Tuesday, September 26, 2023

ಕಾಂತಾರಾಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್.. ಹಿಂದಿ, ತೆಲುಗು ಟ್ರೈಲರ್ ರಿಲೀಸ್​​

Must read

ಎಲ್ಲಿ ಕೇಳಿದ್ರೂ ಕಾಂತಾರ ಒಂದು ದಂತ ಕಥೆಯದ್ದೇ ಹವಾ. ರಾಜ್ಯ ಬಿಡಿ ಬೇರೆ ರಾಜ್ಯಗಳಲ್ಲಿಯೂ ಬೇಡಿಕೆಯಿರುವ ಸಿನಿಮಾವಾಗಿ ಕಾಂತಾರ ಅದ್ದೂರಿಯಾಗಿ ಹೊರಹೊಮ್ಮಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಾಂತಾರ ಸಿನಿಮಾದ ಹಿಂದಿ, ತೆಲುಗು, ತಮಿಳು, ಮಲಯಾಳಂ ಟ್ರೈಲರ್ ಇಂದು ಬೆಳಗ್ಗೆ ರಿಲೀಸ್ ಆಗಿದೆ.

ಕಾಂತಾರ ತನ್ನ ಬೇಡಿಕೆ ಹೆಚ್ಚಿಸಿಕೊಂಡಿದ್ದು, ಚಿತ್ರದ ನಟ, ನಿರ್ದೇಶಕ ರಿಷಭ್‌ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ಭರ್ಜರಿ ಸಕ್ಸಸ್ ಕಾಣುತ್ತಿರುವ ಕಾಂತಾರ ತೆರೆಗೆ ಬಂದ ಒಂದು ವಾರದ ಬಳಿಕವೂ ಉತ್ತಮ ಗಳಿಕೆ ಕಾಣುತ್ತಿದೆ. ಇದರ ಜೊತೆಗೆ ಬೇರೆ ಭಾಷೆಯಿಂದಲೂ ಕನ್ನಡ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆ. ನಿಜವಾದ ಪ್ಯಾನ್ ಇಂಡಿಯಾ ಸಿನಿಮಾ ಅಂದ್ರೆ, ನಮ್ಮ ಸಿನಿಮಾಗಳು ಭಾಷೆಯ ಗಡಿ ದಾಟಿ ಬೇರೆ ಭಾಷೆಗೆ ಹೋಗುವುದು ಅಂತಾ ರಿಷಬ್ ಶೆಟ್ಟಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ.

ಇನ್ನು, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಕಾಂತಾರ ಬಿಡುಗಡೆಯಾಗಿದ್ದು, ಹಿಂದಿ, ತೆಲುಗು ಭಾಷೆಯಲ್ಲಿ ಸದ್ಯ ಕಾಂತಾರ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಉಳಿದಂತೆ ಅಕ್ಟೋಬರ್ 14ಕ್ಕೆ ಕಾಂತಾರ ಹಿಂದಿ ಆವೃತ್ತಿ ಬಿಡುಗಡೆಯಾದರೇ, ಅಕ್ಟೋಬರ್ 15ರಂದು ತೆಲುಗು ಹಾಗೂ ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ಸಿನಿಮಾ ತಂಡ ಮಾಹಿತಿ ನೀಡಿದೆ

More articles

Latest article