ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಧರ್ಮಸ್ಥಳ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಇದರ ವತಿಯಿಂದ ಗಾಂಧೀಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ನವಜೀವನ ಸದಸ್ಯರ ಸಮಾವೇಶ ಮತ್ತು ಕೇಂದ್ರ ಒಕ್ಕೂಟಗಳ ಪದಗ್ರಹಣ ಸಮಾರಂಭ ಇದೇ ಅ.09 ಅದಿತ್ಯವಾರದಂದು ಪೂರ್ವಾಹ್ನ10.30ಕ್ಕೆ ಸ್ಪರ್ಶ ಕಲಾಮಂದಿರ ಬಿ.ಸಿ ರೋಡ್ ನಲ್ಲಿ ನಡೆಯಲಿದೆ.

ಸಭಾ ಕಾರ್ಯಕ್ರಮವನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಯು.ರಾಜೇಶ್ ನಾಯ್ಕ್ ಅವರು ಉದ್ಘಾಟಿಸಲಿದ್ದಾರೆ.
ಕಾಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರು ರೊನಾಲ್ಡ್ ಡಿಸೋಜ ವಹಿಸಲಿದ್ದಾರೆ. ಬಳಿಕ ನವಜೀವನ ಸದಸ್ಯರಿಗೆ ಮಾನ್ಯ ಮಾಜಿ ಸಚಿವರು ಬಿ.ರಮಾನಾಥ ರೈ ಅವರು ಅಭಿನಂದನೆಯನ್ನು ಸಲ್ಲಿಸಲಿದ್ದಾರೆ.
ಇನ್ನು ಕೇಂದ್ರ ಒಕ್ಕೂಟದ ಜವಾಬ್ದಾರಿಯನ್ನು ದ.ಕ.ಜಿಲ್ಲೆಯ ಎಸ್.ಕೆ.ಡಿ.ಆರ್.ಡಿ.ಪಿ.ಬಿ.ಸಿ.ಟ್ರಸ್ಟ್ ನ ನಿರ್ದೇಶಕರು ಸತೀಶ್ ಶೆಟ್ಟಿ ಹಸ್ತಾಂತರಿಸಲಿದ್ದಾರೆ.
ಕಾಯಕ್ರಮದಲ್ಲಿ ತಾಲೂಕು ಜನಜಾಗೃತಿ ವೇದಿಕೆ ಬಂಟ್ವಾಳದ ಸ್ಥಾಪಕಾಧ್ಯಕ್ಷರು ಎ.ಸಿ ಭಂಡಾರಿ, ತಾಲೂಕು ಜನಜಾಗೃತಿ ವೇದಿಕೆ ಬಂಟ್ವಾಳದ ಮಾಜಿ ಅಧ್ಯಕ್ಷರು ರುಕ್ಮಯ ಪೂಜಾರಿ, ತಾಲೂಕು ಜನಜಾಗೃತಿ ವೇದಿಕೆ ಬಂಟ್ವಾಳದ ಮಾಜಿ ಅಧ್ಯಕ್ಷರು ಕೈಯೂರು ನಾರಾಯಣ ಭಟ್, ತಾಲೂಕು ಜನಜಾಗೃತಿ ವೇದಿಕೆ ಬಂಟ್ವಾಳದ ಮಾಜಿ ಅಧ್ಯಕ್ಷರು ಕಿರಣ್ ಹಗ್ಡೆ, ತಾಲೂಕು ಜನಜಾಗೃತಿ ವೇದಿಕೆ ಬಂಟ್ವಾಳದ ಮಾಜಿ ಅಧ್ಯಕ್ಷರು ಪ್ರಕಾಶ್ ಕಾರಂತ, ತಾಲೂಕು ಜನಜಾಗೃತಿ ವೇದಿಕೆ ಬಂಟ್ವಾಳದ ನಿಕಟಪೂವಾಧ್ಯಕ್ಷರು ಬಾಲಕೃಷ್ಣ ಆಳ್ವ, ಆಡಳಿತ ಟ್ರಸ್ಟಿ ಸೇವಾಂಜಲಿ ಪ್ರತಿಷ್ಠಾನ ಪರಂಗಿಪೇಟೆಯ ಕೃಷ್ಣಕುಮಾರ್ ಪೂಂಜ, ರಾಣಿಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿ ಬಿಸಿರೋಡ್ ಅಧ್ಯಕ್ಷರು ಪ್ರೋ.ತುಕಾರಾಮ ಪೂಜಾರಿ, ಕೇಂದ್ರ ಒಕ್ಕೂಟ ಸಮಿತಿ, ಬಂಟ್ವಾಳದ ಮಾಜಿ ಅಧ್ಯಕ್ಷರು ಮಾದವ ವಳವೂರು,ಕೇಂದ್ರ ಒಕ್ಕೂಟ ಸಮಿತಿ, ಬಂಟ್ವಾಳದ ನೂತನ ಅಧ್ಯಕ್ಷರು ಚಿದಾನಂದ ರೈ ಕಕ್ಯ ಭಾಗವಹಿಸಲಿದ್ದಾರೆ.