Monday, September 25, 2023
More

    ಆದಿವಾಸಿ ಬುಡಕಟ್ಟು ಸಮುದಾಯದ ವಿಶೇಷವಾಗಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

    Must read

    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ,ರಾಷ್ಟ್ರೀಯ ಸೇವಾ ಯೋಜನೆ,ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ),
    ದಕ್ಷಿಣ ಕನ್ನಡ ಜಿಲ್ಲಾಡಳಿತ,
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ,
    ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಮತ್ತು ದ.ಕ ಜಿಲ್ಲಾ ಕೊರಗ ಸಂಘ ಇವರ ವತಿಯಿಂದ ಆದಿವಾಸಿ ಬುಡಕಟ್ಟು ಸಮುದಾಯದ ವಿಶೇಷವಾಗಿ ಮಹಿಳೆಯರಿಗೆ
    ಉಚಿತ ಆರೋಗ್ಯ ತಪಾಸಣಾ ಶಿಬಿರ (TRIBAL HEALTH SCREENING CAMP)ಸರಪಾಡಿ ವ್ಯವಸಾಯ ಸಹಕಾರಿ ಬ್ಯಾಂಕ್ ನ
    ದಿ| ಸುಬ್ಬಣ್ಣ ಶೆಟ್ಟಿ ಸಭಾಂಗಣದಲ್ಲಿ ಆ.3 ರಂದು ಸೋಮವಾರ ನಡೆಯಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ
    ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮೀಣ ಭಾಗದ ಅಧಿವಾಸಿ ಬುಡಕಟ್ಟು ಸಮುದಾಯದ ಮಹಿಳೆಯರ ಆರೋಗ್ಯ ತಪಾಸಣೆ ನಡೆಸಿ , ಆರೋಗ್ಯ ಕಾಪಾಡಲು ಯನಪೋಯ ಆಸ್ಪತ್ರೆಯ ಜೊತೆ ಇತರ ಇಲಾಖೆಗಳು ಸಹಕಾರ ನೀಡುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ.

    ಆರೋಗ್ಯ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯದ ಸರಕಾರಗಳು ಹೆಚ್ಚಿನ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದು,ಆರೋಗ್ಯ ಸುಧಾರಣೆ ಗಾಗಿ ಅನೇಕ ಜನಪರ ಕಾರ್ಯಕ್ರಮ ಗಳನ್ನು ಹಾಕಿಕೊಂಡಿದೆ .
    ಸರಕಾರಿ ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಆದ್ಯತೆಯನ್ನು ಪರಿಗಣಿಸಿ ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆಯನ್ನು ಸರಕಾರ ಮಾಡಿದೆ.
    ಬಂಟ್ವಾಳ ತಾಲೂಕಿನಲ್ಲಿ ಯೂ ಆರೋಗ್ಯ ದ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಐಸಿಯು ಘಟಕ , ಡಯಾಲಿಸಿಸ್ ಹೀಗೆ ಅನೇಕ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ಯ ಮೂಲಕ ಸುಸಜ್ಜಿತಗೊಳಿಸಲಾಗಿದೆ. ಇದರ ಜೊತೆಗೆ ಪ್ರತಿ ಗ್ರಾಮಗಳಿಗೆ ತೆರಳಿ ಗ್ರಾಮದ ಜನತೆಯ ಆರೋಗ್ಯ ತಪಾಸಣೆಗಾಗಿ ಐಸಿಯು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
    ಇನ್ನಷ್ಟು ಜನರಿಗೆ ಉಪಯೋಗವಾಗುವ ನಿಟ್ಟಿಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿ ಜನರ ಆರೋಗ್ಯ ದ ರಕ್ಷಣೆ ಒದಗಿಸುವ ಆಸ್ಪತ್ರೆ ಹಾಗೂ ಇಲಾಖೆಗಳ ಕಾರ್ಯ ಶ್ಲಾಘನೀಯ ಕಾರ್ಯ ಎಂದು ಅವರು ಹೇಳಿದರು.

    ಕಾರ್ಯಕ್ರಮದ ಯೆನೆಪೋಯ ಕುಲಪತಿ, ಡಾ. ಎಮ್. ವಿಜಯಕುಮಾರ್ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ವಹಿಸಿ ಮಾತನಾಡಿದ ಅವರು ಆರೋಗ್ಯ ಶಿಬಿರದಲ್ಲಿ ತಪಾಸಣೆ ವೇಳೆ ಕಾಯಿಲೆಗಳು ಕಂಡು ಬಂದಲ್ಲಿ ಯನಪೋಯ ಆಸ್ಪತ್ರೆಯಲ್ಲಿ ಎಲ್ಲಾ ಕಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಭರವಸೆಯನ್ನು ನೀಡಿದರು.

    ಮುಖ್ಯ ಅತಿಥಿಗಳಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ NSS, ರಾಜ್ಯ ಅಧಿಕಾರಿ
    ಪ್ರತಾಪ್ ಲಿಂಗಯ್ಯ,ಸಮಗ್ರ ಬುಡಕಟ್ಟು ಅಭಿವೃದ್ಧಿ ಅಧಿಕಾರಿ ರಶ್ಮಿ ,ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಎಮ್,ಯೆನೆಪೋಯ ಕುಲಪತಿ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ)
    ಡಾ. ಕೆ.ಎಸ್‌. ಗಂಗಾಧ‌ರ ಸೋಮಯಾಜಿ,NSS, ಕಾರ್ಯಕ್ರಮ ಸಂಯೋಜನಾಧಿಕಾರಿ ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ)
    ಡಾ. ಅಶ್ವಿನಿ ಶೆಟ್ಟಿ ,
    ಮಣಿನಾಲ್ಕೂರು ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ,
    ವ್ಯವಸಾಯ ಸೇವಾ ಸಹಕಾರಿ ಬ್ಯಾಕ್ ಅಧ್ಯಕ್ಷ ರಾಧಾಕೃಷ್ಣ ಮಯ್ಯ, ಮಾಜಿ ತಾ.ಪಂ.ಸದಸ್ಯ ದೇವಪ್ಪ ಪೂಜಾರಿ, ಡಾ| ಅಭಯ ನಿರ್ಗಡೆ ಮತ್ತಿತರರು ಉಪಸ್ಥಿತರಿದ್ದರು.
    ಸ್ವಾಗತ ಧನಂಜಯ ಶೆಟ್ಟಿ ಸರಪಾಡಿ,ನಿರೂಪಣೆ ಮತ್ತು ಧನ್ಯವಾದ ಡೊಂಬಯ ಅರಳ

    More articles

    LEAVE A REPLY

    Please enter your comment!
    Please enter your name here

    Latest article