Wednesday, September 27, 2023

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಖ್ಯಾತ ಕನ್ನಡ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಬೇಟಿ

Must read

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಇಂದು ಖ್ಯಾತ ಕನ್ನಡ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಅವರು ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.

ಬಳಿಕ ಹರ್ಷೇಂದ್ರ ಕುಮಾರ್ ರವರನ್ನು ಭೇಟಿ ನೀಡಿ ಅಭಿನಂದಿಸಿದರು.

ನಟನಿಗೆ ರಾಜೇಂದ್ರ ದಾಸ್, ಉದ್ಯಮಿಗಳಾದ ರಾಜೇಶ್ ಶೆಟ್ಟಿ ನವಶಕ್ತಿ, ರವಿಚಕ್ಕಿತ್ತಾಯ ಉಜಿರೆ ಅವರು ಸಾಥ್ ನೀಡಿದರು.

ಬಳಿಕ ಉಜಿರೆ ಕಾಶಿ ಪ್ಯಾಲೆಸ್ ನಲ್ಲಿ ನೂತನವಾಗಿ ಲೋಕಾರ್ಪಣೆಗೊಂಡ ದಿ ಓಷ್ಯನ್ ಪರ್ಲ್ ಗೆ ಭೇಟಿ ನೀಡಿದ ನಟ ರಕ್ಷಿತ್ ಅವರು
ಹೋಟೆಲನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಅಭಿನಂದನೆಯನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಕಾಶಿ ಪ್ಯಾಲೇಸ್ ಮಾಲಕರಾದ ಶಶಿಧರ್ ಶೆಟ್ಟಿ ನವಶಕ್ತಿ, ರಾಜೇಶ್ ಶೆಟ್ಟಿ ನವಶಕ್ತಿ ಹಾಗೂ ದಿ ಓಷ್ಯನ್ ಪರ್ಲ್ ಆಡಳಿತ ವರ್ಗ ಉಪಸ್ಥಿತರಿದ್ದರು

More articles

Latest article