ಬಂಟ್ವಾಳ: ಆಟೋ ಚಾಲನೆಯ ವೃತ್ತಿ ಸೇವಾ ಕ್ಷೇತ್ರದ ದುಡಿಮೆಯಾಗಿದ್ದು, ಚಾಲಕರ ಶ್ರೇಯೋಭಿವೃದ್ಧಿಯ ದೃಷ್ಟಿಯಿಂದ ಕಟ್ಟಡ ಕಾರ್ಮಿಕರಂತೆ ಮಂಡಳಿ ರಚಿಸುವ ಯೋಜನೆ ಸರಕಾರದ ಮುಂದಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.

ಅವರು ಮಣ್ಣಿಹಳ್ಳದ ವಾಮದಪದವು ಕ್ರಾಸ್ ಹಾಗೂ ಸರಪಾಡಿ ಕ್ರಾಸ್‌ನಲ್ಲಿ ಶಾಸಕರ ನಿಽಯ ಅನುದಾನದಿಂದ ನಿರ್ಮಾಣಗೊಂಡ ೨ ರಿಕ್ಷಾ ಪಾರ್ಕ್ಗಳನ್ನು ಉದ್ಘಾಟಿಸಿದರು. ಕಾರ್ಮಿಕರ ಮಂಡಳಿ ಮೂಲಕ ಬಂಟ್ವಾಳ ಕ್ಷೇತ್ರಕ್ಕೆ ಸಾಕಷ್ಟು ನೆರವು ಲಭಿಸಿದ್ದು, ೨೯ ಸಾವಿರ ಮಂದಿಗೆ ಬಸ್ಸುಪಾಸ್, ೨೦೦ಕ್ಕೂ ಅಽಕ ಕಾರ್ಮಿಕರ ಮನೆ ನಿರ್ಮಾಣಕ್ಕೆ ಸಹಾಯಧನ, ಜತೆಗೆ ಕ್ಷೇತ್ರದ ೩೦ ಸಾವಿರ ರೈತರಿಗೆ ರೈತ ಸಮ್ಮಾನ್ ಸಹಾಯಧನ, ೧೬ ಕೋ.ರೂ. ವಿಮಾ ಮೊತ್ತ ಲಭಿಸಿದೆ. ಮಣಿಹಳ್ಳ ರಿಕ್ಷಾ ಪಾರ್ಕ್ನ ಶೌಚಾಲಯದ ಬೇಡಿಕೆಗೆ ಸಂಬಂಧಿಸಿದಂತೆ ಸ್ಥಳಾವಕಾಶ ನೋಡಿಕೊಂಡು ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಬಿಎಂಎಸ್ ಮಾಜಿ ರಾಜ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ, ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಯು., ಬಂಟ್ವಾಳ ತಾಲೂಕು ಆಟೋ ರಿಕ್ಷಾ-ಚಾಲಕ ಮಾಲಕ ಸಂಘ(ಬಿಎಂಎಸ್) ಅಧ್ಯಕ್ಷ ವಿಶ್ವನಾಥ ಚಂಡ್ತಿಮಾರ್, ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ನಾವೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸುಧಾಮಣಿ, ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ನಾರಾಯಣ ಪೂಜಾರಿ, ಗೌರವ ಸಲಹೆಗಾರ ಸದಾನಂದ ಹಳೆಗೇಟು, ಸರಪಾಡಿ ಕ್ರಾಸ್ ರಿಕ್ಷಾ ಪಾರ್ಕ್ ಅಧ್ಯಕ್ಷ ವಸಂತ ದಾರಂದಕೋಡಿ ಉಪಸ್ಥಿತರಿದ್ದರು.
ವಾಮದಪದವು ಕ್ರಾಸ್ ಪಾರ್ಕ್ ಉದ್ಘಾಟನೆಯ ವೇಳೆ ಪುರಸಭಾ ಸದಸ್ಯೆ ಮೀನಾಕ್ಷಿ ಗೌಡ, ಪ್ರಮುಖರಾದ ರೊನಾಲ್ಡ್ ಡಿಸೋಜಾ, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ, ಗುರುದತ್ತ್ ಉಪಸ್ಥಿತರಿದ್ದರು. ಎರಡೂ ರಿಕ್ಷಾ ಪಾರ್ಕ್ ಪರವಾಗಿ ಶಾಸಕರನ್ನು ಗೌರವಿಸಲಾಯಿತು.
ಬಿಎಂಎಸ್ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್ ಮಣಿಹಳ್ಳ ಸ್ವಾಗತಿಸಿದರು. ಹರ್ಷರಾಜ್ ನಾವೂರು ವಂದಿಸಿದರು. ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು.