ವಿಟ್ಲ: ಅನಾರೋಗ್ಯದಿಂದಿರುವ ಮಕ್ಕಳ ಚಿಕಿತ್ಸೆಗೆ ನೆರವಾಗಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ನವರಾತ್ರಿಯ ಕೊನೆಯ ದಿನದಂದು ಇಬ್ಬರು ಯುವಕರು ರಾಕ್ಷಸರ ವೇಷ ಹಾಕಿ ಹಣ ಸಂಗ್ರಹಿಸಿದ್ದು, ಸಂಗ್ರಹವಾದ ಹಣವನ್ನು ಅನಾರೋಗ್ಯದಿಂದಿರುವ ಇಬ್ಬರು ಮಕ್ಕಳಿಗೆ ಹಸ್ತಾಂತರಿಸಲಾಯಿತು.

ನವರಾತ್ರಿಯ ಕೊನೆಯ ದಿನದಂದು ನಾಗರಾಜ್ ಕಡಂಬು ಮತ್ತು ಸಕೀತ್ ಕಡಂಬು ಬನ ಇಬ್ಬರು ಯುವಕರು ರಾಕ್ಷಸರಾದ ಚಂಡ-ಮುಂಡರ ವೇಷ ಹಾಕಿ ಹಣ ಸಂಗ್ರಹಿಸಿದ್ದು, ಸಂಗ್ರಹವಾದ 26 ಸಾವಿರ ರೂ. ಮೊತ್ತದಲ್ಲಿ ಅಂಗವಿಕಲತೆ ಮತ್ತು ಕಿಡ್ನಿ ವೈಫಲ್ಯದಿಂದಿರುವ ಕಡಂಬು ಪೂರ್ಲಪ್ಪಾಡಿಯ ತನ್ಮಯ್ ಗೆ 10 ಸಾವಿರ ರೂ. ಹಾಗೂ ಒಕ್ಕೆತ್ತೂರು ನಿವಾಸಿ ಅನಾರೋಗ್ಯದಿಂದಿರುವ ದಿಗಂತ್ ಗೆ 16 ಸಾವಿರ ರೂ. ಯಂತೆ ಹಸ್ತಾಂತರಿಸಿದರು. ಯುವಕರ ಈ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಲಯನ್ಸ್ ನ ಸಂದೇಶ್ ಶೆಟ್ಟಿ ಬಿಕ್ನಾಜೆ, ಯುವ ಉದ್ಯಮಿ ಪ್ರಶಾಂತ್ ಗೌಡ ಕಡಂಬು ಬನ, ಷಣ್ಮುಖ ಪೂಜಾರಿ ಕುಡೂರು ಹಾಗೂ ಫ್ರೆಂಡ್ಸ್ ಕಡಂಬಿನ ಸದಸ್ಯರಾದ ಚೇತನ್ ಗೌಡ ಕಡಂಬು ಬನ, ವಿವೇಕ್ ಶೆಟ್ಟಿ ಕಡಂಬು, ಕಿರಣ್ ದೇವಾಡಿಗ ಕಡಂಬು, ವಲಿತ್ ಕಡಂಬು, ಅವಿನಾಶ್ ಕಡಂಬು, ರಾಕೇಶ್ ಪಿಂಟೋ ಕೂಡೂರು ಉಪಸ್ಥಿತರಿದ್ದರು.