ಬೆಂಗಳೂರು: ಪಿಎಫ್ಐ ನೆಪಕ್ಕೆ ಮಾತ್ರ ಆರ್‌ಎಸ್‌ಎಸ್ ಅನ್ನು ಟಾರ್ಗೆಟ್ ಮಾಡುತ್ತಿದೆ. ಆದರೆ ಅವರ ಉದ್ದೇಶ ಇರೋದು ಭಾರತೀಯರು, ಭಾರತೀಯತೆ ಮೇಲೆ ಎಂದು ಸಿ. ಟಿ. ರವಿ ಹೇಳಿದ್ದಾರೆ.

ಬಂಟ್ವಾಳದಲ್ಲಿ ರಸ್ತೆ ಮೇಲಿನ ಪಿಎಫ್ಐ ಬರಹದ ಕುರಿತು ಅಕ್ರೋಶ ವ್ಯಕ್ತಪಡಿಸಿದ ಅವರು, ಪಿಎಫ್‌ಐ ಅವರ ಯುದ್ದದ ಉದ್ದೇಶ ಇಸ್ಲಾಮಿಕ್ ರಾಜ್ಯವನ್ನ ಸ್ಥಾಪನೆ ಮಾಡೋದು. ಅವರ ಮೂಲ ನಂಬಿಕೆಗಳಲ್ಲೇ ಅಸಹಿಷ್ಣುತೆ, ದೋಷವಿದೆ. ಮಾತ್ರವಲ್ಲದೆ ಮತ, ಧರ್ಮ, ದೇವರನ್ನ ಒಪ್ಪದ ಮಾನಸಿಕತೆಯಿದೆ. ಪ್ರತಿಯೊಬ್ಬರು ರಾಷ್ಟ್ರೀಯತೆಯನ್ನ ಮೈಗೂಡಿಸಿಕೊಳ್ಳುವ ಮೂಲಕ ಅವರನ್ನ ಎದುರಿಸಬೇಕು ಎಂದು ಕರೆ ನೀಡಿದರು.
ನಿಮ್ಮ ದುಷ್ಟತನದ ಮೂಲಕ ಭಾರತೀಯರನ್ನ ನಾಶ ಮಾಡಿದ ಕಾಲ ಹೋಯ್ತು. ಈಗ ಅಂತಹ ಸಂದರ್ಭ ಬಂದ್ರೆ ನಿಮ್ಮನ್ನ ನಾಶ ಮಾಡಿ ಭಾರತವನ್ನ ಉಳಿಸುತ್ತೇವೆ ಎಂದು ತಿರುಗೇಟು ನೀಡಿದ್ಧಾರೆ