ಮಾಜಿ WWE ಕುಸ್ತಿಪುಟು ಸಾರಾ ಲೀ ನಿಧನರಾಗಿದ್ದಾರೆ.

ಇವರು ಡಬ್ಲ್ಯೂಡಬ್ಲ್ಯೂಇ Tough Enough ಚಾಂಪಿಯನ್ ಆಗಿ ಜನಪ್ರಿಯತೆ ಗಳಿಸಿದ್ದಾರೆ. ಇನ್ನು ಇವರ ಸಾವಿಗೆ ಕಾರಣವನ್ನ ಯಾರೂ ಖಚಿತಪಡಿಸಿಲ್ಲ. ಇವರು ಮಾಜಿ WWE ಪಟು ವೆಸ್ಟಿನ್ ಬ್ಲಾಕೆಯನ್ನ ಮದುವೆ ಆಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.
ಇನ್ನು ಸಾರಾ ಸಾವಿನ ಬಗ್ಗೆ WWE ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, Tough Enough ವಿನ್ನರ್ ನಿಧನರಾದ ಸುದ್ದಿ ಕೇಳಿ ಆಘಾತವಾಗಿದೆ. ಸ್ಪೋರ್ಟ್ಸ್-ಎಂಟರ್ಟೈನ್ಮೆಂಟ್ ಜಗತ್ತಿಗೆ ಅವರು ಸ್ಫೂರ್ತಿಯಾಗಿದ್ದರು. WWE ಅವರ ಕುಟುಂಬಕ್ಕೆ, ಸ್ನೇಹಿತರಿಗೆ ಸಂತಾಪ ಸೂಚಿಸುತ್ತದೆ ಎಂದು ಟ್ವೀಟ್ ಮಾಡಿದೆ. 2015ರಲ್ಲಿ ಸಾರಾ ಲೀ ಅವರು WWE Tough Enough ಚಾಂಪಿಯನ್ ಆಗಿದ್ದರು.