ಈ ವರ್ಷದ ಕೊನೆಯ ಭಾಗಶಃ ಸೂರ್ಯಗ್ರಹಣವು ಅ.25ರಂದು ಗೋಚರವಾಗಲಿದೆ. ಇನ್ನು ದೀಪಾವಳಿಯಂದೇ ಈ ಸೂರ್ಯಗ್ರಹಣ ಉಂಟಾಗಲಿದ್ದು, ಈ ಸೂರ್ಯಗ್ರಹಣವು ಭಾರತದ ಬಹುತೇಕ ಪ್ರದೇಶಗಳಲ್ಲಿ ಗೋಚರಿಸಲಿದೆ.

ಈ ಸೂರ್ಯ ಗ್ರಹಣವು ಅಕ್ಟೋಬರ್ 25ರಂದು ಸಂಜೆ 4.29ಕ್ಕೆ ಪ್ರಾರಂಭವಾಗಿ, ಸಂಜೆ 5.42ಕ್ಕೆ ಕೊನೆಗೊಳ್ಳುತ್ತದೆ. ಭಾರತವಲ್ಲದೆ, ಯುರೋಪ್, ಆಫ್ರಿಕಾ ಖಂಡದ ಈಶಾನ್ಯ ಭಾಗ, ಏಷ್ಯಾದ ನೈಋತ್ಯ ಭಾಗ ಮತ್ತು ಅಟ್ಲಾಂಟಿಕ್‌ನಲ್ಲಿಯೂ ಇದನ್ನು ಕಾಣಬಹುದು.
ಸೂತಕದ ಅವಧಿಯು ಸೂರ್ಯಗ್ರಹಣಕ್ಕೆ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಗ್ರಹಣ ಮುಗಿದ ನಂತರ ಸೂತಕ ಕೊನೆಗೊಳ್ಳುತ್ತದೆ. ವಿಶೇಷವಾಗಿ ಗರ್ಭಿಣಿಯರು ಈ ಸಮಯದಲ್ಲಿ ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಇದು ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಮೇಲೂ ಪರಿಣಾಮ ಬೀರುತ್ತದೆ.
ಸೂರ್ಯ ಗ್ರಹಣದಲ್ಲಿ ಏನು ಮಾಡಬೇಕು? ಏನು ಮಾಡಬಾರದು?: ಭಾರತದಲ್ಲಿ ಜನರು ಸಾಮಾನ್ಯವಾಗಿ ಗ್ರಹಣದ ಸಮಯದಲ್ಲಿ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಅಲ್ಲದೆ, ಗ್ರಹಣದ ದುಷ್ಪರಿಣಾಮಗಳನ್ನು ತಡೆಗಟ್ಟಲು ದರ್ಭೆ ಹುಲ್ಲು ಅಥವಾ ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಲಾಗುತ್ತದೆ. ಗ್ರಹಣ ಮುಗಿದ ನಂತರ ಸ್ನಾನ ಮಾಡಿ ಹೊಸ ಬಟ್ಟೆಯನ್ನು ಬದಲಾಯಿಸಿಕೊಳ್ಳಬೇಕೆಂದು ಹಲವರು ನಂಬುತ್ತಾರೆ. ಸೂರ್ಯ ದೇವರಿಗೆ ಸಮರ್ಪಿತವಾದ ಮಂತ್ರಗಳನ್ನು ಪಠಿಸುವುದು ದೇಶದ ಅನೇಕ ಮನೆಗಳಲ್ಲಿ ಅನುಸರಿಸುವ ಮತ್ತೊಂದು ಅಭ್ಯಾಸವಾಗಿದೆ.