ಬಿಸಿರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ವಿಜಯದಶಮಿಯ ವಿಶೇಷ ದಿನದಂದು ತೆನೆ ಹಬ್ಬ ನಡೆಯಿತು.
ಗದ್ದೆಯಿಂದ ತೆನೆಗೆ ಪೂಜೆ ಸಲ್ಲಿಸಿ ಬಳಿಕ ದೇವಸ್ಥಾನಕ್ಕೆ ತೆನೆ ತರಲಾಯಿತು.
ಬಳಿಕ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಥಮವಾಗಿ ದೇವಸ್ಥಾನಕ್ಕೆ ತೆನೆ ಕಟ್ಟಲಾಯಿತು. ನಂತರ ಇಲ್ಲಿ ನೆರೆದ ಭಕ್ತರಿಗೆ ತೆನೆಯನ್ನು ನೀಡಲಾಯಿತು.