Tuesday, September 26, 2023

ಮಹಿಳಾ ಸ್ಪರ್ಧಿಗಳ ಜೊತೆ ಮಿಂಗಲ್ ಆಗುವ ರೂಪೇಶ್ ಶೆಟ್ಟಿಗೆ ಫನ್ನಿ ಆಗಿಯೇ ಕಾಲೆಳೆದ ಕಿಚ್ಚ

Must read

ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳ ಜತೆ ಮಿಂಗಲ್ ಆಗುತ್ತಾರೆ.  ಅದರಲ್ಲೂ ಮಹಿಳಾ ಸ್ಪರ್ಧಿಗಳ ಜತೆ ಅವರು ಹೆಚ್ಚು ಕ್ಲೋಸ್ ಆಗಿದ್ದಾರೆ. ಕಿಚ್ಚ ಸುದೀಪ್ ಅವರು ಈ ವಿಚಾರದಲ್ಲಿ ಸದಾ ಕಾಲೆಳೆಯುತ್ತಲೇ ಬರುತ್ತಿದ್ದಾರೆ. ಈ ವಾರ ರೂಪೇಶ್ ಶೆಟ್ಟಿಗೆ ಸುದೀಪ್ ಅವರು ಫನ್ನಿ ಆಗಿಯೇ ಕಾಲೆಳೆದಿದ್ದಾರೆ. ಇದನ್ನು ಕೇಳಿ ಮನೆ ಮಂದಿ ನಕ್ಕಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸಾನ್ಯಾ ಐಯ್ಯರ್ ಜತೆ ರೂಪೇಶ್ ಶೆಟ್ಟಿ ಕ್ಲೋಸ್ ಆಗಿದ್ದಾರೆ. ಒಟಿಟಿ ಸೀಸನ್​ನಿಂದ ಇವರ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗಿದೆ. ನಮ್ಮ ಮಧ್ಯೆ ಇರೋದು ಫ್ರೆಂಡ್​ಶಿಪ್ ಮಾತ್ರ ಎಂದು ರೂಪೇಶ್ ಶೆಟ್ಟಿ ಆಗಾಗ ಸ್ಪಷ್ಟನೆ ನೀಡುತ್ತಲೇ ಇರುತ್ತಾರೆ. ಆದ್ರೆ ಟಿವಿ ಸೀಸನ್​ನಲ್ಲಿ ರೂಪೇಶ್ ಶೆಟ್ಟಿ ಅವರು ಅನೇಕ ಮಹಿಳಾ ಸ್ಪರ್ಧಿಗಳ ಜತೆ ಕ್ಲೋಸ್ ಆಗಿದ್ದಾರೆ. ರೂಪೇಶ್ ಅವರೇ ನೀವು ಬಿಗ್ ಬಾಸ್ ಮನೆಯ ಯೂನಿವರ್ಸಿಟಿ ಅಂತಾ  ಸುದೀಪ್ ಹೇಳಿದ್ದಾರೆ. ಇದು ಏಕೆ ಎಂದು ರೂಪೇಶ್ ಶೆಟ್ಟಿ ಪ್ರಶ್ನೆ ಮಾಡಿದರು. ಅದಕ್ಕೆ ಸುದೀಪ್ ನಗುತ್ತಲೇ ಉತ್ತರ ನೀಡಿದ್ದಾರೆ. ಈ ಬಾರಿ ರೂಪೇಶ್ ಅವರು ಎಲ್ಲರ ಜತೆ ಕ್ಲೋಸ್ ಆಗಿದ್ದಾರೆ. ಅಡುಗೆ ಮನೆಯಲ್ಲಿ ಯಾರ ಜತೆ ಮಾತನಾಡಬೇಕು, ಬಾತ್​ರೂಂನಲ್ಲಿದ್ದಾಗ ಯಾರ ಜತೆ ಮಾತನಾಡಬೇಕು, ಲೈಟ್ ಆಫ್ ಆದಾಗ ಯಾರ ಜತೆ ಮಾತನಾಡಬೇಕು ಎಂಬುದು ಅವರಿಗೆ ಗೊತ್ತಿದೆ ಎಂದು ಸುದೀಪ್ ಹೇಳಿದ್ದಾರೆ. ಇದನ್ನು ಕೇಳಿದ ರೂಪೇಶ್ ಆ ರೀತಿ ಇಲ್ಲ ಎಂದು ನಕ್ಕರು

ನಾನು ಎಲ್ಲರ ಜತೆ ಕ್ಲೋಸ್ ಇದ್ದೀನಿ. ಎಲ್ಲರ ಜತೆಯೂ ಫ್ರೆಂಡ್​ಶಿಪ್ ಅಷ್ಟೇ ಇರೋದು ಎಂದು ರೂಪೇಶ್​ ಹೇಳಿದರು. ನೀವು ಫ್ರೆಂಡ್​ಶಿಪ್​ನೇ ಮಾಡಿಕೊಂಡಿರೋದು ಎಂದು ಫನ್ನಿಯಾಗಿಯೇ ಸುದೀಪ್ ಅವರು ಕಾಳೆದಿದ್ದಾರೆ.

More articles

Latest article