Sunday, April 14, 2024

ಅ.06 ರಿಂದ ಅ.12 ರವರೆಗೆ ಸ.ಪ.ಪೂ.ಕಾಲೇಜು, ಬೆಂಜನಪದವು ಇದರ ವಾರ್ಷಿಕ ವಿಶೇಷ ಶಿಬಿರ

 

ಪದವಿಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು, ಬೆಂಜನಪದವು ಇದರ ವಾರ್ಷಿಕ ವಿಶೇಷ ಶಿಬಿರ 2022-23 ಕಾರ್ಯಕ್ರಮ ಅ.06 ರಿಂದ ಅ.12 ರವರೆಗೆ ಸರಕಾರಿ ಪ್ರೌಢಶಾಲೆ, ಪೊಳಲಿ, ಕರಿಯಂಗಳ, ಬಂಟ್ವಾಳ ತಾಲೂಕಿನಲ್ಲಿ ನಡೆಯಲಿದೆ.

06-10-2022 ರಂದು ಶಿಬಿರವನ್ನು ಶಾಸಕರು ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಉದ್ಘಾಟಿಸಲಿದ್ದಾರೆ. ದಿವ್ಯ ಉಪಸ್ಥಿತಿಯನ್ನು ಶ್ರೀ ಶ್ರೀ ವಿವೇಕಾಚೈತನ್ಯನಂದ ಸ್ವಾಮೀಜಿ ರಾಮಕೃಷ್ಣ ತಪೋವನ, ಪೊಳಲಿ ಇವರು ವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ.ಪ.ಪೂ.ಕಾಲೇಜು, ಬೆಂಜನಪದವು ಪ್ರಾಂಶುಪಾಲರು ಹಾಗೂ ಶಿಬಿರದ ನಿರ್ದೇಶಕರಾದ ಶ್ರೀಮತಿ ಕವಿತಾ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ, ದ.ಕ. ಜಿಲ್ಲೆಯ ಉಪನಿರ್ದೇಶಕರು ಸಿ.ಡಿ. ಜಯಣ್ಣ, ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಪೊಳಲಿಯ ಆಡಳಿತ ಮೊಕ್ತಸರರು ಡಾ. ಮಂಜಯ್ಯ ಶೆಟ್ಟಿ, ಕರಿಯಂಗಳ ಗ್ರಾ.ಪಂ ಅಧ್ಯಕ್ಷರು ಚಂದ್ರಹಾಸ ಪಲ್ಲಿಪಾಡಿ, ಸ.ಪ.ಪೂ. ಕಾಲೇಜು ಬೆಂಜನಪದವು ಕಾರ್ಯಾಧ್ಯಕ್ಷರು ಹಾಗೂ ಅಮ್ಮುಂಜೆ ಗ್ರಾ.ಪಂ ಅಧ್ಯಕ್ಷರು ವಾಮನ ಅಚಾರ್ಯ, ಕರಿಯಂಗಳ ಗ್ರಾ.ಪಂ ಸದಸ್ಯರು ಲೋಕೇಶ್‌ ಭರಣಿ,  ಕರಿಯಂಗಳ ಗ್ರಾ.ಪಂ ಸದಸ್ಯರು ಚಂದ್ರಾವತಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜ್ಞಾನೇಶ್ ಎಂ.ಪಿ, ಮಾಹಿತಿ ತಂತ್ರಜ್ಞಾನ ಘಟಕ, ಫಾದರ್‌ಮುಲ್ಲರ್ ಸಂಸ್ಥೆ, ಮಂಗಳೂರು ಮ್ಯಾನೇಜರ್ ಲಯನ್ ಜಗದೀಶ್‌ ಕೆ. ಎಡಪಡಿತ್ತಾಯ, ಜಿಲ್ಲಾ ರೋಟರಿ ಕ್ಲಬ್‌ ಗವರ್ನರ್, ಮಂಗಳೂರು ರೋ। ಪ್ರಕಾಶ್ ಕಾರಂತ್, ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷರು, ರೋ| ಪುಷ್ಪರಾಜ್ ಎನ್.ಹೆಗಡೆ, ಶಾ.ಅ. ಮತ್ತು ಮೆ.ಉ, ಸಮಿತಿ, ಅಧ್ಯಕ್ಷರು, ಸರಕಾರಿ ಪ್ರೌಢಶಾಲೆ, ಪೊಳಲಿಯ ವೆಂಕಟೇಶ್ ನಾವಡ, ಮಾಜಿ ತಾ.ಪಂ. ಸದಸ್ಯರು, ಶಾ.ಅ.ಸ. ಸದಸ್ಯರು, ಸರಕಾರಿ ಪ್ರೌಢಶಾಲೆ, ಪೊಳಲಿಯ ಯಶವಂತ ಪೊಳಲಿ, ರೋಟರಿ ಕ್ಲಬ್ ಬಂಟ್ವಾಳದ ಮಾಜಿ ಅಧ್ಯಕ್ಷರು ರೋ। ಸಂಜೀವ ಪೂಜಾರಿ, ಸರಕಾರಿ ಪ್ರೌಢಶಾಲೆ, ಪೊಳಲಿಯ ಮುಖ್ಯೋಪದ್ಯಾಯರು ರಾಧಾಕೃಷ್ಣ ಭಟ್‌, ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿ ಬೆಂಜನಪದವು ಹಾಗೂ ಇತಿಹಾಸ ಉಪನ್ಯಾಸಕರು ಬಾಲಕೃಷ್ಣ ಎನ್.ವಿ ಭಾಗವಹಿಸಲಿದ್ದಾರೆ.

ಅ.12 ರಂದು ಬೆಳಿಗ್ಗೆ 10 ಗಂಟೆಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಿಯಂಗಳ ಗ್ರಾ. ಪಂ.ಅಧ್ಯಕ್ಷರು ಚಂದ್ರಹಾಸ ಪಲ್ಲಿಪಾಡಿ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸ.ಪ.ಪೂ.ಕಾಲೇಜು, ಬೆಂಜನಪದವು ಪ್ರಾಂಶುಪಾಲರು ಹಾಗೂ ಶಿಬಿರದ ನಿರ್ದೇಶಕರಾದ ಶ್ರೀಮತಿ ಕವಿತಾ, ಶಾ.ಅ. ಮತ್ತು ಮೆ.ಉ. ಸಮಿತಿ, ಅಧ್ಯಕ್ಷರು, ಸರಕಾರಿ ಪ್ರೌಢಶಾಲೆ, ಪೊಳಲಿಯ ವೆಂಕಟೇಶ್ ನಾವಡ, ಅಮ್ಮುಂಜೆ ಗ್ರಾಮ ಪಂಚಾಯತ್ ಸದಸ್ಯರು ರಾಧಾಕೃಷ್ಣ ತಂತ್ರಿ, ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷರು ಲ|ುಉಮೇಶ್ ಆಚಾರ್, ಶುಭಲಕ್ಷ್ಮೀ ಟ್ರಾವೆಲ್ಸ್ ಮಾಲಕರು ಭುವನೇಶ್ ಕಳ್ಳಿಗೆ ಪಚ್ಚಿನಡ್ಕ, ಲಯನ್ಸ್‌ ಕ್ಲಬ್‌ ಸದಸ್ಯರು ಉಮೇಶ್ ಸಾಲ್ಯಾನ್, ಬೆಂಜನಪದವು, ಉದ್ಯಮಿ ಪ್ರೇಮ್‌ ಜಿತ್ ಶೆಟ್ಟಿ, ಬೆಂಜನಪದವು, ಉದ್ಯಮಿ  ಸುರೇಶ್ ಸಾಲ್ಯಾನ್, ಬೆಂಜನಪದವು, ಕರಿಯಂಗಳದ ಮಾಜಿ ತಾ.ಪಂ. ಸದಸ್ಯರು ಯಶವಂತ ಪೊಳಲಿ, ಸರಕಾರಿ ಪ್ರೌಢಶಾಲೆ, ಪೊಳಲಿ ಮುಖ್ಯೋಪಧ್ಯಾಯರು ರಾಧಾಕೃಷ್ಣ ಭಟ್‌, ಸರಕಾರಿ ಪ್ರೌಢಶಾಲೆ, ಬೆಂಜನಪದವು ಪ್ರಭಾರ ಉಪಪ್ರಾಂಶುಪಾಲರು ಅನಂತ ಪದ್ಮನಾಭ, ಇತಿಹಾಸ ಉಪನ್ಯಾಸಕರು, ಶಿಬಿರದ ಅಧಿಕಾರಿ ಬಾಲಕೃಷ್ಣ ಎಸ್‌.ವಿ. ಭಾಗಿಯಾಗಲಿದ್ದಾರೆ.

 

More from the blog

ಲೋಕಸಭಾ ಚುನಾವಣೆ : ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ನವದೆಹಲಿ: ದೆಹಲಿಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭೆ ಚುನಾವಣೆಗಾಗಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ‘ಸಂಕಲ್ಪ ಪತ್ರ’ ಹೆಸರಲ್ಲಿ ದೇಶದ ಜನರಿಗೆ ಪ್ರಧಾನಿ ಮೋದಿ ಆಶ್ವಾಸನೆಗಳನ್ನು ನೀಡಿದ್ದು ಮೊದಲ ಸಂಕಲ್ಪ...

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ : ವಾರಸುದಾರರ ಪತ್ತೆಗೆ ಮನವಿ

ಬಂಟ್ವಾಳ: ಅಪರಿಚಿತ ವ್ಯಕ್ತಿಯೋರ್ವನ‌ ಮೃತದೇಹವೊಂದು ಸಜೀಪ ನಡು ಎಂಬಲ್ಲಿ ರಿಕ್ಷಾ ನಿಲ್ದಾಣದಲ್ಲಿ ಪತ್ತೆಯಾಗಿದೆ. ಸಜೀಪ ನಡು ಗ್ರಾಮದಲ್ಲಿ ನ ರಿಕ್ಷಾ ನಿಲ್ದಾಣದಲ್ಲಿ ಸುಮಾರು 45 ವರ್ಷದ ಗಂಡಸಿನ ಮೃತದೇಹ ಪತ್ತೆಯಾಗಿದ್ದು ಯಾವ ಕಾರಣದಿಂದ ಈತ...

ಮತದಾರರ ಜಾಗೃತಿ ಕಾರ್ಯಕ್ರಮ, ಕಾಲ್ನಡಿಗೆ ಜಾಥಾ ಹಾಗೂ ಬೀದಿನಾಟಕ

ತಾಲೂಕು ಪಂಚಾಯತ್‌ ಬಂಟ್ವಾಳ, ತಾಲೂಕು ಸ್ವೀಪ್‌ ಸಮಿತಿ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಬಂಟ್ವಾಳ ಪುರಸಭೆ, ರಾಷ್ಟ್ರೀಯ ಸೇವಾ ಯೋಜನೆ, ಮತದಾರರ ಸಾಕ್ಷರತಾ...

ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೋಟೋ ಬಳಕೆ ಖಂಡನೀಯ-ಜಗದೀಶ್ ಕೊಯಿಲ

ಬಂಟ್ವಾಳ: ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೋಟೋ ಬಳಕೆ ಮಾಡಿದ್ದು ಖಂಡನೀಯ ಎಂದು ಜಗದೀಶ್ ಕೊಯಿಲ ತಿಳಿಸಿದ್ದಾರೆ. ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಷ್ಟ್ರೀಯ...