ಶಂಭೂರು: ವಿದ್ಯಾರ್ಥಿಗಳ ಭವಿಷ್ಯದ ನಿರ್ಮಾಣಕ್ಕೆ ಶಿಬಿರ ಪೂರಕವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ

ಶಂಭೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಡಾ.ಎನ್.ಯಸ್.ಏ.ಎಮ್ ಪದವಿ ಪೂರ್ವ ಕಾಲೇಜು ನಂತೂರು ಮಂಗಳೂರು ಇವದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಇನ್ನು ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಆನಂದ ಶಂಭೂರು, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಕಾಶ್, ಪಂಚಾಯತ್ ಸದಸ್ಯರಾದ ಸಂತೋಷ್, ಯೋಗೀಶ್, ಯುವ ಸಂಗಮ ಯುವಕ ಮಂಡಲದ ಅಧ್ಯಕ್ಷ ಯಶೋಧರ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುಧೀರ್ ದಡ್ಡಲಕಾಡು, ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ರಮಾನಂದ ಕಾರಂತ್, ಶಿಕ್ಷಣಾಧಿಕಾರಿ ಸಂಧ್ಯಾ ಉಪಸ್ಥಿತರಿದ್ದರು.
ಸಹಾಯಕ ಶಿಬಿರಾಧಿಕಾರಿ ವೆಂಕಟಗಿರಿ ಸ್ವಾಗತಿಸಿದರು, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕಮಲಾಕ್ಷ ವಂದಿಸಿದರು.