ನವರಾತ್ರಿ ಸಂದರ್ಭದಲ್ಲಿ ಶಾರ್ದೋಲ ವೇಷ ಧರಿಸುವ ಮೂಲಕ ಶ್ರೀ ಕಾವೇಶ್ವರ ಫ್ರೆಂಡ್ಸ್ ತಂಡದ ಸದಸ್ಯರು ಸಾರ್ಥಕತೆ ಮೆರೆದಿದ್ದಾರೆ.

ಹಲವಾರು ವರ್ಷಗಳಿಂದ ತೆಂಕಬೆಳ್ಳೂರು, ಬಡಗ ಬೆಳ್ಳೂರು ಪರಿಸರದಲ್ಲಿ ಶಾರ್ದೋಲ ವೇಷ ಧರಿಸುವ ಈ ತಂಡ ನವರಾತ್ರಿ ಮುಗಿದ ಕೂಡಲೇ ತಮ್ಮ ಗಳಿಕೆಯ ಎಲ್ಲಾ ಹಣ ವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸದೆ ಊರಿನ ತೀರಾ ಬಡತನ ದಲ್ಲಿ ಇರುವ ಆಯ್ದ ಕುಟುಂಬಗಳಿಗೆ ತಲಾ 30ಕೆಜಿ ಅಕ್ಕಿ ಯಂತೆ ವಿತರಿಸಿ ಎಲ್ಲರಿಗೂ ಮಾದರಿಯಾಗಿರುತ್ತಾರೆ.
ಸದ್ಯ ಇದೀಗ ಈ ತಂಡಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.