Thursday, September 28, 2023

ವಿಜಯ ದಶಮಿಯಂದೇ ರಮ್ಯಾ ಫ್ಯಾನ್ಸ್​​ಗೆ ಬಿಗ್‌ ಸರ್ಪೈಸ್

Must read

ಬೆಂಗಳೂರು: ದಸರಾ ಹಬ್ಬದ ದಿನದಂದು ಮೋಹಕ ತಾರೆ ರಮ್ಯಾ ಅವರು ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನ ನೀಡಿದ್ದಾರೆ. ಹೌದು,ಕನ್ನಡ ಚಿತ್ರರಂಗಕ್ಕೆ ರಮ್ಯಾ ಅವರು ಕಮ್​ಬ್ಯಾಕ್​ ಮಾಡಿದ್ದಾರೆ. ನಿರ್ಮಾಪಕಿಯಾಗಿ ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಅವರ ಮೊದಲ ನಿರ್ಮಾಣದ ಸಿನಿಮಾಗೆ ಈಗ ಶೀರ್ಷಿಕೆ ಅನೌನ್ಸ್​ ಆಗಿದ್ದು, ಸ್ವಾತಿ ಮುತ್ತಿನ ಮಳೆ ಹನಿಯೇ ಎಂದು ಟೈಟಲ್​ ಇಡಲಾಗಿದೆ. ವಿಶೇಷ ಏನೆಂದರೆ, ಈ ಸಿನಿಮಾಗೆ ರಾಜ್​ ಬಿ. ಶೆಟ್ಟಿ ಅವರು ನಿರ್ದೇಶನ ಮಾಡಲಿದ್ದಾರೆ.

ತಮ್ಮದೇ ಆಪಲ್​ ಬಾಕ್ಸ್​ ಸ್ಟುಡಿಯೋಸ್​ ಬ್ಯಾನರ್​​ನಲ್ಲಿ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ರಮ್ಯಾ  ರೀ ಎಂಟ್ರಿ ಪಡೆಯುತ್ತಿದ್ದಾರೆ. ನಟನೆಯ ಜತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ರಮ್ಯಾ ಕಂಬ್ಯಾಕ್​ ಸಿನಿಮಾಗೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ರಾಜ್ ಬಿ. ಶೆಟ್ಟಿ ನಟನೆಯನ್ನೂ ಮಾಡುತ್ತಿದ್ದಾರೆ.

ಇನ್ನು ರಮ್ಯಾ ತಮ್ಮ ಕಂಬ್ಯಾಕ್ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ರಮ್ಯಾ ನೀಡಿದ ಸರ್ಪೈಸ್​ಗೆ ಫ್ಯಾನ್​​ ಖುಷಿಯಾಗಿದ್ದಾರೆ.

More articles

Latest article