Monday, April 15, 2024

ಶ್ರೀದೇವಿ ಸಾನಿಧ್ಯ ಬಿಲ್ಲಂಪದವು ಸಜೀಪ ನಡು ಇದರ ಜೀರ್ಣೋದ್ಧಾರದ ಅಂಗವಾಗಿ ಸಮಾಲೋಚನ ಸಭೆ

ಶ್ರೀದೇವಿ ಸಾನಿಧ್ಯ ಬಿಲ್ಲಂಪದವು ಸಜೀಪ ನಡು ಇದರ ಜೀರ್ಣೋದ್ಧಾರದ ಅಂಗವಾಗಿ ಗುರುವಾರದಂದು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಸಮಾಲೋಚನ ಸಭೆಯು ಸಜೀಪ ಮಾ ಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್ ಅಧ್ಯಕ್ಷತೆಯಲ್ಲಿ ಜರಗಿತು.

ಶ್ರೀ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಶೀಘ್ರವಾಗಿ ನಿರ್ಮಿಸಲು ತೀರ್ಮಾನಿಸಲಾಯಿತು. ರಸ್ತೆ ಸಂಪರ್ಕಕ್ಕೆ ಸಂಬಂಧಿಸಿದ ಭೂಮಾಲೀಕರು ಕ್ಷೇತ್ರ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ನೀಡುವುದಾಗಿ ವಾಗ್ದಾನ ಮಾಡಿದರು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ನಂಜ ವೆಂಕಟೇಶ್ವರ ಭಟ್. ಮುಂಬೈ ಉದ್ಯಮಿ ರವೀಂದ್ರನಾಥ್ ಭಂಡಾರಿ ಪುನ್ಕೆ ಮಜಲು . ರೋಹಿತ್ ಶೆಟ್ಟಿ ನಗ್ರಿ ಗುತ್ತು. ಕೆ ರಾಧಾಕೃಷ್ಣ ಆಳ್ವ. ಮಿಥೋಟ ಪದ್ಮನಾಭ ಭಟ್. ಸಜೀಪ ಗು ತ್ತು ಮುಂಡೆಪ್ಪ ಶೆಟ್ಟಿ ಯಾನೆ ಕೊಚ್ಭಂಡಾರಿ. ಶಿವರಾಮ ಭಂಡಾರಿ. ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಪುಂಜ. ಆನಂದರೈ ಅಂಕದ ಕೋಡಿ. ಸಜೀ ಪ ಪ ಡು ಗ್ರಾಮ ಪಂಚಾಯತ್ ಅಧ್ಯಕ್ಷ ವಿಠಲ ಅಮೀನ್. ಯಶವಂತ ದೇರಾಜೆ ಗುತ್ತು. ರಾಮಕೃಷ್ಣ ಭಟ್. ಯತೀಶ್ ಭಂಡಾರಿ. ಮೊದಲಾದವರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು

More from the blog

ಉಳ್ಳಾಲದಲ್ಲಿ ರಾರಾಜಿಸಿದ ಕಾಂಗ್ರೆಸ್ ರೋಡ್ ಶೋ… ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಜನತೆ

ಉಳ್ಳಾಲ: ರೋಡ್ ಶೋ ಮೂಲಕ ನಡೆಸಿದ ಚುನಾವಣಾ ಪ್ರಚಾರ ಕಾರ್ಯ ಕಾಂಗ್ರೆಸ್'ಗೆ ಹೊಸ ಉತ್ಸಾಹ ತುಂಬುವಲ್ಲಿ ಸಫಲವಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ್ದು, ಅಭೂತಪೂರ್ವ...

ಪುಣಚ: ನಿರ್ಮಾಣ ಹಂತದ ಸೇತುವೆ ಕುಸಿತ : 7 ಮಂದಿ ಕಾರ್ಮಿಕರಿಗೆ ಗಾಯ

ವಿಟ್ಲ: ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು ಏಳು ಮಂದಿ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುಣಚ ಗ್ರಾಮದಲ್ಲಿ ನಡೆದಿದೆ. ಪುಣಚ ಗ್ರಾಮದ ಬರೆಂಜ – ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿಯಲ್ಲಿ ಸೇತುವೆಯ ಕೊನೆಯ...

ಬಂಟ್ವಾಳದ ಹಿಂದೂ ಯುವ ಸೇನಾ ಮುಖಂಡನಿಗೆ ಚೂರಿ ಇರಿದ ದುಷ್ಕರ್ಮಿಯನ್ನು ಶೀಘ್ರ ಬಂದಿಸಿ, ಕಠಿನ ಶಿಕ್ಷೆ ವಿಧಿಸುವಂತೆ ಹಿಂದೂ ಯುವ ಸೇನೆ ಆಗ್ರಹ

ಬಂಟ್ವಾಳ: ಹಿಂದೂ ಯುವ ಸೇನೆ ಬಂಟ್ವಾಳ ತಾಲೂಕು ಘಟಕದ ಮಾಜಿ ಅಧ್ಯಕ್ಷ ಪುಷ್ಪರಾಜ್ ರವರು ದುಷ್ಕರ್ಮಿಯಿಂದ ಚೂರಿ ಇರಿತಕ್ಕೊಳಗಾಗಿರುವುದನ್ನು ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ, ಬಂಟ್ವಾಳ ತಾಲೂಕು ಘಟಕ ಖಂಡಿಸುತ್ತದೆ. ಅಮಾಯಕ ಪುಷ್ಪರಾಜ್...

ಪ್ರಧಾನಿ ಮೋದಿಯವರೇ.. ದಕ್ಷಿಣ ಕನ್ನಡಕ್ಕೆ ನೀವು ಕೊಟ್ಟದ್ದೆಷ್ಟು- ಸಿಎಂ ಪ್ರಶ್ನೆ

ಬೆಂಗಳೂರು: “ನನ್ನ ತೆರಿಗೆ ನನ್ನ ಹಕ್ಕು" ಅಭಿಯಾನದ ಮುಂದುವರಿದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಚುನಾವಣ ರ್‍ಯಾಲಿ ನಡೆಸಿದ ದಕ್ಷಿಣ ಕನ್ನಡಕ್ಕೆ ತಮ್ಮ ಕೊಡುಗೆಯ ಲೆಕ್ಕ ಕೊಡುವಂತೆ ಕಾಂಗ್ರೆಸ್‌ ಕೇಳಿದೆ. ಪ್ರಧಾನಿ ನರೇಂದ್ರ ಮೋದಿ...