ವಿಟ್ಲ: ಮೈರ – ಎರುಂಬು (ಕುಕ್ಕುದಪುಣಿ) ಜನರ ಬಹು ದಿನಗಳ ಬೇಡಿಕೆಯ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಸುಮಾರು ರೂ.80 ಲಕ್ಷ ವೆಚ್ಚದಲ್ಲಿ ಪರಿಶಿಷ್ಟ ಕಾಲನಿಗೆ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು ಉದ್ಘಾಟಿಸಿದರು.

ಬಳಿಕ ಅನುದಾನ ಒದಗಿಸಿಕೊಡಲು ಶ್ರಮಿಸಿದ ಕೇಪು ಶಕ್ತಿ ಕೇಂದ್ರದ ಅಧ್ಯಕ್ಷರಾದ ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ, ಕುಂಡಕೋಳಿ ರಾಜೀವ ಭಂಡಾರಿ, ಕೇಪು ಗ್ರಾಮ ಪಂಚಾಯತ್ ಸದಸ್ಯರಾದ ಬೇಡೆಮಾರ್ ಜಗಜೀವನ್ ರಾಮ್ ಶೆಟ್ಟಿ, ಕಲ್ಲಂಗಳ ಪುರುಷೋತ್ತಮ ಗೌಡ, ಅಳಿಕೆ ಶಕ್ತಿ ಕೇಂದ್ರದ ಅಧ್ಯಕ್ಷರಾದ ಸದಾನಂದ ಶೆಟ್ಟಿ ಇವರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಇನ್ನು ಈ ಸಂದರ್ಭದಲ್ಲಿ ಕೇಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ತಾರನಾಥ ಆಳ್ವ ಮದಕ, ನಿವೃತ್ತ ಸೀನಿಯರ್ ಮ್ಯಾನೇಜರ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಈಶ್ವರ ಭಟ್, ಶಂಕರ ಭಟ್, ಮ್ಯಾನೇಜರ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಅಶೋಕ ಮೈರ ಉಪನ್ಯಾಸಕರು, ಜನತಾ ಪದವಿ ಪೂರ್ವ ಕಾಲೇಜು, ಅಡ್ಯನಡ್ಕ, ಹರೀಶ್ ಕುಲಾಲ್ ಮೈರ, ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆ, ಅಳಿಕೆ, ವಿಜಯ ಕುಮಾರ್, ಎ.ಜಿ.ಎಂ., ಸೇಲ್ಸ್ & ಸರ್ವಿಸ್, ಟಾಟಾ ಹಿಟಾಚಿ ಡೀಲರ್ಸ್ ಮಂಗಳೂರು, ಸಂತೋಷ್ ಕರವೀರ, ರಾಜೇಶ್ ಕರವೀರ, ಪಡಂಬೈಲುಗುತ್ತು ಸತೀಶ ರೈ ಮೈರ, ಪದ್ಮನಾಭ ಕಲ್ಲಂಗಳ, ಪ್ರವೀಣ್ ಶೆಟ್ಟಿ ಮೈರ, ರಾಜೇಶ್ ಶೆಟ್ಟಿ ಮೈರ, ಚಂದ್ರಶೇಖರ ಕುಲಾಲ್ ಮೈರ, ಉದಯ ಪ್ರಕಾಶ್ ಮೈರ ಮತ್ತು ಊರವರು ಉಪಸ್ಥಿತರಿದ್ದರು.