗಿ ಆತನನ್ನು ಹಿಡಿದು ಎತ್ತಿಕೊಂಡು ಅಲ್ಲೇ ಸಮೀಪದ ತೋಟಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
*ಅತ್ಯಾಚಾರ ಆರೋಪಿಯಿಂದ ಬಾಲಕನ ಮೇಲೆ ಹಲ್ಲೆ*
ಅತ್ಯಾಚಾರ ನಡೆಸಿದ ಆರೋಪಿ ಘಟನೆ ನಡೆದು ಎರಡು ತಿಂಗಳ ಬಳಿಕ ಮತ್ತೆ ಅತ್ಯಾಚಾರಕ್ಕೆ ಯತ್ನ ಮಾಡಿ, ಆತ ವಿರೋಧ ವ್ಯಕ್ತಪಡಿಸಿದಾಗ ಬಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಬಾಲಕ ಆ.4 ರಂದು ಮನೆಯಿಂದ ಕಲ್ಲಡ್ಕ ಪೇಟೆಗೆ ಹಾಲು ತರಲೆಂದು ಅಂಗಡಿ ಹೋಗಿ ವಾಪಾಸಾಗುವಾಗ ಎದುರಿನಿಂದ ಬಂದ ಆರೋಪಿ ಈತನನ್ನು ಬರುವಂತೆ ಒತ್ತಾಯಿಸದ್ದಾನೆ.ನಾನು ಬರುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ.
ಬಾಲಕ ತಪ್ಪಿಸಿಕೊಂಡು ಮನೆಗೆ ಹೋಗಿ ವಿಚಾರ ತಿಳಿಸಿದ್ದಾನೆ.
ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೋಲಿಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
