Monday, September 25, 2023
More

    ಸತ್ಯ, ಧರ್ಮ, ನ್ಯಾಯ, ನೀತಿಯುಕ್ತ ಬಾಳು ಅರ್ಥಪೂರ್ಣ’ -ಕಣಿಯೂರುಶ್ರೀ

    Must read

     

    ವಿಟ್ಲ: ಸತ್ಯ, ಧರ್ಮ, ನ್ಯಾಯ, ನೀತಿಯಿಂದ ನಡೆಸಿದ ಬಾಳು ಅರ್ಥಪೂರ್ಣವೆನಿಸುವುದು. ದೇವರಿಗೆ ಮೆಚ್ಚುಗೆಯಾಗುವ ಯಾವುದೇ ಕಾರ್ಯ ಜನ ಮೆಚ್ಚುಗೆ ಪಡೆಯುವುದು. ನಿಷ್ಕಲ್ಮಶ ಮನಸ್ಸಿನಿಂದ ದೇವರನ್ನು ನೆನೆದಾಗ ಬದುಕಿನ ಗುರಿ ಸಾಧಿಸಲು ಸಾಧ್ಯ. ಮಾತೃಧರ್ಮಕ್ಕೆ ಧಕ್ಕೆಯಾಗದಂತೆ ನಡೆದು ಕೊಳ್ಳುವುದು ನಮ್ಮೆಲ್ಲರ ಬದುಕಿನ ಧ್ಯೇಯವಾಗಿರಬೇಕು ಎಂದು ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ನುಡಿದರು.
    ಅವರು ಶ್ರೀ ಕ್ಷೇತ್ರದಲ್ಲಿ ನಡೆದ ಚಂಡಿಕಾ ಹೋಮದ ನಂತರ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ತ್ಯಾಗ ಭೋಗದ ನಡುವೆ ತುಲನಾತ್ಮಕವಾಗಿ ಬದುಕುವುದರಲ್ಲಿ ಸಾರ್ಥಕತೆಯಿದೆ ಎಂದು ತಿಳಿಸಿದರು.

    ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷ ಜಯಂತ ನಡುಬೈಲು ಮಾತನಾಡಿ ಹತ್ತು ಜನರ ಪ್ರೀತಿ ವಿಶ್ವಾಸ ಗಳಿಸುವುದೇ ನಿಜವಾದ ಬದುಕು. ನವರಾತ್ರಿಯ ನೈಜ ಸಂದೇಶಗಳು ಮಾತೆಯರ ಮೂಲಕ ಮಕ್ಕಳಿಗೆ ತಿಳಿಯುವಂತಾಗಬೇಕು ಎಂದು ಹೇಳಿದರು.
    ವಿಟ್ಲದ ಉದ್ಯಮಿ ಸತೀಶ್ ಆಳ್ವ ಇರಾ ಬಾಳಿಕೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
    ಮುಖ್ಯ ಅತಿಥಿಗಳಾಗಿ ವಿಟ್ಲ ಸುರಕ್ಷಾ ಹೆಲ್ತ್ ಸೆಂಟರ್ ನ ವೈದ್ಯೆ ಡಾ.ಗಾಯತ್ರಿ ಜಿ.ಪ್ರಕಾಶ್ , ವಿಟ್ಲ ಯುವವಾಹಿನಿ ಘಟಕದ ಅಧ್ಯಕ್ಷ ಯಶವಂತ ನಿಡ್ಯ, ಕರೋಪಾಡಿ ಗ್ರಾಮ ಪಂಚಾಯತ್ ಸದಸ್ಯ ಅಶ್ವತ್ಥ್ ಶೆಟ್ಟಿ ಮಂಟಮೆ, ಬಂಟ್ವಾಳ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರಾನಾಥ ಪಿ. ಉಪಸ್ಥಿತರಿದ್ದರು.
    ಶ್ರೀ ಚಾಮುಂಡೇಶ್ವರಿ ದೇವಿ ಟ್ರಸ್ಟ್ ಅಧ್ಯಕ್ಷ ಪದ್ಮನಾಭ ಪೂಜಾರಿ ಅಳಿಕೆ ಸ್ವಾಗತಿಸಿದರು. ಚಂದ್ರಶೇಖರ ಕಣಿಯೂರು ವಂದಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.

    ಶ್ರೀ ಕ್ಷೇತ್ರದಲ್ಲಿ ಬ್ರಹ್ಮಶ್ರೀ ವೇ.ಮೂ.ನಡಿಬೈಲು ಶಂಕರನಾರಾಯಣ ಭಟ್ ನೇತೃತ್ವದಲ್ಲಿ ಚಂಡಿಕಾ ಹೋಮ, ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಸ್ಥಳೀಯ ಮಕ್ಕಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

    More articles

    LEAVE A REPLY

    Please enter your comment!
    Please enter your name here

    Latest article