Saturday, April 6, 2024

ರಾಜ್ಯ ಮಟ್ಟದ ಬೆಲ್ಟ್ ರೆಸ್ಲಿಂಗ್ ನಲ್ಲಿ ವಿಠಲ ಪ.ಪೂ ಕಾಲೇಜಿನ ವರ್ಷಿತಾ.ಡಿ ತೃತೀಯ ಸ್ಥಾನ

ರಾಜ್ಯ ಮಟ್ಟದ ಬೆಲ್ಟ್ ರೆಸ್ಲಿಂಗ್ ನಲ್ಲಿ ವಿಠಲ ಪದವಿ ಪೂರ್ವ ಕಾಲೇಜಿನ ವರ್ಷಿತಾ.ಡಿ ತೃತೀಯ ಸ್ಥಾನ ಪಡೆದಿದ್ದಾರೆ.

ಚಿತ್ರದುರ್ಗದಲ್ಲಿ ನಡೆದ ಪದವಿ ಪೂರ್ವ ವಿಭಾಗದ ರಾಜ್ಯ ಮಟ್ಟದ ಬೆಲ್ಟ್ ರೆಸ್ಲಿಂಗ್ (35ಕೆ.ಜಿ)ನಲ್ಲಿ ವಿಠಲ ಪದವಿ ಪೂರ್ವ ಕಾಲೇಜಿನ ದ್ವಿತೀಯ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವರ್ಷಿತಾ.ಡಿ ತೃತೀಯ ಸ್ಥಾನ ಪಡೆದಿರುತ್ತಾಳೆ.

ಸಾಲೆತ್ತೂರು ಕೊಲ್ನಾಡು ಗ್ರಾಮದ ನಾಟೆಕಲ್ಲು ನಿವಾಸಿಯಾದ ಲೀಲಾವತಿ ಹಾಗೂ ಡೀಕಯ್ಯ ದಂಪತಿಗಳ ಪುತ್ರಿಯಾದ ಈಕೆ ಸಾಲೆತ್ತೂರು ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ರಾಘವೇಂದ್ರರವರ ತರಬೇತಿ ಹಾಗೂ ವಿಠಲ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀನಿವಾಸ ಗೌಡ ಇವರಿಂದ ಮಾರ್ಗದರ್ಶನ ಪಡೆದಿರುತ್ತಾಳೆ. ಇವಳಿಗೆ ವಿಠಲ ಎಜುಕೇಶನ್ ಸೊಸೈಟಿ, ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...