ಬಂಟ್ವಾಳ: ಎಮ್ಮೆ ಮಾಂಸ ಮಾರಾಟ ಮಾಡಲು ಅವಕಾಶ ಕೇಳಿ ಗ್ರಾಮ ಪಂಚಾಯತ್ ಗೆ ವ್ಯಕ್ತಿಯೋರ್ವ ಅರ್ಜಿವೊಂದನ್ನು ನೀಡಿದ್ದು, ಪರವಾನಿಗೆ ನೀಡಿದರೆ ಹೋರಾಟ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಎಚ್ಚರಿಕೆ ಯ ಸಂದೇಶ ನೀಡಿದೆ.
ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಲೊರೆಟ್ಟೋ ಬಳಿ ಅಂತೋನಿ ಪೀಟರ್ ಅವರ ಮಾಲಿಕತ್ವದ ಕಟ್ಟಡವೊಂದರ ಕೋಣೆಯಲ್ಲಿ ಎಮ್ಮೆ ಮಾಂಸ ಮಾರಾಟ ಮಾಡಲು ಅವಕಾಶ ನೀಡುವಂತೆ ಮಂಗಳೂರು ಕಾವೂರು ನಿವಾಸಿ ಆಶೋಕ್ ಕುಲಾಲ್ ಎಂಬಾತ ಮನವಿ ನೀಡಿದ್ದಾನೆ.
ಇದರ ಹಿಂದೆ ದೊಡ್ಡದಾದ ಷಡ್ಯಂತ್ರವಿದೆ ಎಂದು ಆರೋಪ ವ್ಯಕ್ತಪಡಿಸಿದ ಸಂಘಟನೆ ಯಾವುದೇ ಕಾರಣಕ್ಕೆ ಅವರಿಗೆ ಮಾರಾಟ ಕ್ಕೆ ಅವಕಾಶ ನೀಡಬಾರದು.
ಗೋ ಹತ್ಯೆ ನಿಷೇದ ಕಾನೂನು ಜಾರಿಯಾಗಿ ಅನುಷ್ಠಾನ ಬರುವ ಸಂದರ್ಭದಲ್ಲಿ ಎಮ್ಮೆ ಮಾಂಸ ಮಾರಾಟ ಮಾಡುವ ಅವಕಾಶ ನೀಡಿದರೆ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ.ಅ ಕಾರಣಕ್ಕಾಗಿ ಪರವಾನಿಗೆ ನೀಡಬಾರದು ಎಂದು ವಿಶ್ವ ಹಿಂದೂಪರಿಷತ್ ಭಜರಂಗದಳ ಕಿನ್ನಿಬೆಟ್ಟು ಘಟಕ ಅಮ್ಟಾಡಿ ಪಿ.ಡಿ.ಒ.ಹಾಗೂ ಅಧ್ಯಕ್ಷ ರಿಗೆ ಮನವಿ ಮಾಡಿದೆ.
