Friday, April 26, 2024

ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಹೊಸ ರೂಪಾಂತರಿ ತಳಿ ಪತ್ತೆ

ಕೋವಿಡ್ ಸೋಂಕಿನ ಹೊಸ ಪ್ರಕರಣಗಳು ಕರ್ನಾಟಕದಲ್ಲಿ ಕಡಿಮೆಯಾಗುತ್ತಿದ್ದು ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದಂತೆ ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಹೊಸ ರೂಪಾಂತರಿ ತಳಿ ಪತ್ತೆಯಾಗಿರುವುದರಿಂದ ಮತ್ತೆ ಆತಂಕ ಶುರುವಾಗಿದೆ. ರಾಜ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮತ್ತೆ ಕಟ್ಟೆಚ್ಚರ ವಹಿಸಿದ್ದು ಈ ಹಿನ್ನಲೆಯಲ್ಲಿ ಕೆಲವೊಂದು ನಿಯಮ ಪಾಲಿಸುವಂತೆ ಸೂಚನೆ ನೀಡಿದೆ.

ಕೋವಿಡ್ 19ನ ಬಿಎ. 2.75 ಹಾಗೂ ಬಿಜೆ.1 ನ ಪುರ್ನಸಂಯೋಜಿತ , ಓಮಿಕ್ರಾನ್ BQ.1 ಹೊಸ ಉಪರೂಪಾಂತರಿ ತಳಿಯು ನೆರೆಯ ಮಹಾರಾಷ್ಟ್ರ ಪತ್ತೆಯಾಗಿದ್ದು, ಎರಡು ರೂಪಾಂತರಗಳಿಂದ ಕೋವಿಡ್‌ನ ರೀತಿಯಲ್ಲಿಯೇ ಸೋಂಕು ಹರಡುತ್ತದೆ ಎಂದು ತಿಳಿದುಬಂದಿದೆ.

ಆರೋಗ್ಯ ಇಲಾಖೆಯು ಪ್ರಕಟಣೆ ಹೊರಡಿಸಿದ್ದು ಸಾರ್ವಜನಿಕರು ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು ಅಥವಾ ಉಸಿರಾಟದ ಸಂಬಂಧಿತ ಸಮಸ್ಯೆಯ ಯಾವುದೇ ಲಕ್ಷಣಗಳು ಕಂಡುಬಂದರೆ ಸ್ಥಳೀಯ ಆಸ್ಪತ್ರೆಗೆ ಹೋಗಿ ರ್ಯಾಪಿಡ್ ಆಂಟಜೆನ್, ಟೆಸ್ಟಿಂಗ್ ಮಾಡಿಸಿಕೊಳ್ಳಬೇಕು, ನೆಗೆಟಿವ್, ಫಲತಾಂಶ ಬಂದಲ್ಲಿ ಆರ್‌ಟಿ ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಸಾರ್ವಜನಿಕ ಪ್ರದೇಶಗಳಲ್ಲಿ ಫೇಸ್ ಮಾಸ್ಕ್ ಬಳಸಿದರೆ ಉತ್ತಮ, ಸೊಂಕಿತರು ಮನೆಯಲ್ಲೇ ಇರಬೇಕು, ಅಂತರ ಕಾಯ್ದುಕೊಳ್ಳಬೇಕು ಎರಡು ಡೋಸ್ ಲಸಿಕೆಗಳನ್ನು ತೆಗೆದುಕೊಂಡವರು, ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು. ಹಿರಿಯರು ಹೆಚ್ಚಿನ ಮುಂಜಾಗ್ರತೆ ವಹಿಸಬೇಕು ಎಂದಿದೆ.

More from the blog

ಬಂಟ್ವಾಳ ತಾಲೂಕಿನ ಹಲವೆಡೆ ಮತಯಂತ್ರದಲ್ಲಿ ತಾಂತ್ರಿಕ ದೋಷ

ತಾಲೂಕಿನ ಕೆಲವು ಕಡೆಗಳಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಕೆಲವು ಮತಗಟ್ಟೆಯಲ್ಲಿ ಪ್ರಾರಂಭದಲ್ಲಿ ಮತಯಂತ್ರಗಳು ಕೈ ಕೊಟ್ಟರೆ ಇನ್ನು‌ಕೆಲವು ಕಡೆಗಳ ಮತಯಂತ್ರಗಳು ಮಧ್ಯಾಹ್ನ ವೇಳೆ ಕೆಟ್ಟು ಹೋಗಿದೆ. ಬಿಸಿರೋಡಿನ ಹೃದಯಭಾಗದಲ್ಲಿರುವ ಕೈಕುಂಜೆ ಎ.ಪಿ.ಎಂ.ಸಿ....

ಬಂಟ್ವಾಳ ‌ವಿಧಾನ ಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆಯ ವೇಳೆಗೆ 50.86% ಮತದಾನ

ಬಂಟ್ವಾಳ ‌ವಿಧಾನ ಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ.50.86 ರಷ್ಟು ಮತದಾನವಾಗಿದೆ. ಬೆಳಿಗ್ಗೆಯಿಂದಲೇ ಒಂದೇ ರೀತಿಯಲ್ಲಿ ಮತಗಟ್ಟೆಯಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತ ಮತಚಲಾಯಿಸುವ ದೃಶ್ಯ ಕಂಡು...

ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

ಕಡಬ: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು ಪೋಲಿಸರು ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಳಿಸಿದ ಘಟನೆ ನಡೆದಿದೆ. ಬೂತಿನಲ್ಲಿರುವ ಮುಖಂಡರು ಕೊನೆ ಕ್ಷಣದಲ್ಲಿ ಮತದಾರರನ್ನು ಓಲೈಸುವ ಪ್ರಯತ್ನ...

ಬಂಟ್ವಾಳ ‌ವಿಧಾನ ಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ : 11 ಗಂಟೆ ವೇಳೆಗೆ 33.7% ಮತದಾನ

ಬಂಟ್ವಾಳ ‌ವಿಧಾನ ಸಭಾ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆಯುತ್ತಿದ್ದು, ಸೆಕೆಯನ್ನು ಲೆಕ್ಕಿಸದೆ ಮತದಾನ ಮಾಡುತ್ತಿದ್ದಾರೆ. ಮಧ್ಯಾಹ್ನ 12 ವೇಳೆಗೆ ಕೂಡ ಮತಗಟ್ಟೆಯಲ್ಲಿ ಜನರು ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು...