Monday, April 15, 2024

ಸ.ಪ.ಪೂ ಕಾಲೇಜು, ಬೆಂಜನಪದವು ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ

ರಾಷ್ಟ್ರೀಯ ಸೇವಾ ಯೋಜನೆ, ಸರಕಾರಿ ಪದವಿ ಪೂರ್ವ ಕಾಲೇಜು, ಬೆಂಜನಪದವು ಇದರ ವಾರ್ಷಿಕ ವಿಶೇಷ ಶಿಬಿರ 2022-23 ರ ಉದ್ಘಾಟನಾ ಸಮಾರಂಭವು ಅ.6 ಗುರುವಾರ ಅಪರಾಹ್ನ 2.30 ಕ್ಕೆ ಶ್ರೀ ರಾಜ ರಾಜೇಶ್ವರಿ ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ಜರುಗಿತು.

ರಾಮಕೃಷ್ಣ, ತಪೋವನದ ಸ್ವಾಮೀಜಿಗಳಾದ ಶ್ರೀ ಶ್ರೀ ವಿವೇಕಾಚೈತನ್ಯನಂದರು ಶಿಬಿರವನ್ನು ದೀಪ ಬೆಳಗಿಸಿ, ಉದ್ಘಾಟಿಸಿ, ಈ ಶಿಬಿರವು ವಿದ್ಯಾರ್ಥಿಗಳ ಸರ್ವೋತೋಮುಖ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪ ಎಂದು ಅಭಿಪ್ರಾಯ ಪಟ್ಟರು. ವಿಶ್ವ ಭಾತೃತ್ವ, ಸಮಾನತೆ&ಸೇವಾಮನೋಭಾವಕ್ಕೆ ಇಂತ ಶಿಬಿರದ ಅಗತ್ಯ ಎಂದು ಬಣ್ಣಿಸಿದರು. ಸ್ವಾಮಿ ವಿವೇಕಾನಂದರನ್ನು ಸ್ಮರಿಸಿದ ಸ್ವಾಮೀಜಿಯವರು ಭಾರತೀಯ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಈ ಶಿಬಿರದ ಮೂಲಕ ಎಲ್ಲಡೆ ಪಸರಿಸಲಿ ಎಂದು ಹಾರೈಸಿದರು.

ಕಾಲೇಜಿನ ಪ್ರಾಚಾರ್ಯರು, ಶಿಬಿರದ ನಿರ್ದೇಶಕರರಾದ ಕವಿತಾರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಂಜನಪದವು ಕಾಲೇಜಿನ ಕಾರ್ಯಧ್ಯಕ್ಷರಾದ ವಾಮನಚ್ಯರ್ಯ, ಪೊಳಲಿ ಶಾಲೆಯ ಕಾರ್ಯಧ್ಯಕ್ಷರಾದ ವೆಂಕಟೇಶ್ ನಾವಡ, ಕರಿಯಂಗಳ ಗ್ರಾಮ ಪಂಚಾಯತಿ ನ ಅಧ್ಯಕ್ಷರಾದ ಚಂದ್ರಹಾಸ ಪಲ್ಲಿಪಾಡಿ, ಪೊಳಲಿ ಶಾಲೆಯ ಮುಖ್ಯಪಾಧ್ಯಾಯರಾದ ರಾಧಾಕೃಷ್ಣಭಟ್, ಕರಿಯಂಗಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಲಿನಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ನಿರ್ಮಿಸಿದ ಶಾಲಾ ಶೌಚಾಲಯವನ್ನು ಲೋಕಾರ್ಪಣೆಗೊಳಿಸಲಾಯಿತು.

ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮಾಧಿಕಾರಿ ಬಾಲಕೃಷ್ಣ ಎನ್ ವಿ ಸ್ವಾಗತಿಸಿ, ರವಿಚಂದ್ರ ಮಯ್ಯ ಗಣಿತ ಉಪನ್ಯಾಸಕರು ವಂದಿಸಿ, ಅರ್ಥಶಾಸ್ತ್ರ ಉಪನ್ಯಾಸಕರಾದ ನೂರ್ ಮಹಮ್ಮದ್ ಕಾರ್ಯಕ್ರಮ ನಿರೂಪಿಸಿದರು ಉಪನ್ಯಾಸಕರಾದ ಮೇದಪ್ಪ ಜಿ ಆರ್, ಡಾ, ಸಂಧ್ಯಾ ರಾಣಿ, ಚಂದ್ರಶೇಖರ ಎಂ, ಚಂದ್ರಕಲಾ ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನೆ, ಸರಕಾರಿ ಪದವಿ ಪೂರ್ವ ಕಾಲೇಜು, ಬೆಂಜನಪದವು ಇದರ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭವು ಅ.6 ಗುರುವಾರ ಶ್ರೀ ರಾಜ ರಾಜೇಶ್ವರಿ ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ಜರುಗಿತು.

