Tuesday, April 9, 2024

ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವೀ ಕ್ಷೇತ್ರದಲ್ಲಿ ಯಕ್ಷಗಾನ ತಾಳಮದ್ದಳೆ

ವಿಟ್ಲ: ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವೀ ಕ್ಷೇತ್ರದಲ್ಲಿ ವಿಟ್ಲ ಬಿಲ್ಲವ ಸಂಘ ಇದರ ಬೆಳ್ಳಿ ಹಬ್ಬದ 25 ನೇ ಕಾರ್ಯಕ್ರಮದ ಅಂಗವಾಗಿ ಶ್ರೀ ಚಾಮುಂಡೇಶ್ವರೀ ಯಕ್ಷಕೂಟ ಕಣಿಯೂರು ಇವರಿಂದ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ತಿಂಗಳ ಯಕ್ಷಗಾನ ತಾಳಮದ್ದಳೆ ಕೂಟದ ಉದ್ಘಾಟನಾ ಸಮಾರಂಭ ನಡೆಯಿತು.

 

ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ತಾಳಮದ್ದಳೆ ಕೂಟಕ್ಕೆ ಚಾಲನೆ ನೀಡಿದರು.

ಬೆಳ್ಳಿ ಹಬ್ಬ ಸಮಿತಿ ಸಂಭ್ರಮೋತ್ಸವ ಸಮಿತಿ ಯ ಅಧ್ಯಕ್ಷ ಡಾ| ಗೀತಾ ಪ್ರಕಾಶ್ ವಿಟ್ಲ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿಶ ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಕೃಷ್ಣ ಭಟ್ ಪನೆಯಡ್ಕ, ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಸೇವಾ ಟ್ರಸ್ಟ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಭಾಗವಹಿಸಿದ್ದರು.

ಬಳಿಕ ವಾಲಿ ಮೋಕ್ಷ -ಸುಗ್ರೀವ ಪಟ್ಟಾಭಿಷೇಕ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಸೂರ್ಯನಾರಾಯಣ ಭಟ್ ಕಣಿಯೂರು, ಗಣಪತಿ ಭಟ್ ಆನೆಕಲ್ಲು, ರವೀಂದ್ರ ಭಟ್ ಪದ್ಯಾಣ ,ಮದ್ದಳೆ-ಚೆಂಡೆಯಲ್ಲಿ ರಾಮದಾಸ್ ಶೆಟ್ಟಿ ದೇವಸ್ಯ, ಭೀಮ ಭಾರದ್ವಾಜ್ ಪೆರ್ನಡ್ಕ , ಮಾ| ಅದ್ವೈತ್ ಕನ್ಯಾನ ಸಹಕರಿಸಿದರು.

ಅರ್ಥಧಾರಿಗಳಾಗಿ ಉಂಡೆಮನೆ ಕೃಷ್ಣ ಭಟ್, ಪಕಳಕುಂಜ ಶ್ಯಾಮ ಭಟ್, ಶಂಕರ್ ಸಾರಡ್ಕ, ಜಯರಾಮ್ ಭಟ್ ದೇವಸ್ಯ, ರಾಜಗೋಪಾಲ್ ಕನ್ಯಾನ ಭಾಗವಹಿಸಿದ್ದರು.

More from the blog

ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ನಾರಿಶಕ್ತಿ ಮಹಿಳಾ ಸಮಾವೇಶ

ಬಂಟ್ವಾಳ: ನಾರಿ ಶಕ್ತಿ ಸಶಕ್ತರಾಗಬೇಕು ಎಂಬುದು ಮಹತ್ವದ ಕನಸು ಮತ್ತು ಪರಿಕಲ್ಪನೆಯಾಗಿದ್ದು, ರಾಜಕೀಯವಾಗಿ ಮಹಿಳೆಯರನ್ನು ಸಬಲೀಕರಣ ಮಾಡಿದ ಪಕ್ಷ ಬಿಜೆಪಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದ...

ವಿಕಸಿತ ಭಾರತ ಸಂಕಲ್ಪದೊಂದಿಗೆ ಗ್ರಾಮ, ಮನೆ, ಮನ ಅಭಿಯಾನ ಸಂಪರ್ಕಕ್ಕೆ ಶಾಸಕ ರಾಜೇಶ್ ನಾಯ್ಕ್ ಚಾಲನೆ

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸಬೇಕು ಎಂಬ ಯೋಚನೆಯಿಂದ ಶಾಸಕ ರಾಜೇಶ್ ನಾಯ್ಕ್ ಅವರು ವಿಕಸಿತ ಭಾರತ ಸಂಕಲ್ಪದೊಂದಿಗೆ ಗ್ರಾಮ ,ಮನೆ,...

ವೀರಕಂಬ ಗ್ರಾಮದ ಗ್ರಾಮದೈವ ಶ್ರೀ ಗಿಳಿಕಿಂಜತಾಯಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಗ್ರಾಮದೈವ ಶ್ರೀ ಗಿಳಿಕಿಂಜತಾಯಿ ದೇವಸ್ಥಾನದ ವರ್ಷವದಿ ಜಾತ್ರೆಯು ಊರ ಪರವೂರ ಭಕ್ತದಿಗಳ ಸೇರಿಗೆಯಲ್ಲಿ ವಿಜೃಂಭಣೆಯಿಂದ ಜರಗಿತು. ದಿನಾಂಕ 7-4-2024 ರ ರಾತ್ರಿ ಗಿಳಿಕಿಂಜ ಬಂಡಾರ ಮನೆಯಿಂದ ದೈವದ ಬಂಡಾರ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...