Saturday, April 13, 2024

ನ.12 ರಂದು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ ವತಿಯಿಂದ ಹೊನಲು ಬೆಳಕಿನ ಸ್ವಸ್ತಿಕ್ ಪ್ರೋ ಕಬಡ್ಡಿ ಉತ್ಸವ -2022

ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ ಬಂಟ್ವಾಳ ತಾಲೂಕು ಇದರ 38ನೇ ವರ್ಷದ ಅಂಗವಾಗಿ ಹೊನಲು ಬೆಳಕಿನ ಸ್ವಸ್ತಿಕ್ ಪ್ರೋ ಕಬಡ್ಡಿ ಉತ್ಸವ -2022 ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನ.12 ರಂದು ಬೆಳಗ್ಗೆ 9.30 ರಿಂದ ನ.13ರಂದು ರಾತ್ರಿ 11.30ರ ವರೆಗೆ ನಡೆಯಲಿದೆ.

ದ.ಕ ಜಿಲ್ಲಾ ಆಮೆಚೂರ್ ಕಬಡ್ಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷ ಯಂ.ತುಂಗಪ್ಪ ಬಂಗೇರವರ ನೇತೃತ್ವದಲ್ಲಿ, ಮುಂಬಯಿ ಉದ್ಯಮಿ ಸುಂದರ್‌ ರಾಜ್‌ ಹಗ್ಡೆ ಇವರ ಸಾರಥ್ಯದಲ್ಲಿ ಅಂತರ್ ರಾಜ್ಯ ಮಟ್ಟದ ಪುರುಷರ 60ಕೆ. ಜಿ ಮತ್ತು ಪುರುಷರ ಮುಕ್ತ ವಿಭಾಗ ಹಾಗೂ ದ. ಕ ಜಿಲ್ಲಾ ಮಟ್ಟದ ಪಿಯುಸಿ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ನಡೆಯಲಿದೆ.

60 ಕೆ.ಜಿ ವಿಭಾಗ ಮತ್ತು ಪುರುಷರ ಮುಕ್ತ ವಿಭಾಗ ಪ್ರವೇಶ ಶುಲ್ಕ 1000 ಹಾಗೂ ಪಿಯುಸಿ ಮತ್ತು ಪ್ರೌಢ ಶಾಲಾ ಬಾಲಕ-ಬಾಲಕಿಯರ ವಿಭಾಗದ ಉಚಿತ ಪ್ರವೇಶ. ಪ್ರವೇಶ ಶುಲ್ಕದೊಂದಿಗೆ ತಂಡಗಳ ಹೆಸರನ್ನು ನ.11ರ ಒಳಗೆ ನೊಂದಾಯಿಸಬೇಕು. ನ.06 ರಂದು ಬೆಳಗ್ಗೆ 10.30ಕ್ಕೆ ಸ್ವಸ್ತಿಕ್‌ ಕಛೇರಿಯಲ್ಲಿ ತಂಡಗಳ ಮುಖಾಮುಖಿ ಚೀಟಿ ಎತ್ತಲಾಗುವುದು.

60ಕೆ.ಜಿ. ವಿಭಾಗದ ಬಹುಮಾನಗಳು: 

ಪ್ರಥಮ 30,000 ನಗದು ಹಾಗೂ ಪ್ರಶಸ್ತಿ, ದ್ವಿತೀಯ 20,000 ನಗದು ಹಾಗೂ ಟ್ರೋಫಿ, ತೃತೀಯ 7,000 ನಗದು ಹಾಗೂ ಟ್ರೋಫಿ ಚತುರ್ಥ 1,000 ನಗದು ಹಾಗೂ ಟ್ರೋಫಿ.

ಪುರುಷರ ಮುಕ್ತ ವಿಭಾಗ ಬಹುಮಾನಗಳು:

ಪ್ರಥಮ 15,000 ನಗದು ಹಾಗೂ ಪ್ರಶಸ್ತಿ, ದ್ವಿತೀಯ 10,000 ನಗದು ಹಾಗೂ ಟ್ರೋಫಿ, ತೃತೀಯ 7,000 ನಗದು ಹಾಗೂ ಟ್ರೋಫಿ, ಚತುರ್ಥ 4,000 ನಗದು ಹಾಗೂ ಟ್ರೋಫಿ.

ಪಿಯುಸಿ ಬಾಲಕ-ಬಾಲಕಿಯರ ವಿಭಾಗ ಬಹುಮಾನಗಳು:

ಪ್ರಥಮ 5,000 ನಗದು ಹಾಗೂ ಪ್ರಶಸ್ತಿ, ದ್ವಿತೀಯ 4,000 ನಗದು ಹಾಗೂ ಟ್ರೋಫಿ, ದ್ವಿತೀಯ 3,000 ನಗದು ಹಾಗೂ ಟ್ರೋಫಿ, ತೃತೀಯ 3,000 ನಗದು ಹಾಗೂ ಟ್ರೋಫಿ, ಚತುರ್ಥ 2,000 ನಗದು ಹಾಗೂ ಟ್ರೋಫಿ.

ಪ್ರೌಢ ಶಾಲಾ ಬಾಲಕ-ಬಾಲಕಿಯರ ವಿಭಾಗ ಬಹುಮಾನಗಳು:

ಪ್ರಥಮ 5,000 ನಗದು ಹಾಗೂ ಪ್ರಶಸ್ತಿ, ದ್ವಿತೀಯ 3,000 ನಗದು ಹಾಗೂ ಟ್ರೋಫಿ, ತೃತೀಯ 2,000 ನಗದು ಹಾಗೂ ಟ್ರೋಫಿ, ಚತುರ್ಥ 1,000 ನಗದು ಹಾಗೂ ಟ್ರೋಫಿ.

ಹೆಚ್ಚಿನ ಮಾಹಿತಿಗಾಗಿ ರಾಜೇಶ್‌.ಪಿ: 9901098038, ಅಬ್ದುಲ್‌ ಹಮೀದ್‌ : 9449330658, ಫ್ರಾನ್ಸಿಸ್.ವಿ.ವಿ: 9449332283 ಸಂಪರ್ಕಿಸಿ.

More from the blog

ಲೋಕಸಭಾ ಚುನಾವಣೆ : ಮತಯಂತ್ರಗಳ ಕಮಿಷನಿಂಗ್‌ ಕಾರ್ಯ…. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಬಂಟ್ವಾಳ :ಮೊಡಂಕಾಪಿನಲ್ಲಿರುವ ಇನ್ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುವ ಮತಯಂತ್ರಗಳ ಕಮಿಷನಿಂಗ್‌ ಕಾರ್ಯವು ನಡೆಯಿತು. ಈ ಸಂದರ್ಭದಲ್ಲಿ...

ಯುವಮೋರ್ಚಾ ಬಂಟ್ವಾಳ ವತಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬಿ. ಸಿ ರೋಡಿನ ರಕ್ತೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ

ಯುವಮೋರ್ಚಾ ಬಂಟ್ವಾಳ ವತಿಯಿಂದ ನರೇಂದ್ರ ಮೋದಿ ಮತೊಮ್ಮೆ ಪ್ರಧಾನಿಯಾಗಲೆಂದು ರಕ್ತೇಶ್ವರಿ ದೇವಸ್ಥಾನ ಬಿ. ಸಿ ರೋಡಿನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಆಯತಪ್ಪಿ ಬಾವಿಗೆ‌ ಬಿದ್ದ ಮಹಿಳೆ… ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ

ಮಂಗಳೂರು: ಬಾವಿಯಿಂದ ನೀರು ಸೇದುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯೋರ್ವರನ್ನು ಗುರುವಾರ ಕದ್ರಿ ಅಗ್ನಿಶಾಮಕ ಠಾಣೆಯವರು ರಕ್ಷಿಸಿದ್ದಾರೆ ಬಿಕ್ಕರ್ನಕಟ್ಟೆ ಸಮೀಪದ ನಿವಾಸಿ ಟ್ರೆಸ್ಸಿ ಡಿಸೋಜಾ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟ ಮಹಿಳೆ. ಸಂಜೆ 5 ಗಂಟೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...