ಬಂಟ್ವಾಳ: ಯಕ್ಷಗಾನದ ಹಿರಿಯ ಕಲಾವಿದ, ಸಂಘಟಕ ಸರಪಾಡಿ ಅಶೋಕ ಶೆಟ್ಟಿ ಅವರ 6೦ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಷಷ್ಟ್ಯಬ್ದ ಸಮಾರಂಭ ಆಯೋಜಿಸುವ ನಿಟ್ಟಿನಲ್ಲಿ ಸಮಾಲೋಚನಾ ಸಭೆಯು ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಸಮಾರಂಭದ ರೂಪುರೇಖೆ, ಕಾರ್ಯಕ್ರಮ ಸಂಯೋಜನೆ, ಸಂಚಿಕೆ ಬಿಡುಗಡೆಯ ಕುರಿತು ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಸಭೆ ಸೇರಿ ಅಭಿನಂದನಾ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಯಿತು.
ಪ್ರಮುಖರಾದ ಜಗನ್ನಾಥ ಚೌಟ ಬದಿಗುಡ್ಡೆ, ನಾರಾಯಣ ಭಟ್ ಕೈಯೂರು, ಎಚ್.ಕೆ.ನೈನಾಡು, ರತ್ನಾಕರ ಶೆಟ್ಟಿ ಕಲ್ಲಡ್ಕ, ಡಾ| ಬಾಲಚಂದ್ರ ಶೆಟ್ಟಿ ಸರಪಾಡಿ, ಡಿ.ಮನೋಹರ್‌ಕುಮಾರ್, ರಾಜೇಶ್ ಗುಜರನ್, ಮೋಹನದಾಸ ಕೊಟ್ಟಾರಿ, ತಾರಾನಾಥ ಕೊಟ್ಟಾರಿ ತೇವು, ಎಂ.ನಾ.ಚಂಬಲ್ತಿಮಾರ್, ರತ್ನದೇವ್ ಪುಂಜಾಲಕಟ್ಟೆ, ಮಂಜು ವಿಟ್ಲ, ರವಿರಾಜ್ ಶೆಟ್ಟಿ ಪೆರುವಾಯಿ, ಗಣೇಶ್ ರೈ ಪುತ್ತೂರು, ಯೋಗೀಶ್ ಶೆಟ್ಟಿ ಆರುಮುಡಿ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಯಿತು.
ಸಭೆಯಲ್ಲಿ ಸುಭಾಶ್ಚಂದ್ರ ಜೈನ್, ಉದಯಕುಮಾರ್ ಬಿ, ಎಸ್.ಶಂಕರನಾರಾಯಣ ಹೊಳ್ಳ, ಮೋಹನದಾಸ ಶೆಟ್ಟಿ ಮುನ್ನಲಾಯಿಗುತ್ತು, ಶಿವರಾಮ ಶೆಟ್ಟಿ ದೋಟ, ರಾಧಾಕೃಷ್ಣ ರೈ ಕೊಟ್ಟುಂಜ, ದಯಾನಂದ ಶೆಟ್ಟಿ, ಪ್ರಕಾಶ್ಚಂದ್ರ ಆಳ್ವ, ಕೀರ್ತನ್ ಶೆಟ್ಟಿ ವಗೆನಾಡು, ದಿನೇಶ್ ಶೆಟ್ಟಿ, ಪ್ರಶಾಂತ್ ಆಚಾರ್, ಆನಂದ ಶೆಟ್ಟಿ ಬಾಚಕೆರೆ, ಆನಂದ ಶೆಟ್ಟಿ ಆರುಮುಡಿ, ಯಾದವ ಶೆಟ್ಟಿ ಹಂಡೀರು, ಅಖಿಲ್ ಶೆಟ್ಟಿ ಕುರ್ಯಾಳ, ಮನೋಜ್ ಶೆಟ್ಟಿ, ಎಂ.ಅಪ್ಪಯ್ಯ ಶೆಟ್ಟಿ, ಅನಾರು ಕೃಷ್ಣ ಶರ್ಮ, ನಯನಾಡು ಹರೀಶ ಶೆಟ್ಟಿ, ಕೆ.ಕುಸುಮಾಕರ ಶೆಟ್ಟಿ, ವಿಕ್ರಮ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.