Friday, April 12, 2024

ವೃದ್ದೆಯ ಕುತ್ತಿಗೆಯಲ್ಲಿದ ಲಕ್ಷಾಂತರ ರೂ‌ ಮೌಲ್ಯದ ಚಿನ್ನದ ‌ಸರ ಕಳವು : ದೂರು ದಾಖಲು

ಬಂಟ್ವಾಳ: ಕೆಲಸ ಮುಗಿಸಿ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ವೃದ್ದೆಯೋರ್ವರ ಕುತ್ತಿಗೆಯಲ್ಲಿದ ಲಕ್ಷಾಂತರ ರೂ‌ ಮೌಲ್ಯದ ಚಿನ್ನದ ‌ಚೈನ್ ಕಳೆದುಹೋದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಭಂಡಾರಿಬೆಟ್ಟು ಎಂಬಲ್ಲಿ ಅ.12 ರಂದು ಸಂಜೆ ವೇಳೆ ನಡೆದಿದೆ.

ಮೀನಾಕ್ಷಿ ಭಂಡಾರಿಬೆಟ್ಟು ಎಂಬವರ ಕುತ್ತಿಗೆಯಿಂದ ಸುಮಾರು 1.50 ಲಕ್ಷ ಮೌಲ್ಯದ 4 ಪವನ್ ತೂಕ ದ ಚಿನ್ನದ ಸರ ಕಳವಾಗಿದೆ.

ಮೀನಾಕ್ಷಿ ಅವರು ಬಿಸಿರೋಡಿನಲ್ಲಿ ಮನೆಕೆಲಸ ಮುಗಿಸಿ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ.

ಕಳ್ಳಿಮಾರ್ ಅಂಗಡಿಯೊಂದರಿಂದ ಸಾಮಾಗ್ರಿಗಳನ್ನು ಖರೀದಿ ಮಾಡಿದ ಬಳಿಕ ಬಂಟ್ವಾಳಕ್ಕೆ ತೆರಳುವ ಸರ್ವೀಸ್ ರಿಕ್ಷಾದಲ್ಲಿ ತೆರಳಿದ್ದರು. ಆದ್ರೆ ರಿಕ್ಷಾದಲ್ಲಿ ಒಟ್ಟು ಹೊರ ಜಿಲ್ಲೆಯ ಅಪರಿಚಿತ ಮೂವರು ಮಹಿಳೆಯರಿದ್ದು, ರಿಕ್ಷಾದಲ್ಲಿ ಕುಳಿತು ಕೊಳ್ಳುವ ಮುನ್ನ ಓರ್ವ ಮಹಿಳೆ ರಿಕ್ಷಾದಿಂದ ಇಳಿದು ಮೀನಾಕ್ಷಿ ಅವರನ್ನು ಮಧ್ಯದಲ್ಲಿ ಕೂರಲು ಸೂಚಿಸಿದ ಹಿನ್ನೆಲೆಯಲ್ಲಿ ಅವರು ಮಧ್ಯದಲ್ಲಿ ಕುಳಿತಿದ್ದರು. ಬಳಿಕ ಮೀನಾಕ್ಷಿ ಅವರು ಭಂಡಾರಿಬೆಟ್ಟು ಮನೆಯ ಸಮೀಪ ಇಳಿದಾಗ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಾಣೆಯಾಗಿದ್ದು ಗಮನಕ್ಕೆ ಬಂದಿತ್ತು. ಕೂಡಲೇ ರಿಕ್ಷಾವನ್ನು ಫಾಲೋ ಮಾಡಿ ಹೋಗಿ ರಿಕ್ಷಾ ಚಾಲಕನನ್ನು ಕೇಳಿದಾಗ ರಿಕ್ಷಾದಲ್ಲಿ ಬಂಗಾರದ ಪತ್ತೆಯಾಗಿಲ್ಲ.

ಆದ್ರೆ ಅದಾಗಲೇ ರಿಕ್ಷಾದಲ್ಲಿದ್ದ ಮೂವರು ಮಹಿಳೆಯರು ಬೈಪಾಸ್ ನಲ್ಲಿ ಇಳಿದು ಕಾರ್ಕಳಕ್ಕೆ ತೆರಳುವ ಬಸ್ ನಲ್ಲಿ ತೆರಳಿದ್ದು, ಈ ಬಗ್ಗೆ ರಿಕ್ಷಾ ಚಾಲಕನಲ್ಲಿ ಮಾಹಿತಿ ಕೇಳಿದ್ದಾರೆ. ಮಹಿಳೆಯರೇ ರಿಕ್ಷಾದಲ್ಲಿ ಸರವನ್ನು ಎಗರಿಸಿರಬಹುದು ಎಂಬ ಸಂಶಯ ಮೂಡಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

More from the blog

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯ ನಕಲಿ ಸುದ್ದಿ ಪ್ರಕಟ : ಕ್ರಮ ಕೈಗೊಳ್ಳುವಂತೆ ಸುಬ್ರಹ್ಮಣ್ಯ ಕಾಂಗ್ರೆಸ್ ವತಿಯಿಂದ ಪೊಲೀಸ್ ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕೋಮು ಭಾವನೆಯ ಹೇಳಿಕೆ ನೀಡಿದ್ದಾರೆಂಬ ನಕಲಿ ಸುದ್ದಿಯನ್ನು ವಾಟ್ಸಾಪ್ ಗ್ರೂಪ್ ಗಳಲ್ಲಿ ಪ್ರಚಾರ ಮಾಡುತ್ತಿರುವವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುಬ್ರಹ್ಮಣ್ಯ ಕಾಂಗ್ರೆಸ್ ವತಿಯಿಂದ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ...

ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ"ದ ಅಂಗವಾಗಿ ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ...

ಲೋಕಸಭಾ ಚುನಾವಣೆಯ ಹಿನ್ನೆಲೆ : ಚಾರ್ಮಾಡಿಯ ಮೂವರು ಗಡಿಪಾರು

ಬೆಳ್ತಂಗಡಿ: ಚುನಾವಣ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಹಾಗೂ ಕೋಮು ಗಲಭೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇರುವ ಕಾರಣ ಮೂವರು ರೌಡಿಶೀಟರ್‌ಗಳನ್ನು ಧರ್ಮಸ್ಥಳ ಪೊಲೀಸರು ಗಡಿಪಾರು ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ನಿವಾಸಿಗಳಾದ...