ಕರೋಲಿ ಎನ್ನುವ ಭೀಕರ ಕಾಯಿಲೆಗೆ ತುತ್ತಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನ ಚಿಕಿತ್ಸೆಗಾಗಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಘಟಕದ ಕಾರ್ಯಕರ್ತರು ಸಂಗ್ರಹಿಸಿದ ಧನ ಸಹಾಯವನ್ನು ಬಾಲಕನ ಕುಟುಂಬಕ್ಕೆ ಹಸ್ತಾಂತರಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳುವಾಯಿಯ ಸಂತೋಷ್ ಮತ್ತು ಭವ್ಯ ಇವರ ಮಗನಾದ 3 ವರ್ಷದ ಅರವ್ ಕರೋಲಿ ಎನ್ನುವ ಬೀಕರ ಕಾಯಿಲೆಗೆ ತುತ್ತಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈತನ ಚಕಿತ್ಸೆಗಾಗಿ 25 ಲಕ್ಷದವರೆಗೆ ಖರ್ಚು ಆಗುತ್ತೆ ಎಂದು ತಿಳಿದು ತಂದೆ ತಾಯಿ ದಿಕ್ಕೇ ತೋಚದಂತಾಗಿತ್ತು. ಇನ್ನು ವಿಚಾರ ತಿಳಿದ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಘಟಕದ ಕಾರ್ಯಕರ್ತರೆಲ್ಲ ಒಟ್ಟು ಸೇರಿ ದಾನವೇ ಧರ್ಮದ ಮೂಲ ಎಂಬ ದ್ಯೇಯ ವಾಕ್ಯದಂತೆ ಭವತಿ ಬಿಕ್ಷಾಂದೇಹಿ ಟೀಮ್ ರಚಿಸಿ ನವರಾತ್ರಿಯ ದಿನದಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಹಾಗೂ ಮಂಗಳಾದೇವಿ ಕ್ಷೇತ್ರದಲ್ಲಿ ಮತ್ತು ಮಹಾದೇವಿ ಮಹಾಮ್ಮಯಿ ದೆವಸ್ಥಾನ ಕೂಡಿಬೈಲು ಕ್ಷೇತ್ರದಲ್ಲಿ ಅರವ್ ನ ಚಿಕಿತ್ಸೆಗಾಗಿ ಸಹಾಯ ಹಸ್ತಯಾಚಿಸಲಾಯಿತು. ಈ ವೇಳೆ ಸಂಗ್ರಹಿಸಿದ ಸುಮಾರು 1ಲಕ್ಷದ 75000 ಸಾವಿರ ಹಣವನ್ನು ಭಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಮುಡೆಲ್ ಸಮ್ಮುಖದಲ್ಲಿ ಅರವ್ ತಂದೆ ತಾಯಿಗೆ ಹಸ್ತಾಂತರ ಮಾಡಲಾಯಿತು.
ಈ ಸಾಮಾಜಿಕ ಕಾರ್ಯದಲ್ಲಿ ಮೂಡಬಿದ್ರೆಯ ಸೋಮಾನಾತ್ ಕೋಟ್ಯಾನ್ ಭಜರಂಗದಳ ಪುತ್ತೂರು ಜಿಲ್ಲಾ ಸಹಸಂಚಾಲಕರಾದ ಗುರುರಾಜ್ ಬಂಟ್ವಾಳ ಶಿವಪ್ರಸಾದ್ ತುಂಬೆ ದೀಪಕ್ ಅಜೆಕಲ ಸಂತೋಷ್ ಸರಪಾಡಿ ಪ್ರಸಾದ್ ಬೆಂಜನಪದವು ಅಭಿನ್ ರೈ ಭಜರಂಗದಳ ಸಿಂತಾನಿಕಟ್ಟೆ ಪೂಪಾಡಿಕಟ್ಟೆ ಘಟಕದ ಸದಸ್ಯರು ಹಾಗೂ ಬೆಳುವಾಯಿ ಭಜರಂಗದಳ ಸ್ಥಳೀಯ ಘಟಕದ ಕಾರ್ಯಕರ್ತರು ಭಾಗಿಯಾಗಿದ್ದರು.