Saturday, April 6, 2024

ಪತ್ರಕರ್ತರು ಸೇರಿದಂತೆ ಆರು ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ : ಇಲ್ಲಿದೆ ವಿವರ

ಕೊಡುಗೈ ದಾನಿಯಾಗಿ ಚಿರಪರಿಚಿತರಾಗಿರುವ, ಬೀಡಿ ಉದ್ಯಮದಲ್ಲಿ ಸಾಧನೆ ಜೊತೆಗೆ ಹಲವಾರು ಕುಟುಂಬಕ್ಕೆ ಉದ್ಯೋಗ ನೀಡಿ , ಜೀವನಕ್ಕೆ ಆಧಾರವಾಗಿರುವ ಸೇಸಪ್ಪ ಕೋಟ್ಯಾನ್ ಅವರ ಪರಿಚಯ

ಹೆಸರು: ಸೇಸಪ್ಪ ಕೋಟ್ಯಾನ್

ಜನನ ದಿನಾಂಕ: 10.05.1947

ಜನನ ಸ್ಥಳ: ಬಂಟ್ವಾಳ ತಾಲೂಕಿನ ಅಲ್ಪಾಡಿ ಗ್ರಾಮದ ಪಚ್ಚಿನಡ್ಕ,

ತಂದೆ: ಅಂತಪ್ಪ ಪೂಜಾರಿ

ತಾಯಿ: ಕಮಲಾ ಪೂಜಾರ್ತಿ

ವೃತ್ತಿ: ಉದ್ಯಮಿ ಕೃಷಿಕ

ಮಡದಿ: ಚಂದ್ರಾವತಿ

ಮಕ್ಕಳು: ಮಗ- ಭುವನೇಶ್, ಪ್ರಮೀಳ, ಶೋಭಾ, ಭಾರತಿ ಮತ್ತು ಪುಷ್ಪ

ಸಮಾಜ ಸೇವೆಯ ಮುಖಗಳು: ಕೊಟ್ಟ ದಾನ ಯಾರಿಗೂ ತಿಳಿಯಬಾರದೆನ್ನುವ ಇರಾದೆ ಇವರದ್ದು. ಹಾಗೆಯೇ ಬದುಕಿದವರೂ ಕೂಡ. ಊರಿಗೆ ಸಂಬಂಧಪಟ್ಟ ಹಲವಾರು ಶುಭ ಕಾರ್ಯಗಳಲ್ಲಿ ಅವರ ಕೊಡುಗೆಯ ಮೇಲುಗೈಯಿದ ಇಪ್ಪತ್ತಾರು ವರ್ಷಗಳಿಂದ ಬಂಟ್ವಾಳ ತಾಲೂಕಿನ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರು. ಸಂಘದ ಮೂಲಕ ಆರ್ಥಿಕವಾಗಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ.

ಬಿ.ಸಿ ರೋಡಿನ ಅನ್ನಪೂರ್ಣೇಶ್ವರೀ ದೇವಸ್ಥಾನದ ಸ್ಥಾಪಕಾಧ್ಯಕ್ಷರು. ಕಳೆದ ಹತ್ತು ವರ್ಷಗಳಿಂದ ಅಧ್ಯಕ್ಷರಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿದ ಹಸನ್ಮುಖಿ ಚೇತನ. ಕೊರೋನ ಸಂದರ್ಭದಲ್ಲಿ ಸಾವಿರದ ಐನೂರು ಕುಟುಂಬಗಳಿಗೆ ಇಪ್ಪತ್ತೈದು ಕಿಲೋ ಅಕ್ಕಿ ಮತ್ತು ತಲಾ ರೂ.500 ರಂತೆ ದಾನ ಮಾಡಿ ಮಾನವಿಯತೆ ಮೆರೆದವರು.

ಹಲವಾರು ದೇವಸ್ಥಾನ ದೈವಸ್ಥಾನಗಳಾದಿಯಾಗಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ.


ಬಡಜನರ ಪಾಲಿನ ಎರ್ಮಾಲ್ ಡಾಕ್ಟರ್ ( ಎರ್ಮಾಲದ ಡಾಕ್ಟರು) ಎಂದೇ ಹೆಸರುವಾಸಿಯಾದ ಡಾ! ಭಾಸ್ಕರ್ ರಾವ್ ಅವರ ಪರಿಚಯ ಇಲ್ಲಿದೆ

ಹೆಸರು: ಡಾ. ಭಾಸ್ಕರ್ ರಾವ್,

ಪ್ರಾಯ: 65 ವರ್ಷ

ವಿಳಾಸ: ಎರ್ಮಳ ಮನೆ, ಅರಳ ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು,

ಬಂಟ್ವಾಳ ತಾಲೂಕಿನ ಅರಳಗ್ರಾಮದ ಎರ್ಮಳ ಎಂಬಲ್ಲಿ ಗಣೇಶ್ ಕ್ಲಿನಿಕ್ ಎಂಬ ಹೆಸರಿನಲ್ಲಿ ಕಳೆದ ಸುಮಾರು 43 ವರ್ಷಗಳಿಂದ ಜನರಲ್ ಸಿಸಿಯನ್ ಆಗಿ ಗ್ರಾಮೀಣ ಜನತೆಗೆ ವೈದ್ಯಕೀಯ ಸೇವೆಯನ್ನು ನೀಡುತ್ತಾ ಬಂದಿರುತ್ತಾರೆ. ಹಳ್ಳಿಯ ಬಡ ಜನರಿಗೆ ಅತೀ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುತ್ತಿರುವ ಇವರು ಎರ್ಮಳ ಡಾಕ್ಟರ್ ಎಂದೇ ಮನೆ ಮಾತಾಗಿರುತ್ತಾರೆ. ಅನೇಕ ತುರ್ತು ಸಂದರ್ಭಗಳಲ್ಲಿ ದಿನದ 24 ಗಂಟೆಗಳ ಯಾವುದೇ ಸಮಯದಲ್ಲೇ ಆದರೂ ರೋಗಿ ಗಳ ಮನೆಗೆ ತೆರಳ ಚಿಕಿತ್ಸೆ ನೀಡಿ ಅನೇಕ ಬಡಜನರ ಜೀವ ಉಳಿಸಿದ ಕೀರ್ತಿ ಇವರದ್ದು. ಇಂದಿಗೂ ದಿನದಲ್ಲಿ 200ಕ್ಕೂ ಹೆಚ್ಚು ರೋಗಿ ಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಔಷಧಿ ಜೊತೆಗೆ ರೋಗಿ ಗಳಿಗೆ ಮಾನಸಿಕ ಧೈರ್ಯ ತುಂಬಿ ಶೀಘ್ರ ಗುಣಮುಖರನ್ನಾಗಿ ಮಾಡುವ ಬಡ ಜನರ ವೈದ್ಯರೆಂದೇ ಇವರು ಹೆಸರುವಾಸಿಯಾಗಿದ್ದಾರೆ.

 


ದ.ಕ ಜಿಲ್ಲೆ. ಬಂಟ್ವಾಳ ತಾಲೂಕಿನ ದೇವಶಾ ಮೂಡುರು ಗ್ರಾಮದ ಕುಂಟಾಲ ಪಲ್ಲೆಯ ವೆಂಕಪ್ಪ ಪಂಡಿತ್ ಇವರು ಒಬ್ಬ ಪ್ರಮಾಣಿಕ, ನಿಷ್ಕಲ್ಮಶ ಹೃದಯವಂತ, ಒಬ್ಬ ಕೊಡುಗೈದಾರಿ, ಪ್ರಸಿದ್ಧ ದೈವವರ್ತಕರು, ಜ್ಯೋತಿಷ್ಯರು, ನಾಟಿ ವೈದ್ಯರಾಗಿ ಊರು- ಪರಿಣಿತರಾಗಿದ್ದಾರೆ.

ಶ್ರೀ ಚೆನ್ನ ಹಾಗೂ ಶ್ರೀಮತಿ ಅಂಗು ದಂಪತಿಗಳ ಜೇಷ್ಠ ಸುಪುತ್ರನಾಗಿ ತನ್ನ 12ನೇ ವಯಸ್ಸಿನಲ್ಲಿ ಕುಲಕುಸಬು ದೈವನರ್ತನ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಇವರು ದೈವ ನರ್ತನದ ಲಯ ಅಬ್ಬರದ ಗರ್ಜನೆ, ಸ್ಪಷ್ಟ ನುಡಿಕಟ್ಟು, ತುಳುಭಾಷಾ ಪ್ರಾವಿಣ್ಯತೆ, ಕೌಶಲ್ಯತೆ, ಬಣ್ಣಗಾರಿಕೆ, ಸಂಧಿ ಪಾಡ್ಡನಗಳ ಮೇರು ಅನುಭವ ಇವುಗಳು ವೆಂಕಪ್ಪ ಪಂಡಿತ್ ಇವರ ಭಕ್ತರು, ಅಭಿಮಾನಿಗಳು ಇಷ್ಟಪಡುವ ಕೆಲವು ವೈಶಿಷ್ಟತೆಗಳು.

ಅತ್ಯಂತ ಶ್ರದ್ಧೆ ಭಕ್ತಿಯಿಂದ ತನ್ನ ಹಿರಿಯರ ಆರ್ಶೀವಾದ ಹಾಗೂ ದೈವ ದೇವರುಗಳ ಪದಾನುಗ್ರಹದಿಂದ ತನ್ನ ಕುಲವೃತ್ತಿಯಲ್ಲಿ ತನ್ನನ್ನು ದೈವದ ಅನುವು ಕೊಡುವಾಗ ತೊಡಗಿಸಿಕೊಂಡು ಸಾಕ್ಷಾತ್ಕಾರಣೆಗೊಂಡಿರುವ ಹಲವು ಉದಾಹರಣೆಗಳವೆ.

ತಾನು ಬಹಳ ಶ್ರದ್ಧಾಭಕ್ತಿಯಿಂದ ನುಡಿದದ್ದು ದೈವನುಡಿಯಾಗಿ ಧಾರ್ಮಿಕ ನೆಲಗಟ್ಟಿನ ಭೂತರಾಧಾನೆಯು ಇಂದಿನ ದಿನಗಳಲ್ಲಿ ಕೇವಲ ಆಡಂಭರ ಪ್ರಚಾರಕ್ಕೆ ಮಾರ್ಪಾಡು ಹೊಂದುತ್ತಿರುವ ಇತ್ತೀಚಿನ ಕಾಲಘಟ್ಟದಲ್ಲಿ ಆಚಾರಗಳನ್ನು ಮೀರದೆ, ಆಧುನಿಕವಾದ ವೈಜ್ಞಾಕರಿಸದೆ, ತುಳುನಾಡಿನ ನೈಜ ಸಾಂಪ್ರಾದಾಯಿಕ ತಳಹದಿಯಲ್ಲಿ ತನ್ನ ಹಿರಿಯರಿಂದ ವಂಶಪಾರಂಪರ್ಯವಾಗಿ ಬಂದಿರುವ ದೈವಗಳ ನರ್ತನ ಸೇವೆಯನ್ನು ಮಾಡುತ್ತಿರುವ ಇವರು ಇತರರಿಗೆ ಆದರ್ಶವಾಗಿದ್ದಾರೆ.

