Monday, September 25, 2023
More

    ಚಡ್ಡಿಗಳೇ ಎಚ್ಚರ, ಪಿ.ಎಫ್.ಐ.ನಾವು ಮರಳಿ ಬರುತ್ತೇವೆ…..

    Must read

    ಬಂಟ್ವಾಳ: ಚಡ್ಡಿಗಳೆ ಎಚ್ಚರ ಪಿ.ಎಫ್.ಐ.ನಾವು ಮರಳಿ ಬರುತ್ತೇವೆ ಈ ರೀತಿಯಲ್ಲಿ ಎಚ್ಚರಿಕೆಯ ಸಂದೇಶವನ್ನು ರಸ್ತೆಯಲ್ಲಿ ಬರೆದು ಬಂಟ್ವಾಳ ದಲ್ಲಿ ಅಶಾಂತಿ ಯ ವಾತಾವರಣ ನಿರ್ಮಾಣ ಮಾಡಲು ಹೊರಟಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

    ಬಂಟ್ವಾಳ ತಾಲೂಕಿನ ಪಿಲತಾಬೆಟ್ಟು ಗ್ರಾಮದ ಸ್ನೇಹ ಗಿರಿ ಎಂಬಲ್ಲಿ ಕಿಡಿಗೇಡಿಗಳು ರಸ್ತೆಯಲ್ಲಿ ಬಹಿರಂಗ ಬೆದರಿಕೆ ಹಾಕಿದ ಬಗ್ಗೆ ವರದಿಯಾಗಿದೆ. ಚಡ್ಡಿಗಳೆ ಎಚ್ಚರ ನಾವು ಮರಳಿ ಬರುತ್ತೇವೆ ಎಂದು ರಸ್ತೆಯಲ್ಲಿ ಬರೆದುಕೊಂಡಿರುತ್ತಾರೆ ಸ್ಥಳೀಯರು ಪುಂಜಾಲ್ ಕಟ್ಟೆ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿ ತಕ್ಷಣಕ್ಕೆ ಕ್ರಮ ಜರುಗಿಸಿ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸುತ್ತಾರೆ.

    ಇಡೀ ದೇಶವೇ ಆಯುಧ ಪೂಜೆಯ ಸಂಭ್ರಮದಿಂದ ಇದ್ದರೆ , ಯಾರೋ ಕಿಡಿಗೇಡಿಗಳು ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಪೋಲೀಸ್ ಠಾಣೆ ವ್ಯಾಪ್ತಿಯ ನಯನಾಡು ಎಂಬಲ್ಲಿ ರಸ್ತೆಯ ಮೇಲೆ ಬಳಪದಲ್ಲಿ ಬರೆದಿರುವ ಬರಹ ವ್ಯಾಪಕ ಚರ್ಚೆಗೆ ಗ್ರಾಮವಾಗಿದೆ.
    ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೇಂದ್ರ ಸರಕಾರದ ಎ.ಎನ್.ಐ.ದಾಳಿಯ ಹಿನ್ನೆಲೆಯಲ್ಲಿ ಪಿ‌.ಎಫ್.ಐ.ಸಂಘಟನೆ ಚಡ್ಡಿಗಳೆ ಎಚ್ಚರ ಎಂಬ ಸಂದೇಶವನ್ನು ಗ್ರಾಮಾಂತರ ಭಾಗದ ರಸ್ತೆಯಲ್ಲಿ ಬರೆದ ಬರಹ ಇದೀಗ ಪೋಲಿಸರನ್ನು ನಿದ್ದೆಗೆಡಿಸುವಂತೆ ಮಾಡಿದೆ

    More articles

    LEAVE A REPLY

    Please enter your comment!
    Please enter your name here

    Latest article