Sunday, April 14, 2024

ಹಾಡುಹಗಲೇ ಅಂಗಡಿಯ ಕ್ಯಾಸ್ ಡ್ರಾಯರ್ ನಿಂದ ನಗದು ಕಳವು : ಕಳ್ಳತನದ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆ

ಬಂಟ್ವಾಳ: ಹಾಡುಹಗಲೇ ಬಿಸಿರೋಡಿನ ಹೃದಯ ಭಾಗದ ಅಂಗಡಿಯೊಂದರಿಂದ ಕ್ಯಾಸ್ ಡ್ರಾಯರ್ ಗೆ ಕೈ ಹಾಕಿ ಹಣ ಕಳ್ಳತನ ಮಾಡುವ ದೃಶ್ಯ ವೊಂದು ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.

ಬಿಸಿರೋಡಿನ ತಾಲೂಕು ‌ಆಡಳಿತ ಕೇಂದ್ರ (ಮಿನಿ ವಿಧಾನ ಸೌಧದ ಕಚೇರಿ) ಮುಂಭಾಗದಲ್ಲಿರುವ ಎಸ್.ಆರ್.ಟಯರ್ ಮಾಲಕ ಸಂದೀಪ್ ಅವರ ಅಂಗಡಿಯಿಂದ ಕಳ್ಳನೊರ್ವ ಹಣ ಎಗರಿಸುವ ದೃಶ್ಯ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ.

ಆ.11 ರಂದು ಸುಮಾರು 12 ಗಂಟೆ ವೇಳೆಗೆ ಮಾಲಕ ಸಂದೀಪ್ ಅವರು ಅಂಗಡಿ ಮುಂಭಾಗದಲ್ಲಿ ಕಾರೊಂದು ಅಡ್ಡ ನಿಲ್ಲಿಸಲು ಬಂದ ವೇಳೆ ಆತನನ್ನು ಬದಿಗೆ ನಿಲ್ಲಿಸುವಂತೆ ತಿಳಿಸಿ ಅಂಗಡಿಯಿಂದ ತೆರಳಿದ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡ ಕಳ್ಳ ಕೂಡಲೇ ಅಂಗಡಿ ಒಳಗೆ ನುಗ್ಗಿ, ಕ್ಯಾಸ್ ಡ್ರಾಯರ್ ಓಪನ್ ಮಾಡಿ ಅದರಲ್ಲಿದ್ದ ಸುಮಾರು 10 ಸಾವಿರ ಹಣವನ್ನು ದೋಚಿಕೊಂಡು ಹೋಗುತ್ತಿರುವ ದೃಶ್ಯ ಸೆರೆ ಸಿಕ್ಕಿದೆ.
ಸಂದೀಪ್ ಅವರು ಹೊರಗೆ ಅಡ್ಡ ಇಟ್ಟಿದ್ದ ಕಾರನ್ನು ತೆರವುಮಾಡಲು ತಿಳಿಸಿ ವಾಪಾಸು ಬಂದು ಕ್ಯಾಸ್ ಡ್ರಾಯರ್ ಓಪನ್ ಆಗಿದ್ದು‌, ಸಂಶಯಗೊಂಡು ನೋಡಿದಾಗ ನಗದು ಹಣ ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಸಿ.ಸಿ.ಕ್ಯಾಮರಾ ಪರಿಶೀಲನೆ ನಡೆಸಿದಾಗ ಕಳವಾದ ಬಗ್ಗೆ ತಿಳಿದುಬಂದಿದೆ..

More from the blog

ಬೋಳಾರ ಚೂರಿ ಇರಿತ ಪ್ರಕರಣ : ಆರೋಪಿ ಅರೆಸ್ಟ್

ಮಂಗಳೂರು: ಬೋಳಾರ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಆನಂದ್‌ ಸಪಲ್ಯ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಬೋಳಾರ್ ನಲ್ಲಿ ಕಟಿಂಗ್ ಶಾಪ್ ನಡೆಸುತ್ತಿರುವ ಎಡ್ವಿನ್ ವಿನಯ್ ಕುಮಾರ್ ಅವರಿಗೆ...

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ : ವಾರಸುದಾರರ ಪತ್ತೆಗೆ ಮನವಿ

ಬಂಟ್ವಾಳ: ಅಪರಿಚಿತ ವ್ಯಕ್ತಿಯೋರ್ವನ‌ ಮೃತದೇಹವೊಂದು ಸಜೀಪ ನಡು ಎಂಬಲ್ಲಿ ರಿಕ್ಷಾ ನಿಲ್ದಾಣದಲ್ಲಿ ಪತ್ತೆಯಾಗಿದೆ. ಸಜೀಪ ನಡು ಗ್ರಾಮದಲ್ಲಿ ನ ರಿಕ್ಷಾ ನಿಲ್ದಾಣದಲ್ಲಿ ಸುಮಾರು 45 ವರ್ಷದ ಗಂಡಸಿನ ಮೃತದೇಹ ಪತ್ತೆಯಾಗಿದ್ದು ಯಾವ ಕಾರಣದಿಂದ ಈತ...

ಮತದಾರರ ಜಾಗೃತಿ ಕಾರ್ಯಕ್ರಮ, ಕಾಲ್ನಡಿಗೆ ಜಾಥಾ ಹಾಗೂ ಬೀದಿನಾಟಕ

ತಾಲೂಕು ಪಂಚಾಯತ್‌ ಬಂಟ್ವಾಳ, ತಾಲೂಕು ಸ್ವೀಪ್‌ ಸಮಿತಿ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಬಂಟ್ವಾಳ ಪುರಸಭೆ, ರಾಷ್ಟ್ರೀಯ ಸೇವಾ ಯೋಜನೆ, ಮತದಾರರ ಸಾಕ್ಷರತಾ...

ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೋಟೋ ಬಳಕೆ ಖಂಡನೀಯ-ಜಗದೀಶ್ ಕೊಯಿಲ

ಬಂಟ್ವಾಳ: ಕಾಸರಗೋಡು ಜಿಲ್ಲೆಯಲ್ಲಿ ರಾಜಕೀಯ ಲಾಭಕ್ಕಾಗಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೋಟೋ ಬಳಕೆ ಮಾಡಿದ್ದು ಖಂಡನೀಯ ಎಂದು ಜಗದೀಶ್ ಕೊಯಿಲ ತಿಳಿಸಿದ್ದಾರೆ. ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಷ್ಟ್ರೀಯ...