ಬಂಟ್ವಾಳ: ಬಿ.ಸಿ. ರೋಡು ಕೈಕಂಬದ ಸರಿದಂತರ ಪ್ರಕಾಶನದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ ನಡೆಯಿತು.

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಮಾತನಾಡಿ, ಹಿರಿಯರಿಗೆ ಸಾಂತ್ವನದ ನುಡಿಗಳಾಗಲಿ ಅಥವಾ ಅನುಕಂಪದ ಮಾತುಗಳಾಗಲೀ ಬೇಕಾಗಿಲ್ಲ, ಬದಲಾಗಿ ಧೈರ್ಯ ತುಂಬುವ ಮತ್ತು ಅವರಲ್ಲಿರುವ ಬೌದ್ಧಿಕ ಸಂಪನ್ಮೂಲಗಳನ್ನು ಉಪಯೋಗಿಸಿಕೊಳ್ಳುವ ಕೆಲಸಕಾರ್ಯಗಳು ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸರಿದಂತರ ಪ್ರಕಾಶನದ ರಾಜಮಣಿ ರಾಮಕುಂಜ ಪ್ರಾರ್ಥಿಸಿ, ಪುತ್ತೂರಿನ ಲೋಕೇಶ್ ಹೆಗ್ಡೆ ಸ್ವಾಗತಿಸಿದರು. ಪ್ರತಿಷ್ಠಾನದ ಕೇಂದ್ರ ಕಾರ್ಯದರ್ಶಿ ಗೇರುಕಟ್ಟೆ ದಿವಾಕರ ಆಚಾರ್ಯ ಈ ಹಿಂದಿನ ಕಾರ್ಯ ಚಟುವಟಿಕೆಗಳ ವರದಿ ನೀಡಿದರು. ಕೇಂದ್ರದ ಉಪಾಧ್ಯಕ್ಷ ಜಯರಾಮ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ದುಗ್ಗಪ್ಪ ವಂದಿಸಿದರು.ವಿವಿಧ ತಾಲೂಕುಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.
ಪ್ರತಿಷ್ಠಾನದ ಕೇಂದ್ರ ಗೌರವಾಧ್ಯಕ್ಷ ಪ್ರೊ. ಎ.ವಿ. ನಾರಾಯಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವಿಭಾಗದ ಸಂಚಾಲಕಿ ಪ್ರೊ. ವತ್ಸಲಾ ರಾಜ್ಞಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.