ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ವಿಟ್ಲವಲಯದ ವಿಟ್ಲ ಮುಡ್ನೂರು ಕಾರ್ಯಕ್ಷೇತ್ರ ವ್ಯಾಪ್ತಿಯ ಸಮಗ್ರ ಕೃಷಿ ಮಾಹಿತಿ ಶಿಬಿರ
ವಿಟ್ಲ ಮುಡ್ನೂರು ಗ್ರಾಮದ ಚಪ್ಪಡಿಯಡ್ಕ ಹರೀಶ್ ನಾಯಕ್ ರವರ ಮನೆಯಲ್ಲಿ ಜರಗಿತು.

ಕಾರ್ಯಕ್ರಮವನ್ನು ವಿಟ್ಲ ಮುಡ್ನೂರು ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಸೇನೆರೆಮಜಲು ಉದ್ಘಾಟಿಸಿದರು.
ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ಚಿದಾನಂದ ಸಮಗ್ರ ಬತ್ತದ ಕೃಷಿಗೆ ಬೀಜಗಳ ಆಯ್ಕೆ, ಬೀಜ ಬಿತ್ತನಾ ವಿಧಾನ, ನಾಟಿ ಪದ್ಧತಿ, ಯಂತ್ರೋಪಕರಣಗಳನ್ನು ಬಳಸಿ ನಾಟಿ ಮಾಡುವ ವಿಧಾನ, ತೋಟಗಾರಿಕೆಗಳ ನಾಟಿ ಮಾಡುವ ವಿಧಾನ,ಗೊಬ್ಬರಗಳ ಪೂರೈಸುವ ವಿಧಾನ, ಯೋಜನೆಯ ಮುಖಾಂತರ ದೊರೆಯುವಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ವಲಯ ಮೇಲ್ವಿಚಾರಕಿ ಸರಿತಾ ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕ ಮಾತನಾಡಿದರು, ತಾಂತ್ರಿಕ ತರಬೇತುದಾರರಾದ ದಮಯಂತಿ ಸ್ವಾಗತಿಸಿ, ಸುಂದರ ಪೂಜಾರಿ ಕೇದಗೆದಡಿ ವಂದಿಸಿದರು. ಸೇವಾ ಪ್ರತಿನಿಧಿ ಯಶೋಧ ಕಾರ್ಯಕ್ರಮ ನಿರೂಪಿಸಿದರು.