Monday, September 25, 2023
More

    ಭಾರತದಲ್ಲಿ ತಯಾರಾದ ಔಷಧಿ ಸೇವಿಸಿ ಆಫ್ರಿಕಾದಲ್ಲಿ 66 ಮಕ್ಕಳು ಸಾವು : ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆ

    Must read

    ನವದೆಹಲಿ: ಶೀತದಿಂದ ಬರುವ ಕೆಮ್ಮಿನ ನಿಯಂತ್ರಣಕ್ಕೆ ಬಳಸುವ ಭಾರತದ ಕಂಪನಿಯೊಂದರಿಂದ ತಯಾರಾದ ಔಷಧಗಳನ್ನು ಸೇವಿಸಿ ಆಫ್ರಿಕಾ ಖಂಡದ ಗ್ಯಾಂಬಿಯಾದ 66ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದು, ಇನ್ನು ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ರವಾನಿಸಿದೆ.

    ಹರಿಯಾಣ ಮೂಲದ ಮೈಡನ್ ಫಾರ್ಮಾಸ್ಯುಟಿಕಲ್ಸ್​ ಲಿಮಿಟೆಡ್ ತಯಾರಿಸಿರುವ ಪ್ರೊಮೆಥಜೈನ್ ಓರಲ್ ಸಲ್ಯೂಷನ್, ಕೊಫೆಕ್ಸ್‌ಮಲಿನ್ ಬೇಬಿ ಕಫ್ ಸಿರಪ್, ಮ್ಯಾಕಫ್ ಬೇಬಿ ಕಫ್ ಸಿರಪ್ ಮತ್ತು ಮಾಗ್ರಿಪ್ ಅಂಡ್ ಕೋಲ್ಡ್ ಸಿರಪ್ ಔಷಧಗಳು ಈ ಅನಾಹುತಕ್ಕೆ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೊಸ್ ಅಧನೊಮ್ ಘೆಬ್ರಿಯೆಸಸ್ ಎಚ್ಚರಿಸಿದ್ದಾರೆ.

    ಇನ್ನು ಈ ನಾಲ್ಕೂ ಔಷಧಗಳನ್ನು ಪ್ರಯೋಗಾಲಯದಲ್ಲಿ ವಿಶ್ಲೇಷಿಸಿದಾಗ ಅವುಗಳಲ್ಲಿ ಡೈತಿಲೆನ್ ಗ್ಲೈಕೊಲ್ ಮತ್ತು ಎಥಿಲೆನ್ ಗ್ಲೈಕೊಲ್ ಹಾನಿಕಾರಕಗಳು ಹೆಚ್ಚಿನ ಮಟ್ಟದಲ್ಲಿರುವ ಪತ್ತೆಯಾಗಿತ್ತು. ಈ ಔಷಧಗಳ ಸುರಕ್ಷೆ ಮತ್ತು ಗುಣಮಟ್ಟ ಖಾತೆಯ ಬಗ್ಗೆ ಔಷಧ ತಯಾರಿಕೆ ಕಂಪನಿಯು ವಿಶ್ವ ಆರೋಗ್ಯ ಸಂಸ್ಥೆಯು ಯಾವುದೇ ಭರವಸೆ ನೀಡಲು ಸಮ್ಮತಿಸಿಲ್ಲ. ಮನುಷ್ಯರ ದೇಹಗಳಿಗೆ ಈ ಎರಡೂ ರಾಸಾಯನಿಕಗಳು ವಿಷಕಾರಿಯಾಗಿದ್ದು, ಇವುಗಳನ್ನು ಸೇವಿಸಿದರೆ ಜೀವಹಾನಿಯ ಅಪಾಯ ಇರುತ್ತದೆ. ಈ ವಿಷದ ಪರಿಣಾಮದಿಂದ ಹೊಟ್ಟೆನೋವು, ವಾಂತಿ, ಬೇಧಿ, ಮೂತ್ರ ವಿಸರ್ಜನೆಗೆ ತೊಂದರೆ, ತಲೆನೋವು, ಮಾನಸಿಕ ಸ್ಥಿತಿ ಏರುಪೇರಾಗುವುದು ಮತ್ತು ಕಿಡ್ನಿ ವೈಫಲ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸೂಕ್ತ ಸಮಯದಲ್ಲಿ ಹೆಚ್ಚಿನ ವೈದ್ಯಕೀಯ ನೆರವು ದೊರಕದಿದ್ದರೆ ಸಾವು ಸಂಭವಿಸುತ್ತದೆ ಎಂದು ಹೇಳಿದೆ.

    ಸದ್ಯ ಎಲ್ಲ ದೇಶಗಳೂ ಈ ನಾಲ್ಕೂ ಔಷಧಗಳನ್ನು ಬಳಕೆಯಿಂದ ದೂರ ಇರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಸಿದೆ. ಗಾಂಬಿಯಾದ ವೈದ್ಯಕೀಯ ಅಧಿಕಾರಿಗಳು ಕಳೆದ ಜುಲೈ ತಿಂಗಳಿನಲ್ಲಿಯೇ ಈ ಔಷಧಗಳಿಂದ ಆಗಬಹುದಾದ ಅಪಾಯಗಳ ಬಗ್ಗೆ ಧ್ವನಿ ಎತ್ತಿದ್ದರು. ಆಗಸ್ಟ್​ ತಿಂಗಳಲ್ಲಿಯೂ 28 ಮಕ್ಕಳು ಈ ಔಷಧಿ ಸೇವನೆಯಿಂದ ಮೃತಪಟ್ಟಿದ್ದರು. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಔಷಧಗಳನ್ನು ಶೀಘ್ರ ಹಿಂಪಡೆಯದಿದ್ದರೆ ಅಪಾಯ ಮತ್ತಷ್ಟು ಹೆಚ್ಚಬಹುದಾದ ಸಾಧ್ಯತೆಯಿದೆ ಎಂದು ಗಾಂಬಿಯಾದ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

     

     

     

     

    More articles

    LEAVE A REPLY

    Please enter your comment!
    Please enter your name here

    Latest article