ತುಳುನಾಡಿನ ಜಾನಪದ ಸಂಪ್ರದಾಯ. ಕಟ್ಟುಪಾಡುಗಳ ಕುರಿತು ಆಳವಾದ ಜ್ಞಾನ ಹೊಂದಿರುವ ಇವರು ಸಂಧಿ -ಪಾಡ್ಡಾನಗಳಲ್ಲಿ ಕಂಡು ಆಗಾಧವಾದ ನೈಪುಣ್ಯತೆ ಹೊಂದಿರುತ್ತಾರೆ.

ಪಾರಂಪರಿಕ ನಾಡಿ ವೈದ್ಯಕೀಯ ಶಾಸ್ತ್ರದಲ್ಲಿ ಸಿದ್ಧಾ ಹಸ್ತರೆನಿಸಿಕೊಂಡದ್ದು ಇವರ ಮಕುಟುದಲ್ಲಿನ ಮತ್ತೊಂದು ಗರಿ.

ಪಾರ್ಶ್ವವಾಯು , ಲಕ್ವ, ಅತಿಸಾರ, ಅರಸಿನ ಕಾಮಾಲೆ, ಸ್ತ್ರೀ ರೋಗ, ದೃಷ್ಟಿದೋಷ, ಬಾಲಗ್ರಹ, ಹಾಗೂ ಇನ್ನಿತರ ಹಲವು ಕಾಯಿಲೆಗಳಿಗೆ ನಾಟಿ ಮದ್ದು ನೀಡಿ ಹೆಸರುವಾಸಿ ಇವರು. ಊರಿನ ಹಾಗೂ ಪರವೂರಿನ ಸಂಘ, ಸಂಸ್ಥೆ ಶಾಲೆಗಳಗೆ ನೊಂದವರಿಗೆ ಧನ ಸಹಾಯವನ್ನು ಮಾಡುವುದರ ಮೂಲಕ ತುಳುನಾಡಿನ ಜಾನಪದ ಸಂಪ್ರದಾಯ, ಕಟ್ಟುಪಾಡುಗಳ ಕುರಿತು ಆಳವಾದ ಜ್ಞಾನ ಹೊಂದಿರುವ ಇವರು ಸಂಧಿ -ಪಾಡ್ಡಾನಗಳಲ್ಲಿ ಕಂಡು ಆಗಾಧವಾದ ನೈಪುಣ್ಯತೆ ಹೊಂದಿರುತ್ತಾರೆ.

ಪಾರಂಪರಿಕ ನಾಡಿ ವೈದ್ಯಕೀಯ ಶಾಸ್ತ್ರದಲ್ಲಿ ಸಿದ್ಧಾ ಹಸ್ತರೆನಿಸಿಕೊಂಡದ್ದು ಇವರ ಮಕುಟುದಲ್ಲಿನ ಮತ್ತೊಂದು ಗರಿ.ಪಾರ್ಶ್ವವಾಯು , ಲಕ್ಷ, ಅತಿಸಾರ, ಅರಸಿನ ಕಾಮಾಲೆ, ಸ್ತ್ರೀ ರೋಗ, ದೃಷ್ಟಿದೋಷ, ಬಾಲಗ್ರಹ, ಹಾಗೂ ಇನ್ನಿತರ ಹಲವು ಕಾಯಿಲೆಗಳಿಗೆ ನಾಟಿ ಮದ್ದು ನೀಡಿ ಹೆಸರುವಾಸಿ ಇವರು. ಊರಿನ ಹಾಗೂ ಪರವೂರಿನ ಸಂಘ, ಸಂಸ್ಥೆ ಶಾಲೆಗಳಿಗೆ ನೊಂದವರಿಗೆ ಧನ ಸಹಾಯವನ್ನು ಮಾಡುವುದರ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ಎಲ್ಲರ ಪ್ರೀತಿ ಪಾತ್ರಕ್ಕೆ ಒಳಗಾಗಿ ಜನಮೆಚ್ಚುಗೆಯ ವ್ಯಕ್ತಿಯಾಗಿದ್ದಾರೆ.

ಇವರ ಈ ಎಲ್ಲಾ ಸೇವೆಯನ್ನು ಪರಿಗಣಿಸಿ ಜಿಲ್ಲಾ ಪಾಣಾರ ಯಾನೆ ನಲಿಕೆಯವರ ಸಮಾಜ ಸೇವಾ ಸಂಸ್ಥೆ (ರಿ) ಮೂಡಬಿದ್ರೆ ಇದರ ಬೆಟ್ಟಹಬ್ಬದ ಪ್ರಯುಕ್ತ 09-10-2011ರಂದು ಮಂಗಳೂರಿನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ರಾಜ್ಯಮಟ್ಟದ ಸನ್ಮಾನವನ್ನೂ ಮಾಡಿ ಸನ್ಮಾನ ಪತ್ರವನ್ನು ನೀಡಿದ್ದು ಹಿರಿಮೆಯಾಗಿದೆ. ರಾಮಾಂಜನೇಯ ಗೆಳೆಯರ ಬಳಗ (ರಿ) ಮೈರ- ಕಕ್ಕೆಪದವು ಇವರಿಂದ 06-04 2014ರಂದು ಸತ್ಯ ಧರ್ಮ ಜೋಡುಕೆರೆ ಬಯಲು ಕಂಬಳದ ಸಂದರ್ಭದಲ್ಲಿ ಅತಿಥಿವರೋ ಗಣ್ಯರ ಸಮ್ಮುಖದಲ್ಲಿ ಸನ್ಮಾನವನ್ನು ಮಾಡಿದ್ದಾರೆ.

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ) ಪುಂಜಾಲಕಟ್ಟೆ ಇವರು ಇವರ ಜಾನಪದ ಕ್ಷೇತ್ರದ ಸೇವೆಗಾಗಿ ಸ್ವಸ್ತಿಕ್ ಸಂಭ್ರಮ ಪುರಸ್ಕಾರವನ್ನು 08-05-2015ರಂದು ಭಾರತ ಸರಕಾರದ ಕಾನೂನು ಮಂತ್ರಿಗಳಾದ ಡಿ.ವಿ ಸದಾನಂದ ಗೌಡ ಹಾಗೂ ಕೈಗಾರಿಕಾ ಮಂತ್ರಿಗಳಾದ ಜಿ.ಎಮ್. ಸಿದ್ದೇಶ್‌ ಇವರ ಸಮಕ್ಷಮದಲ್ಲಿ ಗೌರವಪೂರ್ವಕವಾಗಿ ನೀಡಿದ್ದಾರೆ.

ಓಂಶಕ್ತಿ ಫ್ರೆಂಡ್ಸ್ (ರಿ) ಮುಲ್ಲಾಜೆ ಮಾಡ ಇದರ 10ನೇ ವರ್ಷದ ಪ್ರಯುಕ್ತ ಇಂಧನೆ ನಾಟಿ ವೈದ್ಯ ಕ್ಷೇತ್ರದಲ್ಲ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಸಂಸ್ಥೆಯು 09-10-2011ರಂದು ಯುವ ಫ್ರೆಂಡ್ಸ್ (ರಿ) ಕುಂಟಾಲಪಲ್ಲೆ ಕಾರಿಂಜ ಇವರು ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ 03-09-2018ರಂದು ಸನ್ಮಾನವನ್ನು ಮಾಡಿರುತ್ತಾರೆ

ನಾಟಿ ವೈದ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಸಂಸ್ಥೆಯು ಇವರನ್ನು ಸನ್ಮಾನಿಸಿರುತ್ತಾರೆ.

ಯುವ ಫ್ರೆಂಡ್ಸ್ (ರಿ) ಕುಂಬಾಲಪಲ್ಲೆ ಕಾರಿಂಜ ಇವರು ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಮಾಡಿರುತ್ತಾರೆ.

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬಾಚಕೆರೆ ಪರಪಾಡಿ ಇವರು 2022ನೇ ಮಾರ್ಚ್ ತಿಂಗಳಲ್ಲಿ ನಡೆದ ದೇವಾಲಯದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ದೈವರಾಧನೆಯ ಸೇವೆಗಾಗಿ ಸನ್ಮಾನವನ್ನು ಮಾಡಿರುತ್ತಾರೆ.

ತುಳುವ ಚಾವಡಿ ದಾಸಕೋಡಿ ಇವರಿಂದ ಬಂಟ್ವಾಳ ಸ್ವರ್ಣ ಕಲಾ ಮಂದಿರದಲ್ಲಿ ಜರುಗಿದ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಸಿದ್ಧ ಭೂತಾರಾಧಕರು, ಜ್ಯೋತಿಷ್ಯರು, ನಾಡಿ ವೈದ್ಯರು ಸಮಾಜ ಸೇವಕರು ಆದ ಶ್ರೀಯುತರನ್ನು ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ಸನ್ಮಾನವನ್ನು ಮಾಡಿ ಸನ್ಮಾನ ಪತ್ರವನ್ನು ನೀಡಿರುತ್ತಾರೆ. ಇವಲ್ಲದೆ ಇನ್ನು ಅನೇಕ ಸನ್ಮಾನ ಗೌರವಗಳನ್ನು ಪಡೆದ ಕೀರ್ತಿ ಇವರದ್ದಾಗಿದೆ.

ಸುಮಾರು 57 ವರ್ಷದ ಇವರು ಈಗಲೂ ದೈವನರ್ತನ ಸೇವೆಯನ್ನು ಮಾಡುತ್ತಾ ತನ್ನ ಚಿಕ್ಕ ವಯಸ್ಸು 12ನೇ ವಯಸ್ಸಿನವನಾಗಿರುವಾಗ ಗಗ್ಗರ ಧಾರಣೆಯನ್ನು ಮಾಡಿ ಪ್ರಾರಂಭ ಮಾಡಿದ ಆ ದಿನಗಳನ್ನು ನೆನಪಿಸುತ್ತಾ ದೈವರಾಧನಾ ಕ್ಷೇತ್ರದಲ್ಲಿ ಸುಮಾರು 45 ವರುಷಗಳ ಸುದೀರ್ಘ ಅನುಭವವನ್ನು ಎಲ್ಲರಲ್ಲೂ ಹಂಚಿಕೊಳ್ಳುತ್ತಾ ದೇವಸ್ಯ ಮಾಡೂರು ಗ್ರಾಮದ ಕುಂಬಾಲಪಲ್ಲೆಯಲ್ಲಿ ಪತ್ನಿ ಶ್ರೀಮತಿ ಹೊನ್ನಮ್ಮ ಮಕ್ಕಳಾದ ಶ್ರೀಮತಿ ಮಲ್ಲಕಾ ಜಯಕರ, ಮಗ ವಿಶ್ವನಾಥ, ಕಿರಿಯ ಮಗ ನವೀನ್, ಕಿರಿಯ ಮಗಳು ಮಷ್ಟಾ ಪ್ರವೀಣ್ ಇವರನ್ನು ಒಳಗೊಂಡ ತುಂಬು ಸಂಸಾರದೊಂದಿಗೆ ಸುಖ ಜೀವನವನ್ನು ಸಾಗಿಸುತ್ತಿದ್ದಾರೆ.

ಇವರ ಈ ಎಲ್ಲಾ ಸೇವೆಗಳನ್ನು ಪರಿಗಣಿಸಿ ದಕ್ಷಿಣ ಕನ್ನಡ ಜಿಲ್ಲೆಯ 2022-23ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.


ಯಕ್ಷಗಾನ ರಂಗದ ದಿಗ್ಗಜ ಹಾಸ್ಯ ಕಲಾವಿದ ಜಯರಾಮ ಆಚಾರ್ಯ ಬಂಟ್ವಾಳ ಅವರ ಪರಿಚಯ

ವೇಷ, ಭೂಷಣ, ಸಂಗೀತ, ನೃತ್ಯ ಮುಂತಾದ ಹಲವು ಕಲಾ ಪ್ರಕಾರಗಳ ಸಮ್ಮಿಲನವಾಗಿರುವ ಯಕ್ಷಗಾನ ಕರಾವಳಿಯ ಗಂಡುಕರ ಎನ್ನುವ ಪ್ರಸಿದ್ಧಿಗೆ ಪಾತ್ರವಾಗಿದೆ, ಇಲ್ಲಿ ಪಳಗುವುದು ಮತ್ತು ಪ್ರೇಕ್ಷಕರ ಮನಗೆದ್ದು ಪ್ರಸಿದ್ದಿ ಪಡೆಯುವುದು ಒಂದರ್ಥದಲ್ಲಿ ದೇವರ ಆಶೀರ್ವಾದವೇ ಸರಿ.

ಅಯಾ ಆಶೀರ್ವಾದ ಮತ್ತು ಸಾವಿರಾರು ಅಭಿಮಾನಿಗಳ ಪ್ರೀತಿ- ಮನ್ನಣೆಗೆ ಪಾತ್ರರಾಗಿರುವ ಅಪರೂಪದ ಕಲಾವಿದರಲ್ಲಿ ಬಂಟ್ವಾಳ ಜಯರಾಮ ಆಚಾರ್ಯ ಒಬ್ಬರು ಡಿಸೆಂಬರ್ 10.1957 ರಂದು ಗಣಪತಿ ಆಚಾರ್ಯ ಮತ್ತು ಶ್ರೀಮತಿ ಭವಾನಿ ದಂಪತಿಗಳ ಮಗನಾಗಿರುವ ಇವರು, ಕೇವಲ 7ನೇ ತರಗತಿ ವಿದ್ಯಾಭ್ಯಾಸಗೈದಿದ್ದರೂ, ಇಂದು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಸಂಪಾದಿರುವ ಮೂಲಕ, ಶ್ರದ್ಧೆ ಮತ್ತು ಕಠಿಣ ಪರಿಶ್ರಮ, ಛಲವಿದ್ದರೆ, ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವ ಮಾತಿಗೆ ಇವರು ಸಾಕ್ಷಿಯಾಗಿದ್ದಾರೆ.

ಯಕ್ಷರಂಗದಲ್ಲಿ ಇವರಿಗೆ ಇಬ್ಬರು ಗುರುಗಳು ನಾಟ್ಯ ಗುರುಗಳು ಪಡ್ರೆ ಚಂದ್ರು, ಹಾಸ್ಯ ಗುರುಗಳು ನೆಲ್ಲಿಕಟ್ಟೆ ನಾರಾಯಣ ವಾಲೀಕಾ‌ ರಾಜ್ಯದೊಂದಿಗೆ ಇವರಿಗೆ ಹೆಚ್ಚಿನ ಪ್ರಸಿದ್ಧಿ ದೊರಕಿಸಿದ್ದು, ಹಾಸ್ಯ ಪಾತ್ರಗಳು, ಯಕ್ಷ ಕ್ಷೇತ್ರದ ಪ್ರಸಿದ್ಧ ಹಾಸ್ಯ ರಸ , ಮಕರಂದ, ದಾರುಕ, ದಾಯಕ, ರತ್ನಸ, ಮೊತ್ತ, ನಾರದ ಮುಂತಾದ ಪ್ರಮುಖ ವೇಷಗಳ ನಟನೆ ಇವರದು.

ಕಟೀಲು, ಎಡನೀರು, ಕದ್ರಿ, ಮತರು, ಸುಂಕದ ಕಟ್ಟೆ ಸೇರಿದಂತೆ 11 ಯಕ್ಷಗಾನ ಮೇಳಗಳಲ್ಲಿ ತಿರುಗಾಟ ನಡೆಸಿದ ಬಂಟ್ವಾಳ ಜಯ ರಾಮ ಜಯಾರಾಮ ಆಚಾರ್ಯ ಅವರು ಹೊಸನಗರ ಮೇಳದಲ್ಲಿ 10 ವರ್ಷಗಳಿಂದ ಬಣ್ಣ ಹಚ್ಚುತ್ತಿದ್ದಾರೆ. ಜೊತೆಗೆ ಅನೇಕ ಸನ್ಮಾನ ಗೌರವಗಳಿಗೆ ಇವರು ಪಾತ್ರರಾದವರು.


 

ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ (ರಿ.), ವಿದ್ಯಾನಗರ ಸಜೀಪಮುನ್ನೂರು, ಈ ಸಂಘ ಕಳೆದ 30 ವರ್ಷಗಳಿಂದ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸುತ್ತಿದ್ದು, ಸಂಘದ ಸದಸ್ಯರು ದುಡಿದ ಸಂಬಳದ ಸ್ವಲ್ಪಭಾಗವನ್ನು ಸಮಾಜ ಸೇವೆಗೆ ದೇಣಿಗೆಯಾಗಿ ನೀಡಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅರಳು ಪ್ರತಿಭೆ ಗಳನ್ನು ಆನ್ವೇತಿಸಿ, ಪೋಷಿಸಿ, ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದೆ. ಈ ಸಂಸ್ಥೆಯು 2016-17ನೇ ಸಾಲಿನಲ್ಲಿ ಸಹಕಾರಿ ಸಗಳ ನಿಯಮಾವಳಿಯಂತ ನೋಂದಾವಣೆಗೊಂಡಿರುತ್ತದೆ.

ಇದುವರೆಗೆ ಸರಕಾರದಿಂದ ಯಾವುದೇ ಆರ್ಥಿಕ ಸೌಲಭ್ಯವನ್ನು ಪಡೆಯದ, ಸೇವಾ ಕಾರ್ಯಗಳನ್ನು ಅಡೆತಡೆಯಿಲ್ಲದೆ ನಿರಂತರವಾಗಿ ನಡೆಸಿಕೊಂಡು ಬಂದಿರುತ್ತದೆ. ಸಂಘದ ಯುವಕ ಯುವತಿಯರು ಶ್ರಮದಾನದ ಮೂಲಕ ಸಂಘದ ಪಕ್ಕದಲ್ಲೆ ವಿದ್ಯಾದಾಯಿನಿ ಕಲಾ ವೇದಿಕೆ ಹಾಗೂ ಸ್ನಾನ ಗೃಹ ಮತ್ತು ಶೌಚಾಲಯದ ವ್ಯವಸ್ಥೆಯನ್ನು ಮಾಡಿರುತ್ತಾರೆ. ಈ ವರೆಗೆ ಯಾವುದೇ ಪ್ರಚಾರಗಳಿಗೆ ಒತ್ತು ಕೊಡದೇ ಕೇವಲ ಸೇವಾಧರ್ಮದಿಂದ ಸಮಾಜಪರವಾದ ಕೆಲಸಗಳನ್ನು ಮಾಡುತ್ತಾ ಬಂದಿರುವ ಈ ಸಂಘವು ಪ್ರಸಕ್ತ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದೆ.


ಕಳೆದ 28 ವರ್ಷಗಳಿಂದ ಪತ್ರಕರ್ತರಾಗಿ ದುಡಿಯುತ್ತಿರುವ ಬಂಟ್ವಾಳ ಕಸ್ಬಾ ಗ್ರಾಮದ ವಿ.ಪಿ.ರಸ್ತೆ ನಿವಾಸಿ ದಿವಂಗತ ವಿಶ್ವನಾಥ ನಾಯ್ಕ್ ,ವಿಜಯ ದಂಪತಿಯ ನಾಲ್ಕು ಮಕ್ಕಳಲ್ಲಿ ಏಕೈಕ ಪುತ್ರನಾಗಿರುವ ವೆಂಕಟೇಶ್ ಬಂಟ್ವಾಳ ಅವರು 1967 ಆಗಸ್ಟ್ 02 ರಂದು ಜನಿಸಿದ್ದರು.

ತಮ್ಮ ಶಿಕ್ಷಣವನ್ನು ಬಂಟ್ವಾಳ ಎಸ್ .ವಿ .ಎಸ್ ವಿದ್ಯಾ ಸಂಸ್ಥೆಯಲ್ಲಿ ಪೂರೈಸಿದ್ದಾರೆ. ವೆಂಕಟೇಶ್ ಅವರು ಮಂಗಳೂರಿನಲ್ಲಿ ವಿವಿಧ ಸಂಜೆ ಪತ್ರಿಕೆ ಸಹಿತ ಪುತ್ತೂರಿನಲ್ಲಿ ಬೆಳಗ್ಗಿನ ಪತ್ರಿಕೊಂದರಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಿಸಿದ್ದರು. ಸುಮಾರು 23 ವರ್ಷಗಳಿಂದ ಹೊಸದಿಗಂತ ಪತ್ರಿಕೆಯಲ್ಲಿ ಬಂಟ್ವಾಳ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರ ಹಲವು ಸಾಮಾಜಿಕ, ಮಾನವೀಯ ವರದಿಗಳು ಮೆಚ್ಚುಗೆಗೆ ಪಾತ್ರವಾಗಿವೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಉಪಾಧ್ಯಕ್ಷ, ಕಾರ್ಯದರ್ಶಿಯಾಗಿ ಸುದೀರ್ಘ ಅವಧಿಯ ಕಾಲ ಸೇವೆ ಸಲ್ಲಿಸಿದ್ದು,ಪ್ರಸ್ತುತ ಸಂಘದ ಸದಸ್ಯರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ ಕಾಲದಲ್ಲಿ ಇವರ ನೇತೃತ್ವದಲ್ಲಿ ಬಿ.ಸಿ.ರೋಡಿನ ಹದಗೆಟ್ಟಿದ್ದ ರಸ್ತೆ ದುರಸ್ಥಿಗಾಗಿ ನಡೆದ ವಿನೂತನ ಪ್ರತಿಭಟನೆ ಗಮನ ಸೆಳೆದಿತ್ತು. ಮಂಗಳೂರು ಗಾಳದ ಕೊಂಕಣಿ ಅಭ್ಯುದಯ ಸಂಘದ ಕಾರ್ಯದರ್ಶಿಯಾಗಿರುವುದಲ್ಲದೆ, ತೊಕ್ಕೊಟ್ಟು ಶ್ರೀ ಸೋಮೇಶ್ವರಿ ಸೌಹಾರ್ಧ ಸಹಕಾರಿ ನಿಯಮಿತದ ನಿರ್ದೇಶಕರು,ಮುನ್ನೂರು ಗ್ರಾಮದ ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಸದಸ್ಯರಾಗಿರುತ್ತಾರೆ. ರಾಜ್ಯಮಟ್ಟದ ಸ್ವಸ್ತಿಕ್ ಸಂಭ್ರಮ್ ಪುರಸ್ಕಾರ, 2021ರ ಫೆಭ್ರವರಿ ತಿಂಗಳಲ್ಲಿ‌ ನಡೆದ ಬಂಟ್ವಾಳ ತಾಲೂಕು 21 ನೇ ಕನ್ನಡ ಸಾಹಿತ್ಯ‌ ಸಮ್ಮೇಳನ ಹಾಗೆಯೇ ವಿವಿಧ ಸಂಘ ಸಂಸ್ಥೆಗಳಿಂದ ಕಾರ್ಯ ಸಾಧನೆಗಾಗಿ ಸನ್ಮಾನಿಸಲ್ಪಟ್ಟಿರುತ್ತಾರೆ. ಬಂಟ್ವಾಳ‌ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿ ಪ್ರಸ್ತುತ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿ ಸೇರಿದಂತೆ ಹಲವು ಸಂಘ,ಸಂಸ್ಥೆಗಳ ಮೂಲಕ ಸಾಮಾಜಿಕ ಚಟುವಟಿಕೆಯಲ್ಲು ತೊಡಗಿಸಿಕೊಂಡಿದ್ದಾರೆ.

ಪತ್ನಿ ಅನುರಾಧ,ಮಕ್ಕಳಾದ ಗಗನ್,ಯಶಸ್ವಿನಿಯೊಂದಿಗೆ ಬಂಟ್ವಾಳದಲ್ಲಿ ಗೃಹಸ್ಥ ಜೀವನ ನಡೆಸುತ್ತಿದ್ದಾರೆ.


ಶ್ರೀ ಕೆ. ವಿಲ್ಫ್ರೆಡ್ ಡಿಸೋಜ (Tv9 ವೀಡಿಯೊ ಜರ್ನಲಿಸ್ಟ್) ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದವರು. ಸುಮಾರು 25 ವರ್ಷಗಳಿಂದ ಟಿ.ವಿ. ಮಾಧ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

1997-98 ರಲ್ಲಿ ಟಿವಿ ಮಾಧ್ಯಮಕ್ಕೆ ಪ್ರವೇಶ

1997-2000 ರಲ್ಲಿ ನ್ಯೂ ಮ್ಯಾಂಗಳೂರ್ ಚಾನೆಲ್ ನಲ್ಲಿ 3 ವರ್ಷಗಳ ಸೇವೆ

2000-2003 ರವರೆಗೆ ಸಿಟಿ ಕೇಬಲ್ ನಲ್ಲಿ 3 ವರ್ಷಗಳ ಸೇವೆ

2003–2005 ರ ವರೆಗೆ ಉದಯ ಟಿವಿ ಯಲ್ಲಿ 2 ವರ್ಷಗಳ ಸೇವೆ

2005- 2006 ರ ವರೆಗೆ ದೂರದರ್ಶನ ದಲ್ಲಿ 1 ವರ್ಷ ಸೇವೆ

2006 ಅಗಸ್ಟ್ ನಿಂದ ಇಂದಿನವರೆಗೆ Tv9 ಮಾಧ್ಯಮದಲ್ಲಿ 16 ವರ್ಷಗಳ ಸೇವೆ

1. 2000-2022 ರ ವರೆಗೆ ದಕ್ಷಿಣ ಕನ್ನಡ ಜಿಲ್ಲಾ ಪರ್ತಕರ್ತರ ಸಂಘದ ಸದಸ್ಯರು

2. 2011-2014 ರ ವರೆಗೆ ದಕ್ಷಿಣ ಕನ್ನಡ ಜಿಲ್ಲಾ ಪರ್ತಕರ್ತರ ಸಂಘದ ಕಾರ್ಯದರ್ಶಿ

3. 2014-2018 ರ ವರೆಗೆ ದಕ್ಷಿಣ ಕನ್ನಡ ಜಿಲ್ಲಾ ಪರ್ತಕರ್ತರ ಸಂಘದ ಉಪಾಧ್ಯಕ್ಷರು

4. 2015-2022 ರ ವರೆಗೆ ಮಂಗಳೂರು ಪ್ರೆಸ್ ಕ್ಲಬ್ ನ ಸದಸ್ಯರು

5. 2019-2022 ರ ವರೆಗೆ ಮಂಗಳೂರು ಪ್ರೆಸ್ ಕ್ಲಬ್ ನ ಕಾರ್ಯಕಾರಿಣಿ ಸಮಿತಿ ಸದಸ್ಯರು

ಸಮಾಜ ಸೇವೆ : 

1. ಮಂಗಳೂರಿನ ಕದ್ರಿಯ ಮುಂದಾಣ ನಿವಾಸಿ ಶ್ರೀಮತಿ ಪ್ರಮೀಳ ಇವರು ವಿಧವೆಯಾಗಿದ್ದು, ಎರಡು ಹೆಣ್ಣು ಮಕ್ಕಳನ್ನು ಕೂಲಿ ಮಾಡಿ ಸಾಕುತ್ತಿದ್ದರು. ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಬಹಳ ಕಷ್ಟವಾಗಿರುವುದರಿಂದ, ಪಾಳು ಬೀಳುವ ಸ್ಥಿತಿಯಲ್ಲಿದ್ದ ಮನೆಯನ್ನು ದುರಸ್ಥಿಗೊಳಿಸಲು ಸಾಧ್ಯವಿಲ್ಲದ ಕಾರಣ ಮಂಜುನಾಥ ಫ್ರೆಂಡ್ಸ್ ಸರ್ಕಲ್ ಕದ್ರಿ ಇದರ ವತಿಯಿಂದ ಶ್ರಿ ಕೆ. ವಿಲ್ಫ್ರೆಡ್ ಡಿಸೋಜ ರವರ ನೇತೃತ್ವದಲ್ಲಿ 2014 ರಲ್ಲಿ ಪ್ರಮೀಳ ಇವರಿಗೆ ಹೊಸ ಮನೆ ಕಟ್ಟಿ ಹಸ್ತಾಂತರಿಸಿದರು.

2. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಮುಕ್ಢಾಪು ನಿವಾಸಿ ಶ್ರೀಮತಿ ಜುಲಿಯಾನ ಡಿಸೋಜ ಇವರು ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದರು. ಈ ಬಡ ಕುಟುಂಬಕ್ಕೆ ಡೆನಿಮ್ ಗೈಸ್ ಫ್ರೆಂಡ್ಸ್ ಸರ್ಕಲ್ ವತಿಯಿಂದ ಶ್ರೀ ಕೆ. ವಿಲ್ಫ್ರೆಡ್ ಡಿಸೋಜ ರವರ ನೇತೃತ್ವದಲ್ಲಿ 2018 ರಲ್ಲಿ ಹೊಸ ಮನೆ ಕಟ್ಟಿ ಹಸ್ತಾಂತರಿಸಿದರು.

3.ಗ್ರಾಮದಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಅವರನ್ನು ಸನ್ಮಾನ ಮಾಡಿ ಹುರಿದುಂಬಿಸುವ ಕೆಲಸ ಮಾಡಿದ್ದಾರೆ.

4. ಗ್ರಾಮದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ಸರಕಾರಿ ಬಸ್ ವ್ಯವಸ್ಥೆಯನ್ನು ಒದಗಿಸುವಲ್ಲಿ ಶ್ರಮವಹಿಸಿದರು.

5. ಗ್ರಾಮದ ರಸ್ತೆಗಳನ್ನು ದುರಸ್ಥಿಗೊಳಿಸಲು ಸರಕಾರಕ್ಕೆ ಒತ್ತಡ ಹಾಕಿ ದುರಸ್ಥಿಗೊಳ್ಳುವಂತೆ ಮಾಡಿದರು.

6. ಗ್ರಾಮದಲ್ಲಿ ಸರ್ವಧರ್ಮ ಸೌಹಾರ್ದ ಕೂಟದ ಆಯೋಜನೆಯನ್ನು ಮಾಡಿದರು.

ರಾಜ್ಯ ಪ್ರಶಸ್ತಿ: ಅತ್ಯುತ್ತಮ ವೀಡಿಯೋ ಚಿತ್ರೀಕರಣಕ್ಕೆ ಕಲ್ಕುರ ಪ್ರತಿಷ್ಠಾನದಿಂದ ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಸಂದಿದೆ.

More from the blog

ಮಂಗಳೂರು: ‘ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್’ ಸಂಸ್ಥೆಯ ಸಂಗೀತ ಕ್ಷೇತ್ರದಲ್ಲಿ ಸಂಪುಟ 2′ ರ ನೂತನ ಕೃತಿ ಲೋಕಾರ್ಪಣೆ

ಮಂಗಳೂರು: ಮಂಗಳೂರಿನ ಕುಲಶೇಖರದಲ್ಲಿರುವ 'ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್' ಸಂಸ್ಥೆಯ ಪ್ರಕಾಶನದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಕನ್ನಡದ ಜನಪ್ರಿಯ ಹಾಡುಗಳನ್ನು ಪಾಶ್ಚಿಮಾತ್ಯ ನೊಟೇಶನ್ ಮೂಲಕ ವಯಲಿನ್, ಗಿಟಾರ್ ಮತ್ತು ಕೀಬೋರ್ಡ್ ನಲ್ಲಿ...

ಹೆರಿಗೆ ವೇಳೆ ವಿಪರೀತ ರಕ್ತಸ್ರಾವ : ಲಾಯಿಲದ ಮಹಿಳೆ ಸಾವು

ಬೆಳ್ತಂಗಡಿ: ಹೆರಿಗೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ತೀವ್ರ ರಕ್ತ ಸ್ರಾವದಿಂದ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಬದ್ಯಾರ್ ಖಾಸಗಿ ಆಸ್ಪತ್ರೆಯಲ್ಲಿ ಲಾಯಿಲ ಗ್ರಾಮದ ಗಾಂಧಿನಗರ ನಿವಾಸಿ ಗಾಯತ್ರಿ ಎಂಬವರು ಎರಡನೇ...

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...