ರಾಮಕೃಷ್ಣ, ತಪೋವನದ ಸ್ವಾಮೀಜಿಗಳಾದ ಶ್ರೀ ಶ್ರೀ ವಿವೇಕಾಚೈತನ್ಯನಂದರು ಶಿಬಿರವನ್ನು ದೀಪ ಬೆಳಗಿಸಿ, ಉದ್ಘಾಟಿಸಿ, ಈ ಶಿಬಿರವು ವಿದ್ಯಾರ್ಥಿಗಳ ಸರ್ವೋತೋಮುಖ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪ ಎಂದು ಅಭಿಪ್ರಾಯ ಪಟ್ಟರು. ವಿಶ್ವ ಭಾತೃತ್ವ, ಸಮಾನತೆ&ಸೇವಾಮನೋಭಾವಕ್ಕೆ ಇಂತ ಶಿಬಿರದ ಅಗತ್ಯ ಎಂದು ಬಣ್ಣಿಸಿದರು. ಸ್ವಾಮಿ ವಿವೇಕಾನಂದರನ್ನು ಸ್ಮರಿಸಿದ ಸ್ವಾಮೀಜಿಯವರು ಭಾರತೀಯ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಈ ಶಿಬಿರದ ಮೂಲಕ ಎಲ್ಲಡೆ ಪಸರಿಸಲಿ ಎಂದು ಹಾರೈಸಿದರು.

ಕಾಲೇಜಿನ ಪ್ರಾಚಾರ್ಯ ಶಿಬಿರದ ನಿರ್ದೇಶಕಿ ಕವಿತಾರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಂಜನಪದವು ಕಾಲೇಜಿನ ಕಾರ್ಯಧ್ಯಕ್ಷ ವಾಮನ ಆಚಾರ್ಯ ಪೊಳಲಿ ಶಾಲೆಯ ಕಾರ್ಯಧ್ಯಕ್ಷ ವೆಂಕಟೇಶ್ ನಾವಡ, ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಪೊಳಲಿ ಶಾಲೆಯ ಮುಖ್ಯಪಾಧ್ಯಾಯ ರಾಧಾಕೃಷ್ಣಭಟ್, ಕರಿಯಂಗಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಲಿನಿ,ಉಪನ್ಯಾಸಕ ಮೇದಪ್ಪ ಜಿ ಆರ್, ಡಾ, ಸಂಧ್ಯಾ ರಾಣಿ, ಚಂದ್ರಶೇಖರ ಎಂ, ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ನಿರ್ಮಿಸಿದ ಶಾಲಾ ಶೌಚಾಲಯವನ್ನು ಲೋಕಾರ್ಪಣೆಗೊಳಿಸಲಾಯಿತು.

ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮ ಅಧಿಕಾರಿ ಬಾಲಕೃಷ್ಣ ಎನ್ ವಿ ಸ್ವಾಗತಿಸಿ, ಉಪನ್ಯಾಸ ಕ ರವಿಚಂದ್ರ ಮಯ್ಯ ವಂದಿಸಿದರು, ಉಪನ್ಯಾಸಕ ನೂರ್ ಮಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.

More from the blog

ಹಿಂದೂ‌ ಸಂಘಟನೆಯ ಕಾರ್ಯಕರ್ತನಿಗೆ ಚೂರಿ ಇರಿತ

ಬಂಟ್ವಾಳ : ಹಿಂದೂ ಸಂಘಟನೆಯ ಮುಖಂಡನೋರ್ವನಿಗೆ ಸ್ನೇಹಿತ ಚೂರಿಯಿಂದ ಇರಿದ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಈತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಿಂದೂಯುವಸೇನೆಯ ಮುಖಂಡನಾಗಿದ್ದು, ಉದ್ಯಮಿಯಾಗಿರುವ...

ನೆತ್ತರಕೆರೆ: ನವೋದಯ ಮಿತ್ರ ಕಲಾ ವೃಂದ (ರಿ.) 37ನೇ ವಾರ್ಷಿಕೋತ್ಸವ ಸಮಾರಂಭ

ಬಂಟ್ವಾಳ : ಈ ಮಣ್ಣಿನ ಸಂಸ್ಕೃತಿ, ಮೌಲ್ಯವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಮಹತ್ತರವಾದ ಜವಾಬ್ದಾರಿ ಸಂಘ ಸಂಸ್ಥೆಗಳ ಮೇಲಿದೆ, ಈ ನಿಟ್ಟಿನಲ್ಲಿ ನವೋದಯ ಮಿತ್ರ ಕಲಾ ವೃಂದವು ಸಮಾಜಕ್ಕೆ ಪೂರಕವಾಗಿ ಸಮಾಜಮುಖಿ ಕಾರ್ಯಗಳನ್ನು...

ಲೋಕಸಭಾ ಚುನಾವಣೆ : ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ನವದೆಹಲಿ: ದೆಹಲಿಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭೆ ಚುನಾವಣೆಗಾಗಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ‘ಸಂಕಲ್ಪ ಪತ್ರ’ ಹೆಸರಲ್ಲಿ ದೇಶದ ಜನರಿಗೆ ಪ್ರಧಾನಿ ಮೋದಿ ಆಶ್ವಾಸನೆಗಳನ್ನು ನೀಡಿದ್ದು ಮೊದಲ ಸಂಕಲ್ಪ...

ಬಾಲಿವುಡ್ ನಟ ಸಲ್ಮಾನ್​ ಖಾನ್ ಮನೆ ಮುಂದೆ ಗುಂಡಿನ ದಾಳಿ

ಮುಂಬೈ: ಬಾಲಿವುಡ್ ಆ್ಯಕ್ಟರ್​ ಸಲ್ಮಾನ್ ಖಾನ್ ಅವರ ನಿವಾಸದ ಮೇಲೆ ಇಂದು ಬೆಳಗಿನ ಜಾವ 5 ಗಂಟೆಗೆ ದುಷ್ಕರ್ಮಿಗಳು ಬೈಕ್​ನಲ್ಲಿ ಬಂದು 5 ಸುತ್ತು ಫೈರಿಂಗ್ ಮಾಡಿ ಎಸ್ಕೇಪ್ ಆಗಿದ್ದಾರೆ. ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ...