Saturday, April 6, 2024

ನ.5 ರಂದು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ ಇದರ ವತಿಯಿಂದ ಪುಂಜಾಲಕಟ್ಟೆ ಉತ್ಸವ

ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ ಇದರ ವತಿಯಿಂದ ನ.5 ರಂದು ಸಂಜೆ 6.30ಗಂಟೆಗೆ ಪುಂಜಾಲಕಟ್ಟೆ ಉತ್ಸವ ಕಾರ್ಯಕ್ರಮ ಪಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ.

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷ ಯಂ.ತುಂಗಪ್ಪ ಬಂಗೇರವರ ನೇತೃತ್ವದಲ್ಲಿ, ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಎಂ.ಪ್ರಶಾಂತ್‌ ಪುಂಜಾಲಕಟ್ಟೆ ರವರ ಅಧ್ಯಕ್ಷತೆಯಲ್ಲಿ ರಾಜೇಶ್‌ ಕಣ್ಣೂರ್‌ ಇವರ ಸಂಯೋಜನೆಯೊಂದಿಗೆ ರಾಜ್ಯಮಟ್ಟದ ಗ್ರೂಪ್‌ ಡ್ಯಾನ್ಸ್‌ ಸ್ಪರ್ಧಾ ಕಾಯಕ್ರಮ ಸ್ವಸ್ತಿಕ್ ಡ್ಯಾನ್ಸ್‌ ಬ್ಲಾಸ್ಟ್‌-2022 ಆಯೋಜಿಸಲಾಗಿದೆ.

ರಾಜ್ಯಮಟ್ಟದ ಗ್ರೂಪ್‌ ಡ್ಯಾನ್ಸ್‌ ವಿಜೇತರಿಗೆ ಪ್ರಥಮ 25,000 ಮತ್ತು ಸ್ವಸ್ತಿಕ್ ಡ್ಯಾನ್ಸ್ ಬ್ಲಾಸ್ಟ್ ಟ್ರೋಫಿ, ದ್ವಿತೀಯ 15,000 ಮತ್ತು ಸ್ವಸ್ತಿಕ್ ಡ್ಯಾನ್ ಬ್ಲಾಸ್ಟ್ ಟ್ರೋಫಿ, ತೃತಿಯ 10,000 ಮತ್ತು ಸ್ವಸ್ತಿಕ್ ಡ್ಯಾನ್ಸ್ ಬ್ಲಾಸ್ಟ್ ಟ್ರೋಫಿ ನೀಡಲಾಗುತ್ತದೆ.

ಸ್ಪರ್ಧಾ ಸೂಚನೆಗಳು:

1) ಸ್ವಸ್ತಿಕ್ ಡ್ಯಾನ್ಸ್ ಬ್ಲಾಸ್ಟ್ ಸ್ಪರ್ಧೆಗೆ ಕನಿಷ್ಠ 8 ಜನ

2) ಡ್ಯಾನ್ಸ್ ಸ್ಪರ್ದಿಗಳಿಗೆ ತಮ್ಮ ಸಂಗೀತ ಸಿಡಿ /ಪೆನ್ ಡ್ರೈವ್ ಗಳನ್ನು ತಮ್ಮ ಸ್ಪರ್ಧಾ ಕಾರ್ಯಕ್ರಮದ ಮೊದಲು ಧ್ವನಿವರ್ಧಕರಲ್ಲಿ ನೀಡಬೇಕು.

3) ಸ್ಪರ್ದಾಳುಗಳು ಯಾವುದೇ ತರಹದ ಬೆಂಕಿ ಸುಡುಮದ್ದು ಉಪಯೋಗಿಸುವಂತಿಲ್ಲ. ನೃತ್ಯದ ಸಾಹಸ ಮಾಡುವಾಗ ಜಾಗರೂಕರಾಗಿರಬೇಕು. ಯಾವುದೇ ಅನಾಹುತಗಳಿಗೆ ಸಂಘಟಕರು ಜವಾಬ್ದಾರರಲ್ಲ.

4) ಭಾಗವಹಿಸುವ ಸ್ಪರ್ದಾಳುಗಳು ಯಾವುದೇ ಜಾತಿ ಮತ ಧರ್ಮದ ನಿಂದನೆಗೆ ಆಸ್ಪದವಿರುವುದಿಲ್ಲ. ಎಲ್ಲಾ ಸ್ಪರ್ಧೆಗಳ ಅಂತಿಮ ತೀರ್ಮಾನ ಸಂಘಟಕರದ್ದಾಗಿರುತ್ತದೆ.

ಇನ್ನು ಸ್ಪರ್ದಾಳುಗಳು ತಮ್ಮ ಹೆಸರನ್ನು ನ.03 ರ ಒಳಗೆ  ನೊಂದಾಯಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕ್ಲಬಿನ ಸಂಚಾಲಕ ರಾಜೇಶ್‌.ಪಿ.ಪುಂಜಾಲಕಟ್ಟೆ 9901098038 ಸಂಪರ್ಕಿಸಿ

More from the blog

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...

ಪ್ರಧಾನಿ ಮೋದಿ ಕರೆ : ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ" ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ...

ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ : ಕಡಬ, ಅಜೆಕಾರಿನಲ್ಲಿ ದಾಖಲೆಯ ಉಷ್ಣಾಂಶ

ಮಂಗಳೂರು: ಮುಂದಿನ ಎರಡು ದಿನಗಳ ಕಾಲ ಬಿಸಿಲಿನ ಶಾಕ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಕರಾವಳಿ ಭಾಗದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಎ. 4ರಿಂದ 5ರ...

ಕಡಬ: ಚೇರು ಪ್ರದೇಶದ ಮನೆಗೆ ಶಂಕಿತರ ಭೇಟಿ : ಊಟ ಮಾಡಿ, ಸಾಮಗ್ರಿ ಪಡೆದು ತೆರಳಿದ ಶಂಕಿತರು

ಸುಬ್ರಹ್ಮಣ್ಯ: ಕಡಬ ಪೊಲೀಸ್‌ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ಗುರುವಾರ ರಾತ್ರಿ ವೇಳೆ ಶಂಕಿತರ ತಂಡ ಆಗಮಿಸಿ ಊಟ, ಮಾಡಿ ದಿನಸಿ ಸಾಮಾಗ್ರಿಗಳನ್ನು ಪಡೆದು ತೆರಳಿರುವ ವಿಷಯ ಶುಕ್ರವಾರ ಸಂಜೆ ವೇಳೆಗೆ ಬೆಳಕಿಗೆ ಬಂದಿದೆ. ತಾಲೂಕಿನ...