Wednesday, April 10, 2024

ಪ್ರೊ ಕಬಡ್ಡಿ 9ನೇ ಆವೃತ್ತಿಯಲ್ಲಿ ಗೆದ್ದು ಬೀಗಿದ ಬೆಂಗಳೂರು ಬುಲ್ಸ್

ವಿವೋ ಪ್ರೊ ಕಬಡ್ಡಿ ಲೀಗ್‌  9ನೇ ಆವೃತ್ತಿಗೆ ಚಾಲನೆ ಸಿಕ್ಕಿದ್ದು, ಮೊದಲ ದಿನ ನಡೆದ ಎರಡನೇ ಪಂದ್ಯದಲ್ಲಿ  ಬೆಂಗಳೂರು ಬುಲ್ಸ್‌ ತಂಡ ಗೆದ್ದು ಭರ್ಜರಿ ಶುಭಾರಂಭ ಮಾಡಿದೆ.

ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ಬುಲ್ಸ್‌ ತಂಡದ ನಾಯಕ ಮಹೇಂದರ್ ಸಿಂಗ್ ಡಿಫೆನ್ಸ್‌ ಆಯ್ದುಕೊಂಡರು. ಟೈಟಾನ್ಸ್‌ ತಂಡಕ್ಕೆ ಮೊದಲ ನಿಮಿಷದಲ್ಲೇ ವಿನ ಟಚ್‌ ಪಾಯಿಂಟ್‌ ಮೂಲಕ ಅಂಕಗಳಿಸಿಕೊಟ್ಟರು. ಇದರ ಬೆನ್ನಲ್ಲೇ ಸಿದ್ದಾರ್ಥ್‌ ದೇಸಾಯಿ ಬೋನಸ್ ಪಾಯಿಂಟ್ ಗಳಿಸಿದರು. ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಟೈಟಾನ್ಸ್‌ ತಂಡದ ಡು ಆರ್ ಡೈ ರೈಡ್‌ನಲ್ಲಿ ಮೋನು ಗೋಯೆತ್ ಅವರನ್ನು ಟ್ಯಾಕಲ್ ಮಾಡುವಲ್ಲಿ ಸೌರಭ್ ಯಶಸ್ವಿಯಾದರು.

ಪಂದ್ಯದ ಬಹುಭಾಗದಲ್ಲಿ ಉಭಯ ತಂಡಗಳು ಸಮಬಲ ಗಳಿಸುತ್ತಲೇ ಸಾಗಿದವು. ಆದರೆ ಒಟ್ಟು ಏಳು ಅಂಕ ಗಳಿಸಿ ಮಿಂಚಿದ ನೀರಜ್, ತಲಾ ಐದು ಅಂಕ ಗಳಿಸಿದ ಖಂಡೋಲಾ ಮತ್ತು ಭರತ್ ಬುಲ್ಸ್‌ ತಂಡಕ್ಕೆ ಬಲ ತುಂಬಿದರು. ಬಲಿಷ್ಠ ರಕ್ಷಣಾ ತಂತ್ರ ಹೆಣೆದ ಡಿಫೆಂಡರ್ ಮಹೇಂದರ್ ಕೂಡ ನಾಲ್ಕು ಅಂಕ ಗಳಿಸಿದರು. ಅವರಿಗೆ ಲೆಫ್ಟ್‌ ಕಾರ್ನರ್‌ ಡಿಫೆಂಡರ್ ಸೌರಭ್ ನಂದಾಲ್ ಕೂಡ ಉತ್ತಮ ಜೊತೆ ನೀಡಿದರು. ಟೈಟನ್ಸ್‌ ಪರವಾಗಿ ರಜನೀಶ್ ಏಳು ಅಂಕ ಗಳಿಸಿದರು. ಪ್ರಥಮಾರ್ಧ ಕೊನೆಯಲ್ಲಿ ನೀಡಿದ ದಿಟ್ಟ ಹೋರಾಟವನ್ನು ಪಂದ್ಯದ ಅಂತಿಮಯ ಹಂತದಲ್ಲಿ ಮರು ಪ್ರದರ್ಶನ ನೀಡುವಲ್ಲಿ ತೆಲುಗು ಟೈಟಾನ್ಸ್‌ ವಿಫಲವಾಯಿತು. ಅಂತಿಮವಾಗಿ ಬೆಂಗಳೂರು ಬುಲ್ಸ್‌ ತಂಡ ತೆಲುಗು ಟೈಟಾನ್ಸ್‌ ವಿರುದ್ಧ 34-29 ಅಂಕಗಳ ಅಂತರದಲ್ಲಿ ಗೆದ್ದು ಬೀಗಿತು

ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ತಂಡವು ಯು ಮುಂಬಾ ವಿರುದ್ಧ 41-27 ಅಂತರದಲ್ಲಿ ಜಯ ಗಳಿಸುವ ಮೂಲಕ ಶುಭಾರಂಭ ಮಾಡಿತು. ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಡೆಲ್ಲಿ ತಂಡದ ನಾಯಕ ನಾಯಕ ನವೀನ್‌ ಚುರುಕಿನ ದಾಳಿ ನಡೆಸಿದರು. ಅವರು 13 ಅಂಕಗಳನ್ನು ಗಳಿಸಿದರು. ನವೀನ್‌ ಲೀಗ್‌ ಇತಿಹಾಸಲ್ಲಿ 43ನೇ ಬಾರಿಗೆ ಸೂಪರ್‌ ಟೆನ್ ಅಂಕಗಳನ್ನು ಗಳಿಸಿದ ಸಾಧನೆ ಮಾಡಿದರು. ಇದರಲ್ಲಿ 11 ಟಚ್‌ ಪಾಯಿಂಟ್‌, 2 ಬೋನಸ್‌ ಪಾಯಿಂಟ್‌ ಸೇರಿತ್ತು. ದ್ವಿತೀಯಾರ್ಧದಲ್ಲೂ ಡೆಲ್ಲಿ ಇದೇ ಲಯದಲ್ಲಿ ಸಾಗಿತು. ಅಶು ಮಲಿಕ್‌ ಉತ್ತಮ ಪ್ರದರ್ಶನ ನೀಡಿ 7 ಅಂಕ ಗಳಿಸಿದರು. ಡಿಫೆಂಡರ್‌ಗಳಾದ ಸಂದೀಪ್‌ ಧುಲ್‌, ಕೃಶನ್‌, ವಿಶಾಲ್‌ ತಲಾ 4 ಅಂಕ ಸಂಪಾದಿಸಿದರು.

ಇಂದಿನ ಪಂದ್ಯಗಳು:

ಪಟ್ನಾ ಪೈರೆಟ್ಸ್-ಪುಣೇರಿ ಪಲ್ಟನ್

ಗುಜರಾತ್ ಜೈಂಟ್ಸ್-ತಮಿಳ್ ತಲೈವಾಸ್

ಬೆಂಗಾಲ್ ವಾರಿಯರ್ಸ್-ಹರಿಯಾಣ ಸ್ಟೀಲರ್ಸ್

 

More from the blog

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ ನಡೆಯಿತು. ಖತೀಬರಾದ ಅಸ್ವೀಫ್ ಧಾರಿಮಿ ಅವರು ನೇತೃತ್ವ ವಹಿಸಿ ಈದ್ ಸಂದೇಶವನ್ನು ಸಾರಿದರು.. ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್, ಎನ್‌.ಜೆ.ಎಮ್ ಮಸೀದಿ  ಇದರ ಅಧ್ಯಕ್ಷ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಏ.10ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ…. ರಿಸಲ್ಟ್​ ಚೆಕ್ ಮಾಡೋದು ಹೇಗೆ?

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುತ್ತಿದೆ. ಎಲ್ಲ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಕ್ತಾಯವಾದ ಹಿನ್ನಲೆ ನಾಳೆ ಫಲಿತಾಂಶ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಾಗಿದೆ. ನಾಳೆ